ಆ್ಯಪ್ನಗರ

ಹರಪನಹಳ್ಳಿ: ಅಪಾರ ಮಳೆ, ಬೆಳೆ ಹಾನಿ, ಮನವಿಗೆ ಕೋರಿದ ರೈತರು

ಖಾತಾ ಬದಲಾವಣೆ ಆಗದೇ ಇರುವ ಜಮೀನು, ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆ ಹೊಂದಾಣಿಕೆ ಆಗದೇ ದೋಷವಿರುವ ರೈತರಿಗೆ ಮಾತ್ರ ಪಾವತಿಯಾಗಿಲ್ಲ. ಕೂಡಲೇ ರೈತರು ದಾಖಲೆ ಸರಿಪಡಿಸಿಕೊಂಡು ಅರ್ಜಿ ಸಲ್ಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Vijaya Karnataka Web 21 May 2022, 6:23 pm
ಹರಪನಹಳ್ಳಿ: ತಾಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ಅರಸಿಕೇರಿ, ತೆಲಿಗಿ ಹೋಬಳಿಯ ಸುತ್ತಮುತ್ತ ಭತ್ತದ ಬೆಳೆ ನಾಶವಾಗಿ ಬಹಳಷ್ಟು ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಶಾಸಕ ಕರುಣಾಕರರೆಡ್ಡಿ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದರು.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಸರಕಾರ ಪ್ರತಿ ಹೆಕ್ಟೇರ್‌ಗೆ ರೂ.25 ಸಾವಿರ ಪರಿಹಾರ ನಿಗದಿ ಮಾಡಿದೆ. ರೈತರು ಪಹಣಿ, ಆಧಾರ್ ಕಾರ್ಡ್‌, ಬ್ಯಾಂಕ್‌ ಖಾತೆಯ ದಾಖಲೆ ಪತ್ರಗಳನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು ಎಂದು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯ ರೈತರು ಮನವಿ ಮಾಡಿದರು.

269 ಎಕರೆ ಭತ್ತ, ತೋಟಗಾರಿಕೆ ಬೆಳೆ ನಷ್ಟವಾಗಿವೆ. 180 ಶಾಲೆಗಳು ಹಾನಿಯಾಗಿವೆ. ಅವುಗಳ ದುರಸ್ತಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಳ್ಳಾರಿ ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ತಡೆಗೆ ಅಬಕಾರಿ ಇಲಾಖೆ ಲಗಾಮು..!

ಉಪವಿಭಾಗಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ವಿವರವಾದ ಮಾಹಿತಿ ಪಡೆದುಕೊಂಡರು. ಹಾನಿಯ ಬಗ್ಗೆ ನಿಖರವಾದ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿದರು.

ಈ ವೇಳೆ ಕೆಲವು ರೈತರು ಕಳೆದ ವರ್ಷದ ಪರಿಹಾರ ಬಂದಿಲ್ಲ ಎಂದು ದೂರಿದರು. ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಮಾತನಾಡಿ, ಖಾತಾ ಬದಲಾವಣೆ ಆಗದೇ ಇರುವ ಜಮೀನು, ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆ ಹೊಂದಾಣಿಕೆ ಆಗದೇ ದೋಷವಿರುವ ರೈತರಿಗೆ ಮಾತ್ರ ಪಾವತಿಯಾಗಿಲ್ಲ. ಕೂಡಲೇ ರೈತರು ದಾಖಲೆ ಸರಿಪಡಿಸಿಕೊಂಡು ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.

ಯರಬಾಳು ಗ್ರಾಮದಲ್ಲಿ ಸೋಮನಗೌಡ ಪಾಟೀಲ್‌, ಹಗರಿ ಗುಡಿಹಳ್ಳಿಯಲ್ಲಿ ಎಂ.ಬಸಮ್ಮ ಅರಸೀಕೆರೆ ಹೋಬಳಿ ತವಡೂರು ಗ್ರಾಮದ ಯಲ್ಲಾಪುರದ ಗಂಗಮ್ಮ, ಎಂಎಂ ಹಾಲಯ್ಯ, ಪ್ರಕಾಶ್‌ ಅವರ ಮನೆಗಳು ಮತ್ತು ತವಡೂರು ತಾಂಡದ ನಾಗರಾಜ ನಾಯ್ಕ ಅವರ ಮನೆ ಕುಸಿದಿದೆ. ಹಿರೇಮೇಗಳಗೆರೆ ಗ್ರಾಮದ ರೈತ ಆನಂದ ಅವರ ಹೂವಿನ ಬೆಳೆ, ಉಚ್ಚಂಗಿದುರ್ಗ ಹಡಪದ ಸಿದ್ದೇಶ ಅವರ 4 ಎಕರೆ ರಾಗಿ ಬೆಳೆ ಜಲಾವೃತಗೊಂಡಿದೆ.

ಆರೋಗ್ಯ ಸೇವೆಯಲ್ಲಿ ಅವಿಭಜಿತ ಬಳ್ಳಾರಿ ರಾಷ್ಟ್ರಕ್ಕೆ ಪ್ರಥಮ! ಬಳ್ಳಾರಿ, ವಿಜಯನಗರಕ್ಕೆ 248 HWC ಮಂಜೂರು

ನಿಟ್ಟೂರು, ಬಸಾಪುರ, ತಾವರಗುಂದಿ, ಹಲುವಾಗಲು, ಗರ್ಭಗುಡಿ, ವಟ್ಲಹಳ್ಳಿ, ಕಡತಿ ಗ್ರಾಮಗಳಲ್ಲಿ ವ್ಯಾಪ್ತಿಯಲ್ಲಿ 80 ಎಕರೆ ಭತ್ತ ಜಲಾವೃತವಾಗಿದೆ, ತುಂಗಭದ್ರಾ ನದಿ ತೀರದಲ್ಲಿರುವ ಗ್ರಾಮಗಳ ಜನತೆಗೆ ನೆರೆಹಾವಳಿ ಭೀತಿ ಎದುರಾಗಿದೆ.

ಈ ಸಂದರ್ಭದಲ್ಲಿ ತಾಲೂಕಿನ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ಕೃಷಿ ಅಧಿಕಾರಿ ಮಂಜುನಾಥ್‌ ಗೊಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ