ಆ್ಯಪ್ನಗರ

ತುಂಬಿದ ತುಂಗಭದ್ರಾ: 18 ಕ್ರಸ್ಟ್‌ಗೇಟ್‌ಗಳಿಂದ ನೀರು ನದಿಗೆ

ನದಿಯ ಮಧ್ಯದಲ್ಲಿರುವ ಮರವೊಂದರಲ್ಲಿ ಸಿಲುಕಿಕೊಂಡ ಕೋತಿಗಳು ಹೊರ ಬರಲು ಪರದಾಡಿದವು. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಸಿಬ್ಬಂದಿ ಕೋತಿಗಳ ರಕ್ಷಣೆ ಮಂಗಳವಾರ ಬೆಳಗ್ಗೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Vijaya Karnataka Web 17 Aug 2020, 9:29 pm
ಹೊಸಪೇಟೆ (ಬಳ್ಳಾರಿ): ತುಂಗಭದ್ರಾ ಜಲಾಶಯದಿಂದ ಸೋಮವಾರ ಸಂಜೆ 18 ಕ್ರಸ್ಟ್‌ ಗೇಟ್ ಮೂಲಕ 44,507 ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಯಿತು.
Vijaya Karnataka Web ಟಿಬಿ ಡ್ಯಾಮ್‌
ಟಿಬಿ ಡ್ಯಾಮ್‌


2 ಅಡಿ ಎತ್ತರದಲ್ಲಿ 10 ಗೇಟ್ ಮೂಲಕ ಹಾಗೂ 1 ಅಡಿ ಎತ್ತರದಲ್ಲಿ 8 ಗೇಟ್ ಮೂಲಕ ನದಿಗೆ ನೀರನ್ನು ಹರಿ ಬಿಡಲಾಗಿದೆ‌.

ಜಲಾಶಯದಿಂದ ಸಾವಿರಾರು ಕ್ಯುಸೆಕ್ ನೀರು ಹರಿಬಿಟ್ಟ ಪರಿಣಾಮ ಇಪ್ಪೇತೇರಿ ಮಾಗಾಣಿ ತುಂಗಭದ್ರಾ ನದಿಯಲ್ಲಿ ಸೋಮವಾರ 20 ಹೆಚ್ಚು ಕೋತಿಗಳು ಸಿಲುಕಿಕೊಂಡಿದ್ದವು.

ನದಿಯ ಮಧ್ಯದಲ್ಲಿರುವ ಮರವೊಂದರಲ್ಲಿ ಸಿಲುಕಿಕೊಂಡ ಕೋತಿಗಳು ಹೊರ ಬರಲು ಪರದಾಡಿದವು. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಸಿಬ್ಬಂದಿ ಕೋತಿಗಳ ರಕ್ಷಣೆ ಮಂಗಳವಾರ ಬೆಳಗ್ಗೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನಿರಂತರ ಮಳೆಯಿಂದ ರೈತರು ಹೊಲಗಳಿಗೆ ಕಾಲಿಡಲೂ ಆಗದಂಥ ಪರಿಸ್ಥಿತಿ ಎದುರಾಗಿದ್ದರೆ, ಮತ್ತೊಂದೆಡೆ ನದಿ ತೀರದಲ್ಲಿ ಪ್ರವಾಹ ಏರಿಕೆಯಾಗುತ್ತಿರುವುದು ನದಿ ತೀರದ ನಿವಾಸಿಗಳಿಗೆ ತೀವ್ರ ಭೀತಿ ತಂದೊಡ್ಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ