ಆ್ಯಪ್ನಗರ

ಮನೆಯ ಮೇಲ್ಛಾವಣಿ ಕುಸಿತ: ಒಂದೇ ಕುಟುಂಬದ ಮೂವರ ದುರ್ಮರಣ

ಮನೆ ಕುಸಿದು ಒಂದೇ ಮನೆಯ ಮೂವರು ದುರ್ಮರಣವನ್ನಪ್ಪಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

Vijaya Karnataka Web 26 Aug 2019, 9:38 am
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾಡಂಗ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಕಚ್ಚಾ ಮನೆಯ ಮೇಲ್ಛಾವಣಿ ಕುಸಿತದಿಂದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
Vijaya Karnataka Web Death


ನಾಡಂಗ ಗ್ರಾಮದ ಖಾದರ್ ಬಾಷಾ ಎಂಬುವರ ಕಚ್ಚಾಮನೆಯು ಏಕಾಏಕಿ ಕುಸಿತ ಕಂಡಿದ್ದು, ಮನೆಯೊಳಗೆ ಮಲಗಿದ್ದ ಇಮಾಮ್ ಬೀ (45), ಹಸೀನಾ (25), ಇಮ್ರಾನ್ (3) ಮೃತಪಟ್ಟಿದ್ದಾರೆ. ಆಗಾಗ ಮಳೆ ಸುರಿದ ಪರಿಣಾಮ ಈ ಮನೆಯು ಶಿಥಿಲಾವ್ಯಸ್ಥೆಗೆ ತಲುಪಿದ್ದು, ಉಳಿದುಕೊಳ್ಳಲು ಸೂರಿಲ್ಲದೇ ಅದೇ ಮನೆಯಲ್ಲೇ ನಿನ್ನೆ ರಾತ್ರಿ ಈ ಮೂರು ಮಲಗಿಕೊಂಡಿದ್ದರು.

ಬದುಕುಳಿದ ನವಜಾತ ಶಿಶು

ಈ ಘಟನೆಯಲ್ಲಿ ೧೧ ವರ್ಷದ ಮೆಹಬೂಬ್ ರಾತ್ರಿ ಟಿ.ವಿ.ನೋಡುತ್ತಿದ್ದಾಗ ಮಣ್ಣಿನ ಮನೆ ಕುಸಿದು ಬಿದ್ದಿದ್ದು, ಗೋಡೆಯ ಅಂಚಿನಲ್ಲಿ ಮಲಗಿದ್ದರಿಂದ ಪಾರಾಗಿ ಮನೆಯಿಂದ ಹೊರಬಂದು ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾನೆ. ಯಾವುದೇ ಗಾಯಗಳಾಗಿಲ್ಲ. ಮಂಚದ ತೊಟ್ಟಿಲಿನಲ್ಲಿ ಮಲಗಿದ್ದ 36 ದಿನದ ಕೂಸು ಪವಾಡ ಸದೃಶವಾಗಿ ಬದುಕು ಳಿದಿದ್ದು ಬಳ್ಳಾರಿಯ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಕಳೆದ ಎರಡು ಮೂರು ದಿನಗಳಿಂದ ಸ್ವಲ್ಪ ಮಳೆಯಾಗಿದ್ದು. ಹಳೆಯ ಕಾಲದ ಮಣ್ಣಿನ ಮನೆಯಾಗಿದ್ದರಿಂದ ಮಳೆಗೆ ನೆನೆದು ಈ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಭೇಟಿ ನೀಡಿ 30 ಸಾವಿರ ರೂ. ತಾತ್ಕಾಲಿಕ ಪರಿಹಾರವಾಗಿ ನೀಡಿದರು. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಘಟನಾ ಸ್ಥಳಕ್ಕೆ ಎಸ್ಪಿ ಭೇಟಿ: ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಸಿಇಒ ಕೆ.ನಿತೀಶಕುಮಾರ, ಎಸಿ ರಮೇಶ್ ಕೋನರೆಡ್ಡಿ ಭೇಟಿ ನೀಡಿ ಘಟನೆಯ ಮಾಹಿತಿಯನ್ನು ಪಡೆದು ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಸಿರಗುಪ್ಪ ನಗರದ ತಾಲೂಕು ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯ ಸಜ್ಜಾ ಕುಸಿದು ಇಬ್ಬರು ಯುವಕರು ಮೃತಪಟ್ಟ ಘಟನೆ ಮಾಸುವ ಮುನ್ನ ಪುನಃ ಈ ಘಟನೆ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ