ಆ್ಯಪ್ನಗರ

ಅನಿವಾರ್ಯ ಬಂತೆಂದರೆ 'ಜಿಂದಾಲ್'‌ ಲಾಕ್‌‌ಡೌನ್‌: ಸಚಿವ ಶ್ರೀರಾಮುಲು

ರಾಜ್ಯದಲ್ಲಿ ಮೂರನೇ ಸ್ಟೇಜ್ ಗೆ ಕೊರೊನಾ ತಲುಪಿಲ್ಲ, 2 ನೇ ಹಂತದಲ್ಲಿದೆ. ಯಾಕೆ ಅಂದರೆ 10 ರೀತಿಯ ಟೀಮ್ ಮಾಡಿಕೊಂಡು ಟೆಸ್ಟ್ ಮಾಡಲಾಗುತ್ತಿದೆ. ಈ ವರದಿಯಲ್ಲಿ ಕಮ್ಯೂನಿಟಿ ವೈಸ್ ವೈರಸ್ ಹರಡಿಲ್ಲಾ ಅಂತ ನಮಗೆ ತಿಳಿದು ಬಂದಿದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

Vijaya Karnataka Web 27 Jun 2020, 1:36 pm
ಬಳ್ಳಾರಿ: ನನಗೂ ಜಿಂದಾಲ್ ವಿಚಾರವಾಗಿ ದೂರು ಬರುತ್ತಿವೆ‌. ಈ ವಿಚಾರ ಸಿಎಂ ಗಮನಕ್ಕೆ ತಂದಿದ್ದು, ಚರ್ಚೆ ನಡೆಸಲಾಗುತ್ತಿದೆ. ವರದಿ ರೆಡಿಯಾಗುತ್ತಿದೆ. ವರದಿ ನಮ್ಮ ಕೈಗೆ ಬಂದ ನಂತರ ನಾವು ಕ್ರಮ ಕೈಗೊಳ್ಳುತ್ತೇವೆ. ಅನಿವಾರ್ಯ ಬಂತೂ ಅಂದರೆ ನಾವು ಲಾಕ್ ಡೌನ್ ಗೂ ಹಿಂಜರಿಯುವುದಿಲ್ಲ ಎಂದು ಸಚಿವ ಶ್ರೀ ರಾಮುಲು ಹೇಳಿದ್ದಾರೆ.
Vijaya Karnataka Web jpg (71)


ಜಿಂದಾಲ್‌ನಲ್ಲಿ ಪಾಸಿಟಿವ್ ಕೇಸ್‌ಗಳು ಹೆಚ್ಚಳ ಸಂಬಂಧ ಮಾತನಾಡಿದ ಸಚಿವರು, ನಮಗೆ ಜನರ ಪ್ರಾಣ ಮುಖ್ಯ. ನಾವು ಕೆಲವು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನು ಎಸ್‌ಎಸ್‌ಎಲ್‌ಸಿ ಮಕ್ಕಳು ಇಂದಿನ ಕೊರೊನಾ ಸಮಯದಲ್ಲಿ ಧೈರ್ಯದಿಂದ ಪರೀಕ್ಷೆ ಬರೆಯುತ್ತಿದ್ದಾರೆ‌ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೇರೆ ಕೆಲ ರಾಜ್ಯಗಳಲ್ಲಿ ಪರೀಕ್ಷೆ ಮುಂದೂಡಿದ್ದಾರೆ. ರಾಜ್ಯದ ಎಲ್ಲಾ ಮಕ್ಕಳಿಗೆ ಒಳ್ಳೆಯದಾಗಲಿ ಎಂದಿದ್ದಾರೆ.

ರಾಜ್ಯದಲ್ಲಿ ಕೊರೊನಾ ಮೂರನೇ ಸ್ಟೇಜ್‌ಗೆ ತಲುಪಿಲ್ಲ!
ರಾಜ್ಯದಲ್ಲಿ ಮೂರನೇ ಸ್ಟೇಜ್ ಗೆ ಕೊರೊನಾ ತಲುಪಿಲ್ಲ, 2 ನೇ ಹಂತದಲ್ಲಿದೆ. ಯಾಕೆ ಅಂದರೆ 10 ರೀತಿಯ ಟೀಮ್ ಮಾಡಿಕೊಂಡು ಟೆಸ್ಟ್ ಮಾಡಲಾಗುತ್ತಿದೆ. ಈ ವರದಿಯಲ್ಲಿ ಕಮ್ಯೂನಿಟಿ ವೈಸ್ ವೈರಸ್ ಹರಡಿಲ್ಲಾ ಅಂತ ನಮಗೆ ತಿಳಿದು ಬಂದಿದೆ. ಕೆಲ ಕಡೆ ಹೇಗೆ ಬಂತೂ ಅಂತ ಕಂಡು ಹಿಡಿಯಲಾಗುತ್ತಿದೆ. ಕೆಲವೊಂದು ಜನರನ್ನ ಕಂಡುಹಿಡಿಯುವುದು ಕಷ್ಟ ಆಗುತ್ತಿದೆ. ಜನರು ಕೂಡ ಸಹಕಾರ ಮಾಡಬೇಕು. ಅಸಿಂಪ್ಟಮ್ಯಾಟಿಕ್‌‌ ಕೇಸ್ ಜಾಸ್ತಿ ಇದ್ದು, ಅವರನ್ನು ಕೆಲವು ಶಾದಿಮಹಲ್‌ಗಳಲ್ಲಿ ಕ್ವಾರೆಂಟೈನ್ ಮಾಡಲಾಗುತ್ತಿದೆ. ಅವರನ್ನು ಚೆಕ್ ಮಾಡಿದಾಗ ಪಾಸಿಟಿವ್ ಬಂದರೆ ಚಿಕಿತ್ಸೆ ಕೊಡುತ್ತಿದ್ದೇವೆ.

ರಾಮನಗರ: ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಮತ್ತೆ ಚಾಲನೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ