ಆ್ಯಪ್ನಗರ

ಬಳ್ಳಾರಿ: ಗುಡನ್ಯೂಸ್‌, 6 ಪಾಸಿಟಿವ್ ಕೇಸ್‌ನಲ್ಲಿ ಒಂದು ನೆಗೆಟಿವ್

ಬ್ಲಿಘಿ ಜಮಾತ್ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾಗಿದ್ದ 68 ಜನರನ್ನು ಪರೀಕ್ಷೆ ಮಾಡಲಾಗಿದೆ. ಮೂರು ದಿನದ ಹಿಂದೆ ಒಬ್ಬರ ರಿಪೋರ್ಟ್ ಮಾತ್ರ ಪಾಸಿಟಿವ್ ಬಂದಿತ್ತು. ಇದೀಗ ಉಳಿದ 67 ಜನರ ರಿಪೊರ್ಟ್ ನೆಗಟಿವ್ ಬಂದಿದೆ

Vijaya Karnataka Web 9 Apr 2020, 5:32 pm
ಬಳ್ಳಾರಿ: ಜಿಲ್ಲೆಯ ಕರೊನಾ ಖಚಿತ 6 ಜನರ ಆರೋಗ್ಯ ಸ್ಥಿರವಾಗಿದ್ದು, ಯಾರಿಗೂ ವೆಂಟಿಲೇಟರ್ ಬಳಸಿಲ್ಲ. ಸದ್ಯ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಇದರಲ್ಲಿರುವ ಒಬ್ಬರು ಸಂಪೂರ್ಣ ಗುಣಮುಖಗೊಳ್ಳುತ್ತಿದ್ದಾರೆ. ಅವರ ಫಲಿತಾಂಶದಲ್ಲಿ ನೆಗಟಿವ್ ಕೂಡ ಬಂದಿದೆ ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಹೇಳಿದ್ದಾರೆ.
Vijaya Karnataka Web ಕೊರೊನಾ
ಕೊರೊನಾ


ನಗರದಲ್ಲಿ ಸುದ್ದಿಗಾರರೊಂದಿಗೆ ನಕುಲ್‌ ಮಾತನಾಡಿದರು.

ಜಿಲ್ಲೆಯ ಕೊರೊನಾ ಪಾಸಿಟಿವ್ ಹೊಂದಿದ್ದ ಆರು ಜನರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಿದ್ದು, ಇದರಲ್ಲಿ ಒಬ್ಬರಿಗೆ ನೆಗೆಟಿವ್ ಬಂದಿದೆ. ಆದರೂ ಪ್ರೊಟೊಕಾಲ್ ಪ್ರಕಾರ ಇನ್ನೂ ಎರಡು ಬಾರಿ ಚೆಕ್ ಮಾಡಲಾಗುವುದು ಎಂದರು.

ಇದರ ಜತೆಗೆ ತಬ್ಲಿಘಿ ಜಮಾತ್ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾಗಿದ್ದ 68 ಜನರನ್ನು ಪರೀಕ್ಷೆ ಮಾಡಲಾಗಿದೆ. ಮೂರು ದಿನದ ಹಿಂದೆ ಒಬ್ಬರ ರಿಪೋರ್ಟ್ ಮಾತ್ರ ಪಾಸಿಟಿವ್ ಬಂದಿತ್ತು. ಇದೀಗ ಉಳಿದ 67 ಜನರ ರಿಪೊರ್ಟ್ ನೆಗಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಆದರೂ ಅವರನ್ನು ಹನ್ನೆರಡು ದಿನ ನಂತರ ಮತ್ತೆ ಪರೀಕ್ಷೆ ಮಾಡಲಾಗುವುದು. ಆಗಲೂ ನೆಗಟಿವ್ ಬಂದರೆ ಅವರನ್ನು ಕ್ವಾರಂಟೈನ್‌ನಿಂದ ರಿಲೀಸ್ ಮಾಡುತ್ತೇವೆ. ಸದ್ಯ ಅವರನ್ನ ವಿಂಗಡಿಸಿ ಬೇರೆ ಬೇರೆ ಹೋಟೇಲ್‌ಗಳಲ್ಲಿ ಇರಿಸಲಾಗಿದೆ ಎಂದರು.

ಅವರೆಲ್ಲರಿಗೂ ಎರಡು ಟವೆಲ್, ಮಾಸ್ಕ್, ಬಿಸ್ಕೆಟ್ಸ್, ಶಾಂಪೂ ಒಳಗೊಂಡ ಕಂಫರ್ಟ್ ಕಿಟ್ ಕೊಟ್ಟಿದ್ದೇವೆ. ಇದರಲ್ಲಿ ಕೆಲವರು ಮಸಾಲೆ ಪದಾರ್ಥದ ಅಡುಗೆ ಬೇಕೆನ್ನುತ್ತಿದ್ದಾರೆ. ದಾನಿಗಳ ಸಹಕಾರದಿಂದ ಅದನ್ನು ಪೂರೈಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಕುಲ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ