ಆ್ಯಪ್ನಗರ

ಹಂಪಿಗೆ ಜಮ್ಮು ಕಾಶ್ಮೀರ ನ್ಯಾಯಾಧೀಶ ಭೇಟಿ

ಜಮ್ಮು ಕಾಶ್ಮೀರದ ಹೈಕೋರ್ಟ್‌ ನ್ಯಾಯಾಧೀಶ ಸಂಜೀವ ಕುಮಾರ ಅವರು ಕುಟುಂಬ ಸಮೇತ ಹಂಪಿಗೆ ಬುಧವಾರ ಭೇಟಿ ನೀಡಿ ಸ್ಮಾರಕಗಳನ್ನು ವೀಕ್ಷಿಸಿದರು.

Vijaya Karnataka 15 Jun 2018, 3:42 pm
ಹೊಸಪೇಟೆ : ಜಮ್ಮು ಕಾಶ್ಮೀರದ ಹೈಕೋರ್ಟ್‌ ನ್ಯಾಯಾಧೀಶ ಸಂಜೀವ ಕುಮಾರ ಅವರು ಕುಟುಂಬ ಸಮೇತ ಹಂಪಿಗೆ ಬುಧವಾರ ಭೇಟಿ ನೀಡಿ ಸ್ಮಾರಕಗಳನ್ನು ವೀಕ್ಷಿಸಿದರು.
Vijaya Karnataka Web jammu and kashmir judge visits hampi
ಹಂಪಿಗೆ ಜಮ್ಮು ಕಾಶ್ಮೀರ ನ್ಯಾಯಾಧೀಶ ಭೇಟಿ


ಅವರು, ಶ್ರೀವಿರೂಪಾಕ್ಷೇಶ್ವರ ಸ್ವಾಮಿ ದೇಗುಲ, ಭುವನೇಶ್ವರಿ ಹಾಗೂ ಪಂಪಾಬಿಕೆ ದೇಗುಲದ ದರ್ಶನ ಪಡೆದ ಬಳಿಕ ವಿರೂಪಾಕ್ಷ ಬಜಾರ್‌, ಸಾಸಿವೆಕಾಳು ಗಣೇಶ, ಉಗ್ರ ನರಸಿಂಹ, ಬಡವಿಲಿಂಗ, ನೆಲಸ್ತರ ಶಿವಾಲಯ, ಅರಮನೆ ಆವರಣ, ಕಮಲ ಮಹಲ್‌, ಗಜಶಾಲೆ, ಹಜಾರರಾಮಚಂದ್ರ ದೇವಸ್ಥಾನ, ಮಹಾನವಮಿ ದಿಬ್ಬ, ರಾಣಿಯರಸ್ನಾನ ಗೃಹ ಹಾಗೂ ವಿಜಯ ವಿಠ್ಠಲ ದೇವಸ್ಥಾನಗಳ ಸ್ಮಾರಕದ ಸೊಬಗನ್ನು ಕಣ್ತುಂಬಿಕೊಂಡರು.

ಪ್ರವಾಸಿ ಮಾರ್ಗದರ್ಶಿ ಮಂಜುನಾಥಗೌಡ ಸ್ಮಾರಕಗಳ ಮಾಹಿತಿ ನೀಡಿದರು. ಈ ಸಂದಭÜರ್‍ದಲ್ಲಿ ಹಂಪಿ ಪೊಲೀಸ್‌ ಠಾಣೆಯ ಸಿಪಿಐ ಕೆ.ಜಿ ಗೋವಿಂದರಾಜ್‌, ಎಎಸ್‌ಐ ಬಸವರಾಜ್‌ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ