ಹೊಸಪೇಟೆ: ಭಾರತೀಯ ಮಹಿಳೆಯರು ಉಡುವ ಸೀರೆಗೆ ಮಾರುಹೋದ ಜಪಾನ್ನ ಪುರುಷರಿಬ್ಬರು ಹಂಪಿಯಲ್ಲಿ ಸೀರೆಯುಟ್ಟು ಸಂಭ್ರಮಿಸುತ್ತಿದ್ದಾರೆ.
ದೂರದಿಂದ ಈ ಜೋಡಿ ಸೀರೆಯುಟ್ಟ ನಾರಿಯರಂತೆ ಕಾಣುತ್ತಾರೆ. ಹತ್ತಿರ ಹೋಗಿನೋಡಿದಾಗ ಸೀರೆಯುಟ್ಟ ಪುರುಷರೆಂಬುದು ಗೊತ್ತಾಗುತ್ತಿತ್ತು.
ಹಂಪಿಯಲ್ಲಿ ಎರಡು ಸೀರೆಗಳನ್ನ ಖರೀದಿಸಿ ಉಟ್ಟುಕೊಂಡು ಹಂಪಿಯ ಸ್ಮಾರಕಗಳನ್ನು ವೀಕ್ಷಿಸುತ್ತಾ ಇವರು ಖುಷಿ ಪಡುತ್ತಿದ್ದಾರೆ. ಸೀರೆಯುಟ್ಟರೂ ನೊಕಿಯಾ ಮತ್ತು ಇಯಾನ ಎನ್ನುವ ಈ ಇಬ್ಬರು ಪುರುಷರು ಮಂಗಳಮುಖಿಯರ ರೀತಿ ಕಾಣುತ್ತಿಲ್ಲ.
ನಿಮಗೇಕೆ ಸೀರೆ ಇಷ್ಟ ಎಂದು ಕೇಳಿದಾಗ ಇಂಡಿಯನ್ ಕಲ್ಚರ್ ಮತ್ತು ಇಂಡಿಯನ್ ಡ್ರೆಸ್ಕೋಡ್ ತುಂಬಾ ಇಷ್ಟ ಎಂದು ಉತ್ತರಿಸುತ್ತಾರೆ. ಒಟ್ಟಿನಲ್ಲಿ ಭಾರತೀಯ ನಾರಿಯರ ಸೀರೆ ಉಟ್ಟು ಇವರು ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ.