ಆ್ಯಪ್ನಗರ

ಬಳ್ಳಾರಿ, ಹೊಸಪೇಟೆ, ನ್ಯೂಮೋನಿಯಾಕ್ಕೆ ನಲುಗಿದ ಕಂದಮ್ಮಗಳು

ವಿಮ್ಸ್‌ನಲ್ಲಿ ಪ್ರತಿನಿತ್ಯ 5-6 ಮಕ್ಕಳಲ್ಲಿ ನ್ಯೂಮೋನಿಯಾ. ವೈರಸ್‌. | ಮಕ್ಕಳಲ್ಲಿ ಡೆಂಗೆ, ಮಲೇರಿಯಾ, ಟೈಫಾಯ್ಡ್‌ ಜತೆಗೆ ನ್ಯೂಮೋನಿಯಾ ಆತಂಕ | ಕೊರೊನಾ ಆತಂಕ ತಗ್ಗುತ್ತಿದ್ದಂತೆ ಹೆಚ್ಚಾದ ಸಾಂಕ್ರಾಮಿಕ ರೋಗಗಳ ಭೀತಿ

Vijaya Karnataka Web 18 Sep 2021, 6:47 pm
Vijaya Karnataka Web ನ್ಯೂಮೋನಿಯಾ
ನ್ಯೂಮೋನಿಯಾ


ಬಳ್ಳಾರಿ:
ಗಣಿನಾಡು ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿಈಗ ಕೊರೊನಾ ಸೋಂಕಿನ ಆತಂಕಕ್ಕಿಂತ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ.

ಡೆಂಗೆ, ಮಲೇರಿಯಾ, ಟೈಫಾಯ್ಡ್‌ನಂತ ಕಾಯಿಲೆಗಳೊಂದಿಗೆ ಮಕ್ಕಳಿಗೆ ಅತೀ ಹೆಚ್ಚಾಗಿ ನ್ಯೂಮೋನಿಯಾ ರೋಗ ಕಾಡುತ್ತಿದ್ದು, ಪಾಲಕ ಪೋಷಕರಲ್ಲಿಆತಂಕ ಮೂಡಿಸಿದೆ.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರೊಂದಿಗೆ ಮಳೆ ಹೆಚ್ಚಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಹರಡಲು ಇನ್ನಷ್ಟು ಪೂರಕ ವಾತಾವರಣ ಸೃಷ್ಟಿಸಿದಂತಾಗಿದೆ. ಇದರಿಂದ ಅತೀ ಹೆಚ್ಚಾಗಿ ಮಕ್ಕಳು ಬಳಲುತ್ತಿದ್ದು, ಪಾಲಕ ಪೋಷಕರು ಮಕ್ಕಳ ಚಿಕಿತ್ಸೆಗಾಗಿ ಸರಕಾರಿ, ಖಾಸಗಿ ಆಸ್ಪತ್ರೆಗಳ ಎದುರು ಸರತಿ ಸಾಲಿನಲ್ಲಿನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಅದರಲ್ಲೂ ಚಿಕಿತ್ಸೆಗಾಗಿ ದಾಖಲಾಗುವ ಮಕ್ಕಳಲ್ಲಿ ಶೇ.50ರಷ್ಟು ಮಕ್ಕಳಲ್ಲಿ ನ್ಯೂಮೋನಿಯಾದಂತ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿದ್ದು ಕಂದಮ್ಮಗಳನ್ನು ನಲುಗುವಂತೆ ಮಾಡಿದೆ. ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿನ ಬೆಡ್‌ಗಳಲ್ಲಿ ಸದ್ಯ ಮಕ್ಕಳು ಹೆಚ್ಚಾಗಿ ಚಿಕಿತ್ಸೆ ಪಡೆಯುತ್ತಿದ್ದು, ಬೆಡ್‌ಗಳ ಕೊರತೆ ಎದುರಾಗುವಂತೆ ಮಾಡಿದೆ.

ಪ್ರತಿ ದಿನ 5-6 ನ್ಯೂಮೋನಿಯಾದಿಂದ ದಾಖಲು

ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದ್ದಂತೆ ನ್ಯೂಮೊನಿಯಾ ಕಂಡುಬರುತ್ತಿದ್ದು, ಮಕ್ಕಳು ಉಸಿರಾಟ, ಶ್ವಾಸಕೋಶ ತೊಂದರೆಯಿಂದ ಬಳಲುವಂತಾಗಿದೆ. ಮಳೆಗಾಲದ ಸಂದರ್ಭದಲ್ಲಿ ತಂಪು ವಾತಾವರಣ ಕಂಡುಬರುತ್ತಿರುವ ಹಿನ್ನೆಲೆ ನ್ಯೂಮೋನಿಯಾ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ.

ನಗರದ ವಿಮ್ಸ್‌ ಆಸ್ಪತ್ರೆಯಲ್ಲಿ ಜಿಲ್ಲೆಸೇರಿದಂತೆ ನಾನಾ ಜಿಲ್ಲೆ, ನೆರೆಯ ಆಂಧ್ರದಿಂದ ಪ್ರತಿದಿನ ಸುಮಾರು 40ಕ್ಕೂ ಅಧಿಕ ಮಕ್ಕಳು ಚಿಕಿತ್ಸೆಗೆ ದಾಖಲಾಗುತ್ತಿದ್ದು, ಇದರಲ್ಲಿ ಸುಮಾರು 20 ಮಕ್ಕಳಲ್ಲಿಆರ್‌ಎಸ್‌ವಿ ಬ್ರಾಂಕೋಲೈಟಿಸ್‌ ವೈರಸ್‌ ಕಾಣಿಸಿಕೊಳ್ಳುತ್ತಿದ್ದು, ಇದರಲ್ಲಿ5-6 ಮಕ್ಕಳಲ್ಲಿನ್ಯೂಮೋನಿಯಾ ವೈರಸ್‌ ಕಾಣಿಸಿಕೊಳ್ಳುತ್ತಿದೆ.

ಇದರಿಂದ ಡೆಂಗೆ, ಮಲೇರಿಯಾ, ಟೈಫಾಯ್ಡ್‌ನಂತ ಕಾಯಿಲೆ ಕಂಡುಬಂದು ಸೇರುವ ಮಕ್ಕಳಲ್ಲಿನ್ಯೂಮೋನಿಯಾದಿಂದ ಬಳಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಸಾಂಕ್ರಾಮಿಕ ರೋಗಗಳ ಅಬ್ಬರ

ಅವಿಭಜಿತ ಜಿಲ್ಲೆಯಲ್ಲಿಕಳೆದ ವರ್ಷಕ್ಕಿಂತ ಪ್ರಸಕ್ತ ಸಾಲಿನಲ್ಲಿಮಕ್ಕಳಿಗೆ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಿಸಿದೆ.

ಕಳೆದ ಒಂದೂವರೆ ವರ್ಷದಿಂದ ಮಹಾಮಾರಿ ಕೊರೊನಾ ಸೋಂಕಿನಿಂದ ನಲುಗಿದ ಜನತೆಗೆ ಸೋಂಕು ಹರಡುವಿಕೆ ಪ್ರಮಾಣ ತಗ್ಗುತ್ತಿದ್ದಂತೆ ನಿಟ್ಟೂಸಿರು ಬಿಟ್ಟಿದ್ದರು. ಕೊರೊನಾ ಸೋಂಕಿನ ಮೂರನೇ ಅಲೆ ಅತೀ ಹೆಚ್ಚಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎನ್ನುವ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಈಗ ಅದಕ್ಕೂ ಮುನ್ನ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಕಾಡುತ್ತಿದ್ದು, ಮಕ್ಕಳನ್ನು ರೋಗಗಳಿಂದ ರಕ್ಷಿಸಿಕೊಳ್ಳಲು ಪಾಲಕ, ಪೋಷಕರು ಇನ್ನಿಲ್ಲದ ಪರದಾಟ ನಡೆಸುತ್ತಿದ್ದಾರೆ.

ಮಾರಕ ಅಲ್ಲದಿದ್ದರೂ ನಿರ್ಲಕ್ಷ್ಯ ಸಲ್ಲದು

ಅವಿಭಜಿತ ಜಿಲ್ಲೆಯಲ್ಲಿಇತ್ತೀಚಿಗೆ 0-6 ತಿಂಗಳಳೊಳಗಿನ ಮಕ್ಕಳಲ್ಲಿ ಕಂಡುಬರುತ್ತಿರುವ ನ್ಯೂಮೋನಿಯಾ ಕಾಯಿಲೆ ಮಾರಕವಲ್ಲದಿದ್ದರೂ, ನಿರ್ಲಕ್ಷ್ಯ ಮಾಡದಂತೆ ಮಕ್ಕಳ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮಕ್ಕಳಲ್ಲಿ ಉಸಿರಾಟ, ಶ್ವಾಸಕೋಶ ಸಮಸ್ಯೆ ಎದುರಾಗುತ್ತಿದ್ದಂತೆ ಯಾವುದೇ ನಿರ್ಲಕ್ಷ್ಯ ಮಾಡದೇ ಕೂಡಲೇ ಮಕ್ಕಳ ವೈದ್ಯರನ್ನು ಸಂಪರ್ಕಿಸಬೇಕಿದೆ.

ಇದರಿಂದ ಕೂಡಲೇ ಮಕ್ಕಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದು ಮಕ್ಕಳ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.

ಯಾವ ವಯಸ್ಸಿನ ಮಕ್ಕಳಲ್ಲಿ ರೋಗ


0-1 ವರ್ಷದೊಳಗಿನ ಮಕ್ಕಳಲ್ಲಿ ಜ್ವರ, ಟೈಫಾಯ್ಡ್‌ನಂತ ಕಾಯಿಲೆಗಳು ಕಂಡು ಬರುತ್ತಿದೆ. 2 ವರ್ಷದೊಳಗಿನ ಮಕ್ಕಳಲ್ಲಿಆರ್‌ಎಸ್‌ವಿ ಬ್ರಾಂಕೋಲೈಟಿಸ್‌ ವೈರಸ್‌ ಹೆಚ್ಚಾಗಿ ಪತ್ತೆಯಾಗುತ್ತಿದೆ. ಅತೀ ಹೆಚ್ಚಾಗಿ 2-5 ವರ್ಷದೊಳಗಿನ ಮಕ್ಕಳಲ್ಲಿ ನ್ಯೋಮೋನಿಯಾ ಕಂಡುಬರುತ್ತದೆ. 0-1 ವರ್ಷದೊಳಗಿನ ಮಕ್ಕಳಿಗೆ ತಾಯಿ ಹಾಲು ನಿರಂತರವಾಗಿ ನೀಡಿದಲ್ಲಿ ಮಕ್ಕಳು ರೋಗಗಳಿಗೆ ತುತ್ತಾಗುವುದು ಅತೀ ಕಡಿಮೆಯಾಗಿರುತ್ತದೆ ಎನ್ನುತ್ತಾರೆ ವೈದ್ಯರು.


ಇತ್ತೀಚಿಗೆ ಮಕ್ಕಳಲ್ಲಿ ಡೆಂಗೆ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದರೊಂದಿಗೆ ಬ್ರಾಂಕೊಲೈಟಿಸ್‌ನಂತ ವೈರಸ್‌, ನ್ಯೂಮೋನಿಯಾ ಸಹ ಪತ್ತೆಯಾಗುತ್ತಿದೆ. 0-6 ತಿಂಗಳೊಳಗಿನ ಮಕ್ಕಳಿಗೆ ತಾಯಿ ಹಾಲು ನಿರಂತರವಾಗಿ ನೀಡಬೇಕು. ಸೊಳ್ಳೆಗಳಿಂದ ಮಕ್ಕಳನ್ನು ರಕ್ಷಿಸುವುದು ಸೇರಿ ನಾನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಇದರಿಂದ ಮಕ್ಕಳನ್ನು ರೋಗಗಳಿಂದ ರಕ್ಷಿಸಬಹುದಾಗಿದೆ. ಬ್ರಾಂಕೊಲೈಟಿಸ್‌, ನ್ಯೂಮೋನಿಯಾ ಕಂಡುಬಂದ ಕೂಡಲೇ ಯಾವುದೇ ಆತಂಕ ಪಡದೇ ಮಕ್ಕಳ ತಜ್ಞರನ್ನು ಸಂಪರ್ಕಿಸಬೇಕು.
- ಡಾ.ದುರ್ಗಪ್ಪ ಎಚ್‌ಒಡಿ ಮಕ್ಕಳ ವಿಭಾಗ ವಿಮ್ಸ್‌ ಬಳ್ಳಾರಿ.


ಜಿಲ್ಲೆಯಲ್ಲಿಇತ್ತೀಚಿಗೆ ಮಕ್ಕಳಲ್ಲಿವೈರಲ್‌ ಫಿವರ್‌ ನೊಂದಿಗೆ ನ್ಯೂಮೋನಿಯಾನಂತ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಹಂತ ಹಂತವಾಗಿ ಕಡಿಮೆಯಾಗುತ್ತಿವೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿ ಮಕ್ಕಳಲ್ಲಿಸಾಂಕ್ರಾಮಿಕ ರೋಗಗಳು ಕಂಡುಬರುತ್ತಿವೆ. ಆರ್‌ಎಸ್‌ವಿ ಬ್ರಾಂಕೊಲೈಟಿಸ್‌ ವೈರಸ್‌, ನ್ಯೂಮೋನಿಯಾ ಮಕ್ಕಳಲ್ಲಿಕಂಡುಬಂದಲ್ಲಿಯಾವುದೇ ಆತಂಕ ಪಡದೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ನೀಡಿಸಬೇಕು. ಆದರೆ ನ್ಯೂಮೋನಿಯಾ ಕಂಡುಬರುವ ಮಕ್ಕಳಲ್ಲಿಕೊರೊನಾ ಸೋಂಕು ಪತ್ತೆಯಾಗಿಲ್ಲ.
- ಡಾ.ಯೋಗಾನಂದ ರೆಡ್ಡಿ ಮಕ್ಕಳ ತಜ್ಞರು ಬಳ್ಳಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ