ಆ್ಯಪ್ನಗರ

ಕೋಟಿವೀರ ಆನಂದ್ ಸಿಂಗ್

ಇಲ್ಲಿನ ವಿಜಯನಗರ ವಿಧಾನಸಭೆ ಕ್ಷೇತ್ರದಿಂದ ಮಾಜಿ ಶಾಸಕ ಆನಂದ್ ಸಿಂಗ್ ಅವರು, ಗುರುವಾರ ಉಪವಿಭಾಗಾಧಿಕಾರಿ ಗಾರ್ಗಿ ಜೈನ್ ಅವರಿಗೆ ತಮ್ಮ ಸೂಚಕ ಎಲ್.ಸಿದ್ದನಗೌಡರ ಮೂಲಕ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದರು.

Vijaya Karnataka Web 20 Apr 2018, 12:00 am
ಹೊಸಪೇಟೆ: ಇಲ್ಲಿನ ವಿಜಯನಗರ ವಿಧಾನಸಭೆ ಕ್ಷೇತ್ರದಿಂದ ಮಾಜಿ ಶಾಸಕ ಆನಂದ್ ಸಿಂಗ್ ಅವರು, ಗುರುವಾರ ಉಪವಿಭಾಗಾಧಿಕಾರಿ ಗಾರ್ಗಿ ಜೈನ್ ಅವರಿಗೆ ತಮ್ಮ ಸೂಚಕ ಎಲ್.ಸಿದ್ದನಗೌಡರ ಮೂಲಕ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದರು.
Vijaya Karnataka Web kotiveera anand singh
ಕೋಟಿವೀರ ಆನಂದ್ ಸಿಂಗ್


ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಖಚಿತಪಡಿಸಿದ್ದು, ಬಿ-ಫಾರಂ ರಹಿತವಾಗಿ ನಾಮಪತ್ರ ಸಲ್ಲಿಸಲಾಗಿದೆ. ಎಲ್.ಸಿದ್ದನಗೌಡ ಪ್ರತಿಕ್ರಿಯಿಸಿ, ‘‘ಮಾಜಿ ಶಾಸಕ ಆನಂದ್ ಸಿಂಗ್ ಅವರ ಪರವಾಗಿ ಸೂಚಕನಾಗಿ ನಾಮಪತ್ರ ಸಲ್ಲಿಸಿರುವೆ. ಅವರು ಖುದ್ದು ನಾಮಪತ್ರ ಸಲ್ಲಿಸಲಿದ್ದಾರೆ.

ಆಸ್ತಿ ವಿವರ:ಮಾಜಿ ಶಾಸಕ ಆನಂದ್ ಸಿಂಗ್ ಅವರು 25 ಕೋಟಿ 91 ಲಕ್ಷದ 57 ಸಾವಿರದ 546 ರೂ. ಮೌಲ್ಯದ ಚರಾಸ್ತಿ ಹಾಗೂ 45ಕೋಟಿ 44 ಲಕ್ಷದ 90 ಸಾವಿರ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ಲಕ್ಷ್ಮೀ ಸಿಂಗ್ ಅವರು 12,73,06,690 ರೂ. ಮೌಲ್ಯದ ಚರಾಸ್ತಿ ಹಾಗೂ 27,95, 25000 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪುತ್ರಿಯರಾದ ವೈಷ್ಣವಿ ಹಾಗೂ ಯಶಸ್ವಿ ಕ್ರಮವಾಗಿ 52,02,009 ರೂ. ಮತ್ತು 66,24,250 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪುತ್ರ ಸಿದ್ದಾರ್ಥ 2,23,24,860 ರೂ. ಮೌಲ್ಯದ ಚರಾಸ್ತಿ ಹಾಗೂ 2 ಕೋಟಿ 5 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾಗಿ ನಾಮಪತ್ರದಲ್ಲಿ ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ