ಆ್ಯಪ್ನಗರ

ಲಕ್ಷ್ಮಿ ಕೈಹಿಡಿದ ಪಂಕ್ಚರ್‌

ಲಾರಿ, ಟ್ರ್ಯಾ ಕ್ಟರ್‌ ಚಕ್ರಗಳ ಟ್ಯೂಬ್‌ಗೆ ಪಂಕ್ಚರ್‌ ಹಾಕುವ ಮೂಲಕ ಮಹಿಳೆಯರು ಅಡುಗೆ ಮನೆ ಸೀಮಿತವಲ್ಲ ಎಂಬುವುದನ್ನು ಸಣಾಪುರ ಗ್ರಾಮದ ಡಿ.ಲಕ್ಷ್ಮಿ ತೋರಿಸಿದ್ದಾರೆ. ಇವರು ಪಂಕ್ಚರ್‌ ಹಾಕುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

Vijaya Karnataka 1 May 2018, 5:00 am
ಕಂಪ್ಲಿ : ಲಾರಿ, ಟ್ರ್ಯಾ ಕ್ಟರ್‌ ಚಕ್ರಗಳ ಟ್ಯೂಬ್‌ಗೆ ಪಂಕ್ಚರ್‌ ಹಾಕುವ ಮೂಲಕ ಮಹಿಳೆಯರು ಅಡುಗೆ ಮನೆ ಸೀಮಿತವಲ್ಲ ಎಂಬುವುದನ್ನು ಸಣಾಪುರ ಗ್ರಾಮದ ಡಿ.ಲಕ್ಷ್ಮಿ ತೋರಿಸಿದ್ದಾರೆ. ಇವರು ಪಂಕ್ಚರ್‌ ಹಾಕುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
Vijaya Karnataka Web BLR-29KMP3


ವಾಹನಗಳ ಟ್ಯೂಬ್‌ಗೆ ಪುರುಷರೇ ಪಂಕ್ಚರ್‌ ಹಾಕುವುದು ಹೆಚ್ಚು. ಆದರೆ ಡಿ.ಲಕ್ಷ್ಮಿ ಅವರು ನಾನು ಯಾರಿಗಿಂತ ಕಡಿಮೆ ಇಲ್ಲ ಎನ್ನುವಂತೆ ವಾಹನ ಚಕ್ರಗಳ ಟ್ಯೂಬ್‌ಗೆ ಪಂಕ್ಚರ್‌ ಹಾಕಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ.

ಮೊದಲು ಲಕ್ಷ್ಮಿ ಅವರ ತಂದೆ ದಿ.ವೀರೇಶಪ್ಪ ಪಂಕ್ಚರ್‌ ಅಂಗಡಿ ಮಾಡಿದ್ದರು. ಆಗ ಚಿಕ್ಕವಯಸ್ಸಿಲ್ಲಿ ಲಕ್ಷ್ಮಿ ತಂದೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಜತೆಗೆ ಪಂಕ್ಚರ್‌ ಹಾಕುವುದನ್ನೂ ಕಲಿತಿದ್ದರು. ಈಗ ಅದು ಸಹಾಯವಾಗಿದೆ. ಡೀಸೆಲ್‌ನಿಂದ ಚಾಲನೆಯಾಗುವ ಏರ್‌ ಕಂಪ್ರೇಶರ್‌ ಯಂತ್ರವಿದ್ದು, ವಾಹನಗಳ ಚಕ್ರಗಳಿಗೆ ಪಂಕ್ಚರ್‌ ಹಾಕುವುದು, ಚಕ್ರಗಳಿಗೆ ಗಾಳಿ ತುಂಬಿಸುವುದರಿಂದ ಬರುವ ಹಣದಿಂದ ಜೀವನ ನಡೆಸುತ್ತಿದ್ದಾರೆ.

ಲಕ್ಷ್ಮಿಯವರಿಗೆ ಮದುವೆಯಾಗಿದೆ. ಆದರೆ ಕೌಟುಂಬಿಕ ಕಾರಣದಿಂದ ಗಂಡನಿಂದ ದೂರವಾಗಿದ್ದಾರೆ. ಲಕ್ಷ್ಮಿ ಅವರ ಜತೆಗೆ ತಾಯಿ, ಇಬ್ಬರು ಪುತ್ರರು ಇದ್ದಾರೆ. ಮಕ್ಕಳನ್ನು ಶಾಲೆಗೆ ಸೇರಿಸಿದ್ದಾರೆ. ಈ ಕುರಿತು ಲಕ್ಷ್ಮಿ ಅವರನ್ನು ಮಾತನಾಡಿಸಿದಾಗ, ಹಿಂದೆ ಪಂಕ್ಚರ್‌ ಹಾಕುವುದರಿಂದ ದಿನವೂ 200 ರಿಂದ 400 ರೂ. ಸಂಪಾದಿಸುತ್ತಿದ್ದೆ. ಆದರೆ ಇತ್ತೀಚೆಗೆ ವಾಹನಗಳು ಬರುವುದು ಕಡಿಮೆಯಾಗಿವೆ. ದುಡಿಮೆ ಅಲ್ಪಸ್ವಲ್ಪವಾಗಿದೆ.

ಇದರಲ್ಲಿ ಯಂತ್ರಕ್ಕೆ ಇಂಧನ, ಪಂಕ್ಚರ್‌ ಸಾಮಗ್ರಿಗಳ ಖರ್ಚು ತೆಗೆಯಬೇಕು. ಉಳಿದ ಹಣದಿಂದ ಜೀವನ ನಡೆಸುತ್ತಿದ್ದೇವೆ ಎಂದು ಹೇಳುತ್ತಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ