ಆ್ಯಪ್ನಗರ

‘ಎಲ್‌ಎಲ್‌ಸಿ ಕಾಲುವೆಗೆ ಪೂರ್ಣ ನೀರು ಹರಿಸಿ’

ರಾಮಸಾಗರ ಬಳಿ ಒಡೆದಿರುವ ಎಲ್‌ಎಲ್‌ಸಿ ಕಾಲುವೆಯ ತಡೆಗೋಡೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಮೀಪದ ಓರ್ವಾಯಿ ರೈತರು ಬುಧವಾರ ಸಭೆ ನಡೆಸುವ ಮೂಲಕ ಸರಕಾರಕ್ಕೆ ಆಗ್ರಹಿಸಿದರು.

Vijaya Karnataka 6 Sep 2018, 5:00 am
ಎಮ್ಮಿಗನೂರು : ರಾಮಸಾಗರ ಬಳಿ ಒಡೆದಿರುವ ಎಲ್‌ಎಲ್‌ಸಿ ಕಾಲುವೆಯ ತಡೆಗೋಡೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಮೀಪದ ಓರ್ವಾಯಿ ರೈತರು ಬುಧವಾರ ಸಭೆ ನಡೆಸುವ ಮೂಲಕ ಸರಕಾರಕ್ಕೆ ಆಗ್ರಹಿಸಿದರು.
Vijaya Karnataka Web BLR-BLY05YMG 03


ರೈತ ಮುಖಂಡ ಎಸ್‌.ಜಿ.ರಾಮಲಿಂಗನಗೌಡ ಮಾತನಾಡಿ, ಕಾಲುವೆ ಒಡೆದು 15 ದಿನ ಕಳೆದಿವೆ. ಬೋರ್ಡ್‌ನ ಉನ್ನತ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಈಗ ಕಾಲುವೆಗೆ ಬಿಡುಗಡೆ ಮಾಡಿರುವ ನೀರು ಕೆಳಭಾಗದ ರೈತರಿಗೆ ತಲುಪಿಲ್ಲ. ರಾಜ್ಯ ಸರಕಾರ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಪಿ.ಬುಡನ್‌ಸಾಬ್‌ ಮಾತನಾಡಿ, ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳು ಕಾಲುವೆ ನೀರು ಮತ್ತು ಮಳೆಯಿಲ್ಲದೆ ಒಣಗುತ್ತಿವೆ. ನಷ್ಟದ ಭೀತಿ ಎದುರಾಗಿದೆ. ಎಕರೆಗೆ ಸುಮಾರು 20 ರಿಂದ30 ಸಾವಿರ ರೂ. ವೆಚ್ಚ ಮಾಡಿದ್ದೇವೆ. ಕಳೆದ 2, 3 ವರ್ಷಗಳಿಂದಲೂ ಜಿಲ್ಲೆಯ ರೈತರು ಮಳೆ ಇಲ್ಲದೆ ಬರಗಾಲಕ್ಕೆ ತುತ್ತಾಗಿದ್ದಾರೆ. ಸರಕಾರ ರೈತರ ನೋವುಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಸೆ.10 ರೊಳಗೆ ಕಾಮಗಾರಿ ಪೂರ್ಣಗೊಳಿಸಿ ಪೂರ್ಣ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡದಿದ್ದರೆ ರಸ್ತೆ ತಡೆ, ನೀರಾವರಿ ಕಚೇರಿಗೆ ಬೀಗ ಜಡಿದು ಉಪವಾಸ ಸತ್ಯಾಗ್ರಹ ಮಾಡುವುದಕ್ಕೆ ರೈತರು ಇದೇ ವೇಳೆ ತೀರ್ಮಾನಿಸಿದರು.

ರೈತ ಮುಖಂಡ ಓರ್ವಾಯಿ ಬಿ.ಹನುಮಂತಪ್ಪ, ವೆಂಕಟೇಶ್‌ ಎನ್‌.ವಿಶ್ವನಾಥ, ಬಾಲಣ್ಣ, ಯಂಕಪ್ಪ, ಪಟ್ಟಣಸೆರಗು ಪಾಂಡುರಂಗಪ್ಪ, ಶ್ರೀನಿವಾಸ, ಗೋವಿಂದ, ಡಾ.ನಾಗರಾಜ, ವೆಂಕಟೇಶ್‌ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರಿದ್ದರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ