ಆ್ಯಪ್ನಗರ

ಮೂವರು ಅಭ್ಯರ್ಥಿಗಳಿಗೆ ನೋಟಿಸು

ವಿಧಾನಸಭೆ ಚುನಾವಣೆ ಲೆಕ್ಕಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಮೂವರು ಅಭ್ಯರ್ಥಿಗಳಿಗೆ ನೋಟಿಸು ನೀಡಲಾಗಿದೆ ಎಂದು ಲೆಕ್ಕಪತ್ರವೀಕ್ಷ ಕ ಪೋಶೆಟ್ಟಿ ತಿಳಿಸಿದರು.

Vijaya Karnataka 2 May 2018, 5:00 am
ಹಗರಿಬೊಮ್ಮನಹಳ್ಳಿ : ವಿಧಾನಸಭೆ ಚುನಾವಣೆ ಲೆಕ್ಕಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಮೂವರು ಅಭ್ಯರ್ಥಿಗಳಿಗೆ ನೋಟಿಸು ನೀಡಲಾಗಿದೆ ಎಂದು ಲೆಕ್ಕಪತ್ರವೀಕ್ಷ ಕ ಪೋಶೆಟ್ಟಿ ತಿಳಿಸಿದರು.
Vijaya Karnataka Web BLR-BLY1HBH1


ಪಟ್ಟಣದ ತಹಸಿಲ್‌ ಕಚೇರಿಯಲ್ಲಿ ಅಭ್ಯರ್ಥಿಗಳ ಲೆಕ್ಕಪತ್ರ ಪರಿಶೀಲನೆ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಚುನಾವಣೆ ಪಾರದರ್ಶಕವಾಗಿ ನಡೆಯುವ ಹಿನ್ನೆಲೆಯಲ್ಲಿ ಲೆಕ್ಕಪತ್ರಗಳ ಮೇಲೆ ನಿಗಾ ಇರಿಸಲಾಗಿದೆ. ಅಭ್ಯರ್ಥಿಗಳು ಪ್ರತಿದಿನವೂ ಲೆಕ್ಕಪತ್ರ ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ಈವರೆಗೂ ಚುನಾವಣೆ ವೆಚ್ಚದ ಲೆಕ್ಕಪತ್ರ ಸಲ್ಲಿಸದ ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾದ ಲಿಂಗಪ್ಪ, ಸಿಪಿಐಎಂ(ಎಲ್‌)ನ ಸಂತೋಷ್‌ ಮತ್ತು ಆಲ್‌ಇಂಡಿಯಾ ಪಾರ್ವರ್ಡ್‌ ಬ್ಲಾಕ್‌ ಪಕ್ಷ ದ ವಿ.ಹನುಮಂತಪ್ಪ ಇವರಿಗೆ ನೋಟಿಸು ಜಾರಿ ಮಾಡಲಾಗಿದೆ. ಒಟ್ಟು 28ಲಕ್ಷ ರೂ.ಖರ್ಚುವೆಚ್ಚ ಮೀರುವ ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಗುವುದು. ಅಭ್ಯರ್ಥಿಗಳು ಸಲ್ಲಿಸುವ ಲೆಕ್ಕಪತ್ರವನ್ನು ಚುನಾವಣೆ ವಿಶೇಷ ತಂಡದ ಮಾಹಿತಿ ಆಧಾರವಾಗಿ ತಾಳೆ ನೋಡಲಾಗುವುದು. ತಪ್ಪು ಮಾಹಿತಿ ನೀಡಿದವರ ಲೆಕ್ಕಪತ್ರವನ್ನು ಚುನಾವಣೆ ಆಯೋಗ ನಿಗದಿಪಡಿಸಿದ ಧರದ ಆಧಾರವಾಗಿ ಬಳಕೆ ಮಾಡುವ ಪ್ರಚಾರ ಸಾಮಾಗ್ರಿಗಳ ಲೆಕ್ಕಹಾಕಲಾಗುವುದು. ಈ ವರೆಗೂ ಲೆಕ್ಕಪತ್ರದ ವಿವರ ಸಲ್ಲಿಸದ 3 ಅಭ್ಯರ್ಥಿಗಳು 48ಗಂಟೆಗಳೊಳಗಾಗಿ ಈ ವರೆಗಿನ ಖರ್ಚಿನ ಮಾಹಿತಿ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಚುನಾವಣಾಧಿಕಾರಿ ಎಂ.ಎಸ್‌.ಅಲ್ಲಾಬಕಷ್‌ ಮಾತನಾಡಿ, ಚುನಾವಣೆ ವೆಚ್ಚದ ಮೇಲೆ ವಿಡಿಯೋ ವಿಸುವಲ್‌ ತಂಡ ಪೂರ್ಣ ಮಾಹಿತಿ ಸಲ್ಲಿಸಲಬೇಕು. ಚುನಾವಣೆ ಪ್ರಚಾರ, ಮೆರವಣಿಗೆ ವೇಳೆ ಅಭ್ಯರ್ಥಿಗಳ ಖರ್ಚಿನ ವಿವರವನ್ನು ಪ್ರತ್ಯಕ್ಷ ನವಾಗಿ ಪರಿಶೀಲಿಸಿ ಸಲ್ಲಿಸಬೇಕು ಎಂದರು. ನೀತಿ ಸಂಹಿತೆ ಪಾಲನೆ ತಂಡದ ಮುಖ್ಯಸ್ಥ ಮಲ್ಲನಾಯ್ಕ, ಸಿಪಿಐ ರಾಮಣ್ಣ ಸಾವಳಗಿ, ಚುನಾವಣೆ ಲೆಕ್ಕಪತ್ರ ಸಹಾಯಕ ವೀಕ್ಷ ಕ ಡಕಣಾನಾಯ್ಕ, ಚುನಾವಣೆ ಸಿಬ್ಬಂದಿ ಕೊಟ್ರೇಶ್‌, ರಾಘವೇಂದ್ರ, ತಿಪ್ಪೇಸ್ವಾಮಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ