ಬಳ್ಳಾರಿ: ಲಾರಿಯೊಂದು ಬೈಕ್ಗೆ ಡಿಕ್ಕಿಹೊಡೆದ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಇಲ್ಲಿನ ಡಾ.ರಾಜ್ ರಸ್ತೆಯ ತಾರಾನಾಥ ಆರ್ಯುವೇದ ಆಸ್ಪತ್ರೆ ಮುಂಭಾಗದಲ್ಲಿ ಭಾನುವಾರ ನಡೆದಿದೆ.
ತಾಲೂಕಿನ ಜಾನೆಕುಂಟೆ ಗ್ರಾಮದ ನಿವಾಸಿ ಮಮತ (25) ಮೃತ ಮಹಿಳೆ. ಬೈಕ್ ಅನ್ನು ಲಾರಿಯು ಓವರ್ಟೆಕ್ ಮಾಡಿ ಡಿಕ್ಕಿಹೊಡೆದ ಪರಿಣಾಮ ಮುಂದಿನ ಚಕ್ರಗಳಲ್ಲಿ ಬಿದ್ದಿದ್ದಾರೆ. ಸಂಚಾರಿ ನಿಯಂತ್ರಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.