ಆ್ಯಪ್ನಗರ

‘ಯುವಕರಿಂದ ಭವ್ಯ ಭಾರತ ನಿರ್ಮಾಣ ಸಾಧ್ಯ’

ನನಗಲ್ಲ ನಿಮಗೆ ಎನ್ನುವ ಸಂದೇಶ ಸಾರುವುದು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ. ನಮ್ಮಲ್ಲಿ ಹಲವಾರು ಬಣ್ಣ, ಜಾತಿ, ಭಾಷೆ, ಪ್ರಾದೇಶಿಕತೆಯ ಭಿನ್ನತೆ ಇದ್ದರೂ ನಾವೆಲ್ಲರೂ ಒಂದೇ ಭಾವನೆಯಿಂದ ಐಕ್ಯತೆಯನ್ನು ಮೆರೆಯುತ್ತಿದ್ದೇವೆ. ಇದು ವಿಶ್ವಕ್ಕೆ ಮಾದರಿಯಾಗಿದೆ ಎಂದು ಬಳ್ಳಾರಿಯ ಮುಖಂಡ ವೆಂಕಟೇಶ್‌ ಪ್ರಸಾದ್‌ ಹೇಳಿದರು.

Vijaya Karnataka 1 Mar 2019, 4:41 pm
ಬಳ್ಳಾರಿ : ನನಗಲ್ಲ ನಿಮಗೆ ಎನ್ನುವ ಸಂದೇಶ ಸಾರುವುದು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ. ನಮ್ಮಲ್ಲಿ ಹಲವಾರು ಬಣ್ಣ, ಜಾತಿ, ಭಾಷೆ, ಪ್ರಾದೇಶಿಕತೆಯ ಭಿನ್ನತೆ ಇದ್ದರೂ ನಾವೆಲ್ಲರೂ ಒಂದೇ ಭಾವನೆಯಿಂದ ಐಕ್ಯತೆಯನ್ನು ಮೆರೆಯುತ್ತಿದ್ದೇವೆ. ಇದು ವಿಶ್ವಕ್ಕೆ ಮಾದರಿಯಾಗಿದೆ ಎಂದು ಬಳ್ಳಾರಿಯ ಮುಖಂಡ ವೆಂಕಟೇಶ್‌ ಪ್ರಸಾದ್‌ ಹೇಳಿದರು.
Vijaya Karnataka Web majestic india can be built by young people
‘ಯುವಕರಿಂದ ಭವ್ಯ ಭಾರತ ನಿರ್ಮಾಣ ಸಾಧ್ಯ’


ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಷ್ಟ್ರೀಯ ಯೋಜನಾ ಕೋಶ ಮತ್ತು ವಿಎಸ್‌ಕೆಯುಬಿ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತಾಶ್ರಯದಲ್ಲಿ ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್‌ ಸರಕಾರಿ ಪ್ರಥಮ ದರ್ಜೆ ಕಾಲೇಜ್‌(ಸ್ವಾಯತ್ತ)ನಲ್ಲಿ ರಾಷ್ಟ್ರಮಟ್ಟದ ಏಳನೇ ದಿನದ ರಾಷ್ಟ್ರೀಯ ಭಾವೈಕತಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕಾರ್ಯಕ್ರಮ ಭಾವೈಕ್ಯತೆಯಿಂದ ಕೂಡಿದೆ. ಯುವಕರಿಂದ ಸದೃಢ ದೇಶ ಕಟ್ಟುವ ಕೆಲಸವಾಗಲಿ. ನಮ್ಮ ನಡೆ ಹಳ್ಳಿಗಳ ಕಡೆ. ಗ್ರಾಮಗಳ ಅಭಿವೃದ್ಧಿ ಮುಖ್ಯವಾಗಿದೆ ಎಂದರು.

ರಾಜ್ಯ ಎನ್‌ಎಸ್‌ಎಸ್‌ ಅನುಷ್ಠಾನ ಅಧಿಕಾರಿ ಪೂರ್ಣಿಮಾ ಜೋಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಅಬ್ದುಲ್‌ ಮುತಾಲಿಬ್‌ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಕಾಲೇಜಿನ ಮಾಜಿ ಪ್ರಾಂಶುಪಾಲ ಗಂಗಣ್ಣ, ವೀರಶೇಖರ್‌ ರೆಡ್ಡಿ, ವೆಂಕಟೇಶ್‌ ರೆಡ್ಡಿ, ತಾರಾನಾಥ್‌ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಸೈಯದ್‌ ಅತ್ತರ್‌ ಪಾಥೀಮಾ, ರಾಧಾ ಕೃಷ್ಣನ್‌, ನಿವೃತ್ತ ಪ್ರಾಂಶುಪಾಲ ವೆಂಕಟೇಶುಲು, ಕೆಯುಡಿ ಎನ್‌ಎಸ್‌ಎಸ್‌ ಅಧಿಕಾರಿ ನಾಗೇಶ ಬಿ.ಎಸ್‌, ವಿಕ್ರಮಸಿಂಹ ವಿಶ್ವವಿದ್ಯಾಲಯದ ಎಂ. ವೆಂಕಟ್‌, ಉಪನ್ಯಾಸಕರಾದ ಶ್ರೀನಿವಾಸ ರೆಡ್ಡಿ, ಕುಂಚಮ ನರಸಿಂಹಲು, ಡಾ.ಹನುಮೇಶ್‌ ವೈದ್ಯ. ಜನಾರ್ಧನ ರೆಡ್ಡಿ, ಪಂಚಾಕ್ಷ ರಿ ಕಲ್ಯಾಣಬಸವ, ಕೊಟ್ರಪ್ಪ, ಕಾವಲ್ಲಯ್ಯ, ಗುರುಬಸವರಾಜ, ಶಾಲಿನಿ, ಶಿಲ್ಪ ಕುಲಕರ್ಣಿ, ಜ್ಞಾನ ಪ್ರಸೂನಾಂಬ, ಗಂಗಾಶಿರಿಷ, ಶರಣಪ್ಪ, ಸುಂಕಣ್ಣ.ಟಿ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ