ಆ್ಯಪ್ನಗರ

'ಬಳ್ಳಾರಿಯಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ': ಎಚ್ಚರವಿರುವಂತೆ ಸಚಿವ ಆನಂದ್‌ ಸಿಂಗ್‌ ಮನವಿ!

ಕೊರೊನಾ ಪಾಸಿಟಿವ್ ಬಂದಾಗ ಚಿಕಿತ್ಸೆಯನ್ನೂ ಬಳ್ಳಾರಿಯಲ್ಲಿ ತೆಗೆದುಕೊಂಡರು ಅಷ್ಟೇ, ಬೆಂಗಳೂರಿನಲ್ಲಿ ತೆಗೆದುಕೊಂಡರು ಅಷ್ಟೇ, ಎಲ್ಲಿ ಹೋದರೂ ಒಂದೇ ಚಿಕಿತ್ಸೆ, ಸೋಂಕಿನ ಬಗ್ಗೆ ಹೆದರಿಕೆ ಬೇಡ, ಹೆದರಿಕೆಯಿಂದಲೇ ಸಾಕಷ್ಟು ಜನ ಸಾಯುತ್ತಿದ್ದಾರೆ, ಆತ್ಮಸ್ಥೈರ್ಯ ಮುಖ್ಯ , ಎದೆ ಗುಂದಬಾರದು ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

Vijaya Karnataka Web 15 Aug 2020, 1:48 pm
ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈಗಾಗಲೇ ಸಮುದಾಯಕ್ಕೆ ಹರಡಿದೆ ಈ ಬಗ್ಗೆ ನಿರ್ಲಕ್ಷ್ಯ ವಹಿಸದೇ ಸಾರ್ವಜನಿಕರು, ಎಚ್ಚರದಿಂದಿರಬೇಕು ಎಂದು ಸಚಿವ ಆನಂದ್ ಸಿಂಗ್ ಹೇಳಿದರು. ನಗರದ ಎಸ್ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೊರೊನಾ ಸೊಂಕು ವಿಶೇಷವಾಗಿ ನಗರದಲ್ಲಿ ಕಂಡುಬರುತ್ತಿದೆ, ಗ್ರಾಮಾಂತರ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿದೆ.
Vijaya Karnataka Web 70049641 (1)


ಕೊರೊನಾ ಪಾಸಿಟಿವ್ ಬಂದಾಗ ಚಿಕಿತ್ಸೆಯನ್ನೂ ಬಳ್ಳಾರಿಯಲ್ಲಿ ತೆಗೆದುಕೊಂಡರು ಅಷ್ಟೇ, ಬೆಂಗಳೂರಿನಲ್ಲಿ ತೆಗೆದುಕೊಂಡರು ಅಷ್ಟೇ, ಎಲ್ಲಿ ಹೋದರೂ ಒಂದೇ ಚಿಕಿತ್ಸೆ, ಸೋಂಕಿನ ಬಗ್ಗೆ ಹೆದರಿಕೆ ಬೇಡ, ಹೆದರಿಕೆಯಿಂದಲೇ ಸಾಕಷ್ಟು ಜನ ಸಾಯುತ್ತಿದ್ದಾರೆ, ಆತ್ಮಸ್ಥೈರ್ಯ ಮುಖ್ಯ , ಎದೆ ಗುಂದಬಾರದು ಎಂದರು.

ಅವ್ಯವಸ್ಥೆ ಬಗ್ಗೆ ಗರಂ ಆದ ಸಚಿವರು!
ವಿಮ್ಸ್ ಆಸ್ಪತ್ರೆಗೆ ಹೋದವರು ಮರಳಿ ಬದುಕಿ ಬರುತ್ತಿಲ್ಲ. ಈ ಬಗ್ಗೆ ಸಾಕಷ್ಟು ಜನ ಸಾರ್ವಜನಿಕರು ದೂರು ನೀಡುತ್ತಿದ್ದು ಕೂಡಲೇ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಹಾಗೂ ಆರೋಗ್ಯ ಸಿಬ್ಬಂದಿಯವರು ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಆದೇಶ ನೀಡುವಂತೆ ಸಚಿವರಿಗೆ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಹಾಗೂ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಮನವಿ ಮಾಡಿದರು, ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸಿಂಗ್ ಈ ಸಂಬಂಧ ಪ್ರತ್ಯೇಕ ಸಭೆ ಮಾಡೋಣ ಎಂದು ಹೇಳಿದರು.

ಇನ್ನೂ ಕೋವಿಡ್ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಇತರೆ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ನೆಗೆಟಿವ್ ವರದಿ ತಂದಲ್ಲಿ ಮಾತ್ರ ದಾಖಲು ಮಾಡಿಕೊಳ್ಳುತ್ತೇವೆ ಸಾರ್ವಜನಿಕರಿಗೆ ಹೇಳುತ್ತಿದ್ದು, ಇದರಿಂದ ಬೇರೆ ರೋಗಿಗಳಿಗೆ ತಕ್ಷಣವಾಗಿ ಚಿಕಿತ್ಸೆ ಪಡೆಯಲು ತೊಂದರೆಗೆ ಒಳಗಾಗುತ್ತಿದ್ದಾರೆಂದು ಸಚಿವರ ಗಮನಸೆಳೆದಿದ್ದು ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಸಿಂಗ್ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ