ಆ್ಯಪ್ನಗರ

ಬಿಎಸ್‌ವೈ ಜೈಲಿಗೆ ಹೋಗಿದ್ರೂ ಸಿಎಂ ಅಭ್ಯರ್ಥಿಯಲ್ವ: ಡಿಕೆಶಿ

ಅಕ್ರಮ ಗಣಿಗಾರಿಕೆ ಮಾಡಿದವರಿಗೆ ಮನ್ನಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌, ಆ ಬಗ್ಗೆ ಚರ್ಚಿಸಲಾಗಿದೆ. ಯಾವ ಆರೋಪವೂ ಸಾಬೀತಾಗಿಲ್ಲ. ನನ್ನ ಮೇಲೂ ಆರೋಪ ಬಂದಿತ್ತು ಎಂದರು.

Vijaya Karnataka Web 4 Feb 2018, 2:56 pm
ಹೊಸಪೇಟೆ: ಅಕ್ರಮ ಗಣಿಗಾರಿಕೆ ಮಾಡಿದವರಿಗೆ ಮನ್ನಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌, ಆ ಬಗ್ಗೆ ಚರ್ಚಿಸಲಾಗಿದೆ. ಯಾವ ಆರೋಪವೂ ಸಾಬೀತಾಗಿಲ್ಲ. ನನ್ನ ಮೇಲೂ ಆರೋಪ ಬಂದಿತ್ತು. ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಅವರನ್ನು ಸಿಎಂ ಅಭ್ಯರ್ಥಿ ಮಾಡಿದ್ದಾರೆ ಅಲ್ವಾ ಎಂದು ಹೇಳಿದರು.
Vijaya Karnataka Web minister shivakumar talk about ticket from congress
ಬಿಎಸ್‌ವೈ ಜೈಲಿಗೆ ಹೋಗಿದ್ರೂ ಸಿಎಂ ಅಭ್ಯರ್ಥಿಯಲ್ವ: ಡಿಕೆಶಿ


ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿ ರಾಜ್ಯಕ್ಕೆ ಆಗಮಿಸಿ ವಿಜಯನಗರ ಸಾಮ್ರಾಜ್ಯದ ಭೂಮಿಯಿಂದ ಚುನಾವಣೆ ಪ್ರಚಾರ ಪ್ರಾರಂಭಿಸುತ್ತಾರೆ. ಐದು ವರ್ಷ ನುಡಿದಂತೆ ನಡೆದಿದ್ದೇವೆ. ಬಳ್ಳಾರಿ ಬಗ್ಗೆ ರಾಹುಲ್‌ ಅವರಿಗೆ ಗೌರವವಿದೆ. ಸೋನಿಯಾ ಗಾಂಧಿ ಇಲ್ಲಿ ಸ್ಪರ್ಧಿಸಿದ್ದರು. ಅತಿಹೆಚ್ಚು ಅನುದಾನ ನೀಡಿದ್ದರು. ಕಷ್ಟಕಾಲದಲ್ಲಿ ಬಳ್ಳಾರಿ ಜನ ಕೈಹಿಡಿದರು. ನಾಲ್ಕು ದಿನ ಹೈಕ ಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ. ಪ್ರವಾಸದ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದರು.

ಬಳ್ಳಾರಿ ಜಿಲ್ಲೆಯ ‌ಮೂವರು ಶಾಸಕರು ಕಾಂಗ್ರೆಸ್‌ಗೆ ಬಂದಿದ್ದಾರೆ. ಯಾವ ಕಂಡಿಷನ್ ಇಲ್ಲದೇ ಪಕ್ಷಕ್ಕೆ ಬಂದಿದ್ದಾರೆ. ಯಾರಿಗೂ ಟಿಕೆಟ್ ಆಶ್ವಾಸನೆ ನೀಡಿಲ್ಲ. ಕಂಪ್ಲಿ ಶಾಸಕ ಸುರೇಶ್ ಬಾಬು ನನ್ನ ಸ್ನೇಹಿತ. ಪಕ್ಷಕ್ಕೆ ಬರೋ ವಿಚಾರ ಗೊತ್ತಿಲ್ಲ ಎಂದು ಹೇಳಿದರು.

ಊರಿಗೆ ಹೋದಾಗ ಗ್ರಾಮ ದೇವರಿಗೆ ಭೇಟಿ ಕೊಡುವುದು ಪದ್ಧತಿ. ಹೀಗಾಗಿ ರಾಹುಲ್ ದೇವಸ್ಥಾನಕ್ಕೆ ಹೋಗುತ್ತಾರೆ. ಇದಕ್ಕೆ ರಾಜಕೀಯ ಬಣ್ಣ ಬೇಡ . ಈಗ ಯಾರ ಟಿಕೆಟ್ ಬಗ್ಗೆ ಮಾಹಿತಿ ಇಲ್ಲ. ‌ಟಿಕೆಟ್ ವಿಚಾರದಲ್ಲಿ ನಾನು ಫೈನಲ್ ಅಲ್ಲ, ಪರಮೇಶ್ವರ ಅವರು ಪೈನಲ್ ಅಲ್ಲ. ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ ರಾಹುಲ್ ಪ್ರವಾಸ.. ಟಿಕೆಟ್ ವಿಚಾರ ಚರ್ಚೆ ಮಾಡಲ್ಲ ಎಂದರು. ಸಚಿವ ಸಂತೋಷ್ ಲಾಡ್, ಶಾಸಕರಾದ ಈ. ತುಕಾರಾಂ, ಬಿ. ನಾಗೇಂದ್ರ, ಎಸ್. ಭೀಮಾ ನಾಯ್ಕ, ಮಾಜಿ ಶಾಸಕ ಆನಂದ್ ಸಿಂಗ್ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ