Please enable javascript.ಬಿತ್ತನೆ,ಮುಂಗಾರು ಚುರುಕು; ಬಿತ್ತನೆ ಬೀಜ ವಿತರಣೆಗೆ ಸಿದ್ಧತೆ - monsoon sharply; preparing for seed distribution - Vijay Karnataka

ಮುಂಗಾರು ಚುರುಕು; ಬಿತ್ತನೆ ಬೀಜ ವಿತರಣೆಗೆ ಸಿದ್ಧತೆ

Vijaya Karnataka 23 May 2018, 5:00 am
Subscribe

ತಾಲೂಕಾದ್ಯಂತ ಉತ್ತಮ ಮುಂಗಾರು ಆರಂಭಗೊಂಡಿದ್ದು, ಬಿತ್ತನೆಗಾಗಿ ಭೂಮಿ ಹದಗೊಳಿಸಿಕೊಂಡ ರೈತರಲ್ಲಿ ಸಂತಸ ಮನೆ ಮಾಡಿದೆ. ಮತ್ತೊಂದೆಡೆ ಚೋರನೂರು ಹೋಬಳಿಯ ಬಂಡ್ರಿಯಲ್ಲಿ ಈ ಬಾರಿ ಹೆಚ್ಚುವರಿ ಪ್ರತ್ಯೇಕ ಬೀಜ ವಿತರಣೆ ಕೇಂದ್ರ ತೆರೆಯದಿರಲು ಇಲಾಖೆ ನಡೆಸಿದ ಚಿಂತನೆ ಈಭಾಗದ ರೈತರ ಚಿಂತೆಗೆ ಕಾರಣವಾಗಿದೆ.

monsoon sharply preparing for seed distribution
ಮುಂಗಾರು ಚುರುಕು; ಬಿತ್ತನೆ ಬೀಜ ವಿತರಣೆಗೆ ಸಿದ್ಧತೆ
ಸಂಡೂರು ; ತಾಲೂಕಾದ್ಯಂತ ಉತ್ತಮ ಮುಂಗಾರು ಆರಂಭಗೊಂಡಿದ್ದು, ಬಿತ್ತನೆಗಾಗಿ ಭೂಮಿ ಹದಗೊಳಿಸಿಕೊಂಡ ರೈತರಲ್ಲಿ ಸಂತಸ ಮನೆ ಮಾಡಿದೆ. ಮತ್ತೊಂದೆಡೆ ಚೋರನೂರು ಹೋಬಳಿಯ ಬಂಡ್ರಿಯಲ್ಲಿ ಈ ಬಾರಿ ಹೆಚ್ಚುವರಿ ಪ್ರತ್ಯೇಕ ಬೀಜ ವಿತರಣೆ ಕೇಂದ್ರ ತೆರೆಯದಿರಲು ಇಲಾಖೆ ನಡೆಸಿದ ಚಿಂತನೆ ಈಭಾಗದ ರೈತರ ಚಿಂತೆಗೆ ಕಾರಣವಾಗಿದೆ.

ಮೇ 25 ರಿಂದ ರೋಹಿಣಿ ಮಳೆ ಆಗಮನವಾಗಲಿದ್ದು, ಹೈ.ಜೋಳ ಬಿತ್ತನೆ ಚುರುಕುಗೊಳ್ಳಲಿದೆ. ರೈತರಿಗೆ ಬಿತ್ತನೆ ಬೀಜದ ಕೊರತೆ ಕಾಡದಂತೆ ಕೃಷಿ ಇಲಾಖೆ ಬಿತ್ತನೆ ಬೀಜದ ಅಗತ್ಯತೆಯ ಗುರಿ ಸಿದ್ಧಪಡಿಸಿದೆ.

ಎಷ್ಟಿದೆ ಬೇಡಿಕೆ?: ಸಂಡೂರು ಹೋಬಳಿಯಲ್ಲಿ ಹೈ.ಜೋಳ-7 ಕ್ವಿಂ. ತೊಗರಿ-35 ಕ್ವಿಂ. ಹೆಸರು-2 ಕ್ವಿಂ. ನವಣೆ-5 ಕ್ವಿಂ. ಮೆಕ್ಕೆಜೋಳ-557 ಕ್ವಿಂ. ಸಜ್ಜೆ-13 ಕ್ವಿಂ. ಸೂರ್ಯಕಾಂತಿ-5 ಕ್ವಿಂ. ಸೇಂಗಾ -50 ಕ್ವಿಂ. ಚೋರನೂರು ಹೋಬಳಿಯಲ್ಲಿ ಹೈ.ಜೋಳ-85 ಕ್ವಿಂ. ಭತ್ತ-75 ಕ್ವಿಂ. ತೊಗರಿ-72 ಕ್ವಿಂ. ನವಣೆ-10 ಕ್ವಿಂ. ಮೆಕ್ಕೆಜೋಳ-680 ಕ್ವಿಂ. ಸಜ್ಜೆ-20 ಕ್ವಿಂ. ಸೇಂಗಾ-380 ಕ್ವಿಂ. ತೋರಣಗಲ್ಲು ಹೋಬಳಿಯಲ್ಲಿ ಹೈ.ಜೋಳ-10 ಕ್ವಿಂ. ಭತ್ತ 150 ಕ್ವಿಂ. ತೊಗರಿ-10 ಕ್ವಿಂ. ಹೆಸರು-1 ಕ್ವಿಂ. ನವಣೆ-30 ಕ್ವಿಂ. ಮೆಕ್ಕೆಜೋಳ-65 ಕ್ವಿಂ. ಸಜ್ಜೆ -19 ಕ್ವಿಂ. ಸೂರ್ಯಕಾಂತಿ -6 ಕ್ವಿಂ. ಸೇಂಗಾ -450 ಕ್ವಿಂ. ಬೀಜದ ಬೇಡಿಕೆಗೆ ಜಿಲ್ಲಾ ಮಟ್ಟದ ಕಚೇರಿಗೆ ಮನವಿ ಸಲ್ಲಿಸಲಾಗಿದೆ.

ಚಿಂತೆಗೆ ರೈತರು: ಕಳೆದ ಬಾರಿ ಚೋರನೂರು ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ 63 ಹಳ್ಳಿಗಳಿಗೆ ಬೀಜ ವಿತರಣೆ ಕಷ್ಟ ಸಾಧ್ಯವೆಂದು ಪರಿಗಣಿಸಿ, ಈ ಭಾಗದ ರೈತರು ಮತ್ತು ಜನ ಪ್ರತಿನಿಧಿಗಳ ಒತ್ತಾಯದ ಮೇರೆಗೆ ಹೋಬಳಿಯ ಬಂಡ್ರಿಯಲ್ಲಿ ಪ್ರತ್ಯೇಕ ಬೀಜ ವಿತರಣೆ ಕೇಂದ್ರ ತೆರೆಯಲಾಗಿತ್ತು. ಸತತ ಎರಡು ತಿಂಗಳ ಕಾಲ ತೆರೆದ ಬೀಜ ವಿತರಣೆ ಕೇಂದ್ರದಲ್ಲಿ ಹೋಬಳಿ ಕೇಂದ್ರಕ್ಕೆ ಮೀರಿದ ವಹಿವಾಟು ನಡೆದಿತ್ತು. ಲೆಕ್ಕ ಪತ್ರ ನಿರ್ವಹಣೆಯ ತೊಡಕಿಗೆ ಅಂಜಿದ ಇಲಾಖೆ ಸಿಬ್ಬಂದಿ ಪ್ರಸಕ್ತ ಸಾಲಿನಲ್ಲಿ ಬಂಡ್ರಿಯಲ್ಲಿ ಬೀಜ ವಿತರಣೆ ಕೇಂದ್ರ ತೆರೆಯದಿರಲು ನಿರ್ಧರಿಸಿದೆ. ಹೀಗಾಗಿ ನಿಡಗುರ್ತಿ, ಕಾಟಿನಕಂಬ, 73 ಹುಲಿಕುಂಟೆ, ಗಿರೇನಹಳ್ಳಿ, ಉತ್ತರಮಲೈ, ಕೋಡಿಹಳ್ಳಿ, ಮಲ್ಲಾಪುರ, ಕೊಂಡಾಪುರ, ಶ್ರೀರಾಮಶೆಟ್ಟಿಹಳ್ಳಿ, ಹುಚ್ಚೇನಹಳ್ಳಿ, ಸೋಮಲಾಪುರ ಸೇರಿ ಹೋಬಳಿ ಕೇಂದ್ರದಿಂದ 20 ಕಿ.ಮೀ.ಗೂ ಹೆಚ್ಚು ದೂರದ ಗ್ರಾಮಗಳ ರೈತರಿಗೆ ಬೀಜ ಖರೀದಿಸಿ ಸಾಗಣೆ ಮಾಡುವುದು ಸವಾಲಾಗಿ ಪರಿಣಮಿಸಿದೆ.

ಚೋರನೂರಿನಿಂದ ಈ ಗ್ರಾಮಗಳಿಗೆ ಅಗತ್ಯ ಬಸ್‌ ಸೇರಿ ಯಾವುದೇ ಸಾರಿಗೆ ಸೌಲಭ್ಯವಿಲ್ಲ. ರೈತರು ಆಟೊಗಳನ್ನು ಬಾಡಿಗೆ ಪಡೆದು ಬೀಜ ಸಾಗಣೆ ವೆಚ್ಚ ಹೆಚ್ಚಿಸಿಕೊಂಡು ತೊಂದರೆಗೀಡಾಗುವ ಸಾಧ್ಯತೆ ಹೆಚ್ಚಿದೆ.

--------
ಕಳೆದ ವರ್ಷ ಬಂಡ್ರಿ ಬೀಜ ವಿತರಣೆ ಕೇಂದ್ರದಲ್ಲಿ 18-20 ಗ್ರಾಮಗಳ ರೈತರು ಬಿತ್ತನೆ ಬೀಜ ಖರೀದಿಸುತ್ತಿದ್ದರು. ಪ್ರತಿ ದಿನ 1.50 ಯಿಂದ 2 ಲಕ್ಷ ರೂ ವರೆಗೆ ವಹಿವಾಟು ನಡೆದಿತ್ತು. ಇದೀಗ ಕೇಂದ್ರ ತೆರೆಯದಿರಲು ಇಲಾಖೆ ನಿರ್ಧರಿಸಿದ್ದು, ರೈತ ವಿರೋಧಿ ನೀತಿಯಾಗಿದೆ. ಕೇಂದ್ರ ತೆರೆಯುವುದರಿಂದ ರೈತರಿಗಾಗುವ ಅನುಕೂಲ ಕುರಿತು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸುತ್ತೇವೆ.

- ಕೆ.ನಾಗರಾಜ, ಗ್ರಾ.ಪಂ.ಸದಸ್ಯ, ಬಂಡ್ರಿ.

-------

ಮೇ 25 ರಿಂದ ರೋಹಿಣಿ ಮಳೆ ಆರಂಭವಾಗಲಿದ್ದು, ಬಿತ್ತನೆ ಚುರುಕುಗೊಳ್ಳುವ ಸಲುವಾಗಿ ಅಗತ್ಯ ಬೀಜದ ಬೇಡಿಕೆ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಕಳೆದ ಬಾರಿ ಚೋರನೂರು ಹೋಬಳಿಯ ಬಂಡ್ರಿಯಲ್ಲಿ ಹೆಚ್ಚುವರಿ ಬೀಜ ವಿತರಣೆ ಕೇಂದ್ರ ತೆರೆದಿದ್ದು ನಿಜ. ಸಿಬ್ಬಂದಿ ಕೊರತೆ, ಲೆಕ್ಕ ಪತ್ರ ನಿರ್ವಹಣೆಯ ತೊಡಕಿನಿಂದಾಗಿ ಈಬಾರಿ ಬಂಡ್ರಿಯಲ್ಲಿ ಬೀಜ ವಿತರಣೆ ಕೇಂದ್ರ ಆರಂಭಿಸುವುದಿಲ್ಲ.

- ಗೌರಮ್ಮ ಮುಕುಂದರಾವ್‌, ಎಡಿಎ, ಸಂಡೂರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ