ಆ್ಯಪ್ನಗರ

‘ಸಂಪಾಯಿತಲೇ ಪರಾಕ್‌’ ಅಂತು ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿ

15 ಅಡಿ ಎತ್ತರದ ಬಿಲ್ಲನ್ನು ಏರಿ, ಕೆಲವು ಕ್ಷಣ ಆಕಾಶದತ್ತ ಶೂನ್ಯ ದಿಟ್ಟಿಸಿ. ''ಸದ್ದಲೇ...'' ಎಂದಾಗ ಇಡೀ ಭಕ್ತ ಸಮೂಹದ ಸದ್ದು ಅಡಗಿ ಸೂಜಿಮನೆ ಬಿದ್ದರೂ ಕೇಳಿಸುವಷ್ಟು ಮೌನ ಆವರಿಸಿತು.

Vijaya Karnataka Web 12 Feb 2020, 11:35 am
ಹೂವಿನಹಡಗಲಿ: ನಾಡಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪ್ರಸಕ್ತ ವರ್ಷದ ಕಾರಣಿಕದ ದೈವವಾಣಿ. ಸುಕ್ಷೇತ್ರದ ಡೆಂಕನ ಮರಡಿಯಲ್ಲಿ ನಾಡಿನ ನಾನಾ ಕಡೆಯಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಭವಿಷ್ಯವಾಣಿ ಮಂಗಳವಾರ ಸಂಜೆ ನೆಲ, ಮುಗಿಲುದ್ದಕ್ಕೂ ಅನುರಣಿಸಿತು.
Vijaya Karnataka Web Mylara lingeshwara karnika


ಧರ್ಮಕರ್ತ ಒಡೆಯರ್‌ ಅವರಿಂದ ಭಂಡಾರದ ಆಶೀರ್ವಾದ ಪಡೆದ ಗೊರವಪ್ಪ, ಸಂಪ್ರದಾಯ ಮತ್ತು ಪರಂಪರೆಯ ಸಂಕೇತವಾಗಿರುವ 15 ಅಡಿ ಎತ್ತರದ ಬಿಲ್ಲನ್ನು ಏರಿ, ಕೆಲವು ಕ್ಷಣ ಆಕಾಶದತ್ತ ಶೂನ್ಯ ದಿಟ್ಟಿಸಿ. ''ಸದ್ದಲೇ...'' ಎಂದಾಗ ಇಡೀ ಭಕ್ತ ಸಮೂಹದ ಸದ್ದು ಅಡಗಿ ಸೂಜಿಮನೆ ಬಿದ್ದರೂ ಕೇಳಿಸುವಷ್ಟು ಮೌನ ಆವರಿಸಿತು. ಈ ಸಂದರ್ಭದಲ್ಲಿ ''ಸಂಪಾಯಿತಲೇ ಪರಾಕ್‌'' ಎಂಬ ದೈವವಾಣಿ ನುಡಿದ ಗೊರವಪ್ಪ ಅವರು ಕೆಳಕ್ಕೆ ಬಿದ್ದರು.

ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಶಾಸಕರಾದ ಪಿ.ಟಿ. ಪರಮೇಶ್ವರ್‌ ನಾಯ್ಕ, ಅರುಣ್‌ ಕುಮಾರ್‌ ಪೂಜಾರ್‌ ಹಾಜರಿದ್ದರು.

‘ಕಬ್ಬಿಣದ ಸರಪಳಿ ಹರಿತಲೇ ಪರಾಕ್‌!’: ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕದ ನುಡಿ

ನಾನಾ ಅರ್ಥ ವಿವರಣೆ:
ಪ್ರಸ್ತುತ ಕಾರಣಿಕ ಕುರಿತು ಜಾತ್ರೆಗೆ ಆಗಮಿಸಿದ್ದ ಭಕ್ತರು ಹಾಗೂ ಇತರರು ನಾನಾ ರೀತಿಯಲ್ಲಿ ವಿಶ್ಲೇಷಿಸಿದರು. ಈ ಬಾರಿಯ ಕಾರಣಿಕದ ದೈವವಾಣಿ ''ಸಂಪಾಯಿತವೇ ಪರಾಕ್‌'' ಎಂಬುಗು ''ಅಭಿವೃದ್ಧಿಯ ಸಂಕೇತ''. ಕೃಷಿ, ರಾಜಕೀಯ, ಸಾಮಾಜಿಕ ಸೇರಿ ಇತರ ಎಲ್ಲ ಕ್ಷೇತ್ರಗಳೂ ಸಮಗ್ರವಾಗಿ ಪ್ರಗತಿ ಕಾಣಲಿವೆ. ವಿಶೇಷವಾಗಿ ಮಳೆ ಸಮೃದ್ಧಿಯಾಗಿ ಬೆಳೆ ಸೊಂಪಾಗಿ ಬೆಳೆಯಬಹುದು'' ಎಂದು ವಿಶ್ಲೇಷಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ