ಆ್ಯಪ್ನಗರ

ರೂಪಾಂತರ ಕೊರೊನಾಗೆ ಭಯ ಬೇಡ, ಎಚ್ಚರಿಕೆಯಿರಲಿ: ಸಚಿವ ಆನಂದ್ ಸಿಂಗ್

ರೂಪಾಂತರ ಕೊರೊನಾಗೆ ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ, ಸರಿಯಾಗಿ ಕೊರೊನಾ ಗೈಡ್ ಲೈನ್ಸ್ ಗಳನ್ನು ಪಾಲನೆ ಮಾಡಬೇಕು. ಬಳ್ಳಾರಿಗೆ ಬ್ರಿಟನ್ ನಿಂದ 15ಜನರು ಬಂದಿದ್ದು ಅವರ ಬಗ್ಗೆ ನಿಗಾ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿದ್ದಾರೆ.

Vijaya Karnataka Web 23 Dec 2020, 1:15 pm
ಬಳ್ಳಾರಿ: ಕೋವಿಡ್ ಹಾಗೂ ರೂಪಾಂತರ ಕೊರೊನಾಗೆ ಸಂಬಂಧಿಸಿದಂತೆ ‌ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ. ಸ್ಯಾನಿಟೈಸರ್, ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿ ಮಾಡಿ. ಬಳ್ಳಾರಿಗೆ ಬ್ರೀಟನ್ ನಿಂದ 15ಜನರು ಬಂದಿದ್ದು, ಕೋವಿಡ್ ನಿಯಮಾನುಸಾರ ಅವರಿಗೆ ಕ್ವಾರಂಟೈನ್ ಹಾಗೂ ಇನ್ನೀತರ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿದ್ದಾರೆ.
Vijaya Karnataka Web ಆನಂದ್ ಸಿಂಗ್


ನಗರದ ಸರಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್ ಸ್ಥಿತಿಗತಿ ಹಾಗೂ ರೂಪಾಂತರ ಕೊರೊನಾ ಕುರಿತು ಚರ್ಚೆ ಮಾಡಲು ಬಂದಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರಕಾರದ ಗೈಡ್ ಲೈನ್ಸ್ ಅನುಸಾರ ಕ್ರಮವಹಿಸಲಾಗುವುದು ಎಂದರು.
ಬಳ್ಳಾರಿ ಜಿಲ್ಲೆ ವಿಭಜನೆಗೆ ವಿರೋಧ; ಹೋರಾಟಗಾರರಿಂದ ಸಚಿವ ಆನಂದ್ ಸಿಂಗ್ ಭೇಟಿ

ಶಾಲೆಗಳ ಓಪನ್‌ ಮಾಡುವುದಕ್ಕೆ ಸಂಬಂಧಿಸಿದಂತೆ, ಮಕ್ಕಳ ಭವಿಷ್ಯ, ಕೋವಿಡ್ ಹಾಗೂ ರೂಪಾಂತರ ಕೊರೊನಾ ಕಣ್ಣೆದುರಿಗೆ ಬಂದಿದ್ದು, ಎಲ್ಲರೂ ಅಭಿಪ್ರಾಯಗಳನ್ನು ಆಲಿಸಿ ಸರಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.
ಕೋವಿಡ್ ರೂಪಾಂತರ ಭೀತಿ: ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸಿದ ಸರ್ಕಾರ!

ಹಳೆಯ ವಿಮ್ಸ್ ಅಪರೇಷನ್ ಥಿಯೇಟರ್ ಡೆಮಾಲಿಷ್ ಮಾಡಿ ಡಿಎಂಎಫ್‌ ಅಡಿ 7ಕೋಟಿ ರೂ. ಒದಗಿಸಿ ಕಾಮಗಾರಿ ಆರಂಭಿಸಲಾಗುವುದು. ಬಳ್ಳಾರಿ ವಿಭಜನೆ ವಿರುದ್ಧದ ಹೋರಾಟಗಾರರೊಂದಿಗೆ ಚರ್ಚಿಸಲಾಗುವುದು ಮತ್ತು ಅವರ ಅಹವಾಲುಗಳನ್ನು ಆಲಿಸಲಾಗುವುದು ಎಂದರು.
ಕೊರೊನಾ ಕೇಸ್‌ ಹೆಚ್ಚಾದರೆ ಮಾರುಕಟ್ಟೆ ಬಂದ್‌ ಮಾಡಿ: ಆರೋಗ್ಯ ಇಲಾಖೆ ಹೊಸ ಸುತ್ತೋಲೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ