ಆ್ಯಪ್ನಗರ

ಬಳ್ಳಾರಿಯಲ್ಲಿ ಜಿಂದಾಲ್ ಕಂಪನಿ ವಿರುದ್ಧ ನೌಕರನೊಬ್ಬನ ಏಕಾಂಗಿ ಹೋರಾಟ..!

ಜಿಂದಾಲ್ ಕಾರ್ಖಾನೆಯ ಮುಖ್ಯ ದ್ವಾರದ ಎದುರು ನನಗೆ ನ್ಯಾಯ ಬೇಕೆಂದು ಏಕಾಂಗಿಯಾಗಿ ಪ್ರಕಾಶ್ ಕಿಚಡಿ ಹೋರಾಟ ಮಾಡುತ್ತಿದ್ದು, ಇವರು ಪ್ರತಿಭಟನೆ ಮಾಡುವ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Vijaya Karnataka Web 7 Sep 2020, 12:40 pm
ಬಳ್ಳಾರಿ: ಜಿಂದಾಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬನನ್ನು ಏಕಾಏಕಿ ಕೆಲಸದಿಂದ ಕಿತ್ತು ಹಾಕಿದ ಪರಿಣಾಮ ಆತ ಕಂಪನಿಯ ಮುಂದೆ ಏಕಾಂಗಿಯಾಗಿ ಧರಣಿ ಮಾಡಿರುವ ಘಟನೆ ನಡೆದಿದೆ.
Vijaya Karnataka Web Protest


ಸ್ಥಳೀಯ ಸಂಸ್ಥೆಗೆ ಅನಾಸ್ಥೆ: 2 ವರ್ಷಗಳಿಂದ ಮೀಸಲಾತಿ ನಿಗದಿಯಾಗದೇ ನಡೆಯದ ಅಧ್ಯಕ್ಷ,

ದೇಶದ ಬಹುದೊಡ್ಡ ಉಕ್ಕು ಕಾರ್ಖಾನೆಯಾದ ಜಿಂದಾಲ್ ಕಂಪನಿಯ ನೌಕರನಾದ ಕಿಚಡಿ ಪ್ರಕಾಶ್ ಎಂಬುವವರನ್ನು ಕಂಪನಿಯಿಂದ ಏಕಾಏಕಿ ಕಿಕ್‌ಔಟ್ ಮಾಡಲಾಗಿತ್ತು. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಕಳೆದ ಐದು ವರ್ಷಗಳಿಂದ ಜ್ಯೂನಿಯರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಇವರನ್ನು ಕಾರಣ ಕೊಡದೆ ವಜಾ ಮಾಡಿದ್ದನ್ನು ಖಂಡಿಸಿ ನ್ಯಾಯಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರ ವಿರುದ್ಧ ದೇಶದ್ರೋಹ ಪ್ರಕರಣದಡಿ ಕ್ರಮ ಕೈಗೊಳ್ಳಿ; ಎಬಿವಿಪಿ

ಜಿಂದಾಲ್ ಕಾರ್ಖಾನೆಯ ಮುಖ್ಯ ದ್ವಾರದ ಎದುರು ನನಗೆ ನ್ಯಾಯ ಬೇಕೆಂದು ಏಕಾಂಗಿಯಾಗಿ ಪ್ರಕಾಶ್ ಕಿಚಡಿ ಹೋರಾಟ ಮಾಡುತ್ತಿದ್ದು, ಇವರು ಪ್ರತಿಭಟನೆ ಮಾಡುವ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಷಯ ತಿಳಿದ ಜಿಂದಾಲ್ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕಾಶ್ ಅವರ ಬೇಡಿಕೆಯನ್ನು ಆಲಿಸಿದ್ದಾರೆ.

ಗಣಿ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ: ರಾಜಕೀಯ ಚದುರಂಗದಾಟಕ್ಕೆ ಅಧಿಕಾರಿಗಳು ಹೈರಾಣ

ಸದ್ಯ ಈ ಯುವಕ ಪ್ರತಿಭಟನೆ ಮಾಡುತ್ತಿರುವ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರು ಕಂಪನಿ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಜಿಂದಾಲ್ ಕಂಪನಿ ಸಿಬ್ಬಂದಿ ನೌಕರನ ಜೊತೆ ಮಾತನಾಡಿದ ಬಳಿಕ ಆತ ಪ್ರತಿಭಟನೆಯನ್ನು ವಾಪಸ್ ಪಡೆದುಕೊಳ್ಳಲು ನಿರ್ಧರಿಸಿದ್ದಾರೋ ಇಲ್ಲವೋ ಅನ್ನೋದು ಇನ್ನಷ್ಟೇ ತಿಳಿದುಬರಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ