ಆ್ಯಪ್ನಗರ

ಮೂರ್ಕಡೆ ರೈಲು ಬಂದಾಗಲೇ ಪಾಸ್‌

ಗಣಿ ನಗರಿಯ ರೈಲ್ವೆ ಗೇಟ್‌ಗಳಿಗೆ ಮೇಲ್ಸೇತುವೆಯ ಭಾಗ್ಯ ಕೈಗೂಡುವ ಲಕ್ಷಣಗಳು ಕಂಡುಬರುತ್ತಿಲ್ಲ. ಜನ ಎಂದಿನಂತೆಯೇ ರೈಲು ಬಂದಾಗ ಗೇಟ್‌ ಬಳಿ ಕಾಯ್ದು ಮುನ್ನಡೆಯುವ ತೊಂದರೆಗೆ ಮೋಕ್ಷವಿಲ್ಲದಂತಾಗಿದೆ.

Vijaya Karnataka 30 May 2018, 12:00 am
ಕೃಷ್ಣ ಎನ್‌. ಲಮಾಣಿ, ಹೊಸಪೇಟೆ : ಗಣಿ ನಗರಿಯ ರೈಲ್ವೆ ಗೇಟ್‌ಗಳಿಗೆ ಮೇಲ್ಸೇತುವೆಯ ಭಾಗ್ಯ ಕೈಗೂಡುವ ಲಕ್ಷಣಗಳು ಕಂಡುಬರುತ್ತಿಲ್ಲ. ಜನ ಎಂದಿನಂತೆಯೇ ರೈಲು ಬಂದಾಗ ಗೇಟ್‌ ಬಳಿ ಕಾಯ್ದು ಮುನ್ನಡೆಯುವ ತೊಂದರೆಗೆ ಮೋಕ್ಷವಿಲ್ಲದಂತಾಗಿದೆ.
Vijaya Karnataka Web pass when the train arrives
ಮೂರ್ಕಡೆ ರೈಲು ಬಂದಾಗಲೇ ಪಾಸ್‌


ನಗರದ ಅನಂತಶಯನಗುಡಿ ಗ್ರಾಮದ ಬಳಿಯ ರೈಲ್ವೆ ಗೇಟ್‌ ನಂ.85, ಚಿತ್ತವಾಡ್ಗಿಯ ಗೇಟ್‌ನ ಹತ್ತಿರ, ಟಿಬಿ ಡ್ಯಾಂ ಬಳಿಯ ರೈಲ್ವೆ ಗೇಟ್‌ನಲ್ಲಿ ಜನ ನಿತ್ಯ ಕಾಯ್ದು ನಿಲ್ಲಬೇಕಿದೆ.

2016ರಲ್ಲಿ ಡಬಲ್‌ ಲೈನ್‌ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೂ, ಗೇಟ್‌ ಹಾಕಿದಾಗ ಕಾಯುವ ಸ್ಥಿತಿ ತಪ್ಪಿಲ್ಲ. 2015-2016ನೇ ಸಾಲಿನಲ್ಲೆ ಕೇಂದ್ರ ಸರಕಾರ ಗೇಟ್‌ಗೆ ಮೇಲ್ಸೇತುವೆ ನಿರ್ಮಾಣಕ್ಕೆ ಸಮ್ಮತಿ ಸೂಚಿಸಿದೆ. ಜತೆಗೆ ಅಂದಾಜು 22 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣಕ್ಕೆ ತನ್ನ ಪಾಲಿನ ಶೇ.50ರಷ್ಟು ಅನುದಾನ ಬಿಡುಗಡೆಗೂ ಒಪ್ಪಿಗೆ ಸೂಚಿಸಿದೆ. ಇದಕ್ಕೆ ರಾಜ್ಯ ಮೂಲಭೂತ ಸೌಕರ್ಯ ಇಲಾಖೆಯೂ ಒಪ್ಪಿಗೆ ಸೂಚಿಸಿ, ತನ್ನ ಪಾಲಿನ ಶೇ.50ರಷ್ಟು ಹಣವನ್ನು ನೀಡಲು ಸೈ ಎಂದಿದೆ. ಈ ಎಲ್ಲ ಪ್ರಕ್ರಿಯೆಗಳ ಬಳಿಕವೂ ಕೆಲಸಕ್ಕೆ ಚಾಲನೆ ದೊರಕಿಲ್ಲ.

ನಿತ್ಯ ಗೋಳು:

ಸೇತುವೆ ರಾಜ್ಯ ಹೆದ್ದಾರಿ 49ರಲ್ಲಿ ಬರುವುದರಿಂದ ಕಲಬುರಗಿ, ಬೀದರ್‌, ರಾಯಚೂರು, ಯಾದಗಿರಿ, ಸಿರುಗುಪ್ಪ, ಸಿಂಧನೂರು, ಗಂಗಾವತಿಗೆ ತೆರಳುವ ಬಸ್‌ಗಳು ಹಾಗೂ ಖಾಸಗಿ ವಾಹನಗಳು ಈ ಮಾರ್ಗವನ್ನೇ ಅನುಸರಿಸಬೇಕಿದೆ. ಅತ್ತ ಕಡೆಯಿಂದ ದಾವಣಗೆರೆ, ಶಿವಮೊಗ್ಗ, ಬೆಂಗಳೂರು, ಚಿತ್ರದುರ್ಗ, ಹಾಸನ, ಧರ್ಮಸ್ಥಳಕ್ಕೆ ತೆರಳುವ ಬಸ್‌ಗಳು ಹಾಗೂ ಖಾಸಗಿ ವಾಹನಗಳು ಈ ಗೇಟ್‌ನ ಮೂಲಕವೇ ತೆರಳಬೇಕು. ಜತೆಗೆ, ವಿಶ್ವವಿಖ್ಯಾತ ಹಂಪಿಗೆ ಆಗಮಿಸುವ ದೇಶ-ವಿದೇಶಿ ಪ್ರವಾಸಿಗರು ಈ ರಸ್ತೆ ಮೂಲಕವೇ ತೆರಳಬೇಕಿದೆ. ಹಂಪಿ ಕನ್ನಡ ವಿವಿಗೆ ತೆರಳುವ ವಿದ್ವಾಂಸರು, ಸಂಶೋಧನಾ ವಿದ್ಯಾರ್ಥಿಗಳು ಗೇಟ್‌ ಬಳಸಿಯೇ ತೆರಳಬೇಕಿದೆ. ಎಲ್ಲರಿಗೂ ಟ್ರಾಫಿಕ್‌ ಜಾಮ್‌ ಬಿಸಿ ತಟ್ಟುತ್ತಿದೆ.

ಕಾಗದದಲ್ಲಿ ಪ್ರಗತಿ:

ರೈಲ್ವೆ ಹಾಗೂ ರಾಜ್ಯ ಮೂಲಭೂತ ಸೌಕರ್ಯ ಇಲಾಖೆಗಳು ಕಾಗದದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿವೆ. ಕಾರ್ಯರೂಪಕ್ಕೆ ತರುತ್ತಿಲ್ಲ ಎಂಬ ದೂರು ಹೆಚ್ಚಾಗತೊಡಗಿದೆ.

ಚಿತ್ತವಾಡ್ಗಿಯ ರೈಲ್ವೆ ಗೇಟ್‌ ಬಳಿ ಒಂದು ಬದಿಯಲ್ಲಿ ಜನರ ವಸತಿ ಮನೆಗಳಿದ್ದರೆ, ಮತ್ತೊಂದು ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಆಸ್ಪತ್ರೆಗೆ ಬರುವ ರೋಗಿಗಳು ತುರ್ತು ಸಂದರ್ಭದಲ್ಲಿ ರೈಲ್ವೆ ಗೇಟ್‌ನಲ್ಲಿ ಸಿಲುಕುವಂತಾಗಿದೆ. ನಗರದ ಟಿಬಿಡ್ಯಾಂನ ರೈಲ್ವೆಗೇಟ್‌ ನಂ.10ರಲ್ಲೂ ಇದೇ ಸ್ಥಿತಿ ಇದೆ. ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ಒಪ್ಪಿಗೆ ದೊರೆತರೂ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಮೂರು ಗೇಟ್‌ಗಳು ಜನರ ಪಾಲಿಗೆ ತಲೆನೋವಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಿದೆ.

ನಗರದ ಅನಂತಶಯನಗುಡಿಯ ರೈಲ್ವೆಗೇಟ್‌ ನಂ.85ರ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ 22 ಕೋಟಿ ರೂ. ಮಂಜೂರಾಗಿದೆ. ಹೀಗಿದ್ದರೂ ಮೇಲ್ಸೇತುವೆ ನಿರ್ಮಾಣ ಮಾಡಲಾಗಿಲ್ಲ. ಕೂಡಲೇ ನಗರದ ಮೂರು ರೈಲ್ವೆಗೇಟ್‌ಗಳಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು.

- ವೈ. ಯಮುನೇಶ್‌, ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾಸಮಿತಿ ಸದಸ್ಯ, ಹೊಸಪೇಟೆ

ನಗರದ ಅನಂತಶಯನಗುಡಿ, ಚಿತ್ತವಾಡ್ಗಿ ಮತ್ತು ಟಿಬಿಡ್ಯಾಂನ ರೈಲ್ವೆ ಗೇಟ್‌ಗಳಲ್ಲಿ ಕೂಡಲೇ ಮೇಲ್ಸೇತುವೆ ನಿರ್ಮಾಣ ಮಾಡಬೇಕಿದೆ. ನಿತ್ಯ ಕಾಯುವ ಸ್ಥಿತಿ ನಿರ್ಮಾಣ ಮಾಡಬೇಕಿದೆ. ಈ ಸಮಸ್ಯೆ ಬಗೆಹರಿಸಬೇಕು.

- ರಾಮು, ಶ್ರೀನಿವಾಸ್‌ ಹೊಸಪೇಟೆ ನಿವಾಸಿಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ