ಆ್ಯಪ್ನಗರ

ಬಳ್ಳಾರಿ: ಪೆಟ್ರೋಲ್ ಸೋರಿಕೆ; ವಿದ್ಯುತ್ ಶಾಟ್೯ ಸರ್ಕೀಟ್ ನಿಂದ ಮೂವರಿಗೆ ಗಾಯ

ಡಬ್ಬಿಯಲ್ಲಿಟ್ಟಿದ್ದ ಪೆಟ್ರೋಲ್ ಸೋರಿಕೆಯಿಂದ, ವಿದ್ಯುತ್ ಶಾಟ್೯ ಸರ್ಕೀಟ್ ಉಂಟಾಗಿ ಮೂವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Vijaya Karnataka Web 21 Mar 2020, 1:29 pm
ಬಳ್ಳಾರಿ: ಡಬ್ಬಿಯಲ್ಲಿಟ್ಟಿದ್ದ ಪೆಟ್ರೋಲ್ ಸೋರಿಕೆಯಿಂದ, ವಿದ್ಯುತ್ ಶಾಟ್೯ ಸರ್ಕೀಟ್ ಉಂಟಾಗಿ ಮೂವರು ಗಾಯಗೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
Vijaya Karnataka Web short circuit


ದೇಶದಲ್ಲಿ ಜನತಾ ಕರ್ಪ್ಯೂ ಕರೆ ನೀಡಿದ ಹಿನ್ನಲೆ, ವಿಮ್ಸ್ ಕಚೇರಿ ಅಧೀಕ್ಷಕ ವೆಂಕಣ್ಣರವರು,
ಪೆಟ್ರೋಲ್ ಬಂಕ್ ಬಂದ್ ಆಗುವ ಸಾಧ್ಯತೆ ಇದೆ ಎಂದು ಅನುಮಾನ ಪಟ್ಟು ಹತ್ತು ಲೀಟರ್ ಪೆಟ್ರೋಲ್ ಖರೀದಿಸಿ, ರಾತ್ರಿ ಮನೆಯಲ್ಲಿ ಸಂಗ್ರಹಿಸಿದ್ದರು, ಡಬ್ಬಿಯಲ್ಲಿ ಪೆಟ್ರೋಲ್ ಸೋರಿಕೆಯಾಗಿ ಮನೆಯಲ್ಲಿ ವಿದ್ಯುತ್ ಶಾಟ್೯ ಸರ್ಕೀಟ್ ‌ನಿಂದ ಬೆಂಕಿ ಹತ್ತಿಕೊಂಡಿದೆ.

ಈ ವೇಳೆ ಮನೆಯವರು ಹರಸಾಹಸಪಟ್ಟು ಹೊರಬಂದಿದ್ದಾರೆ. ವೆಂಕಣ್ಣ ಹಾಗೂ ಪತ್ನಿ, ಮಗಳಿಗೆ ಗಾಯಗಳಾಗಿದ್ದು, ವೆಂಕಣ್ಣರವರಿಗೆ ಗಂಭೀರ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವೆಂಕಣ್ಣ ಪತ್ನಿ ಹಾಗೂ ಮಗಳಿಗೆ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ