ಆ್ಯಪ್ನಗರ

ಹಂಪಿಗೆ ಪ್ರಧಾನಿ ಕಚೇರಿ ಸಿಬ್ಬಂದಿ ಭೇಟಿ

ಪ್ರಧಾನಿ ಕಾರ್ಯಾಲಯದ ಸಿಬ್ಬಂದಿ ಇಂದು ವಿಶ್ವ ಪ್ರಸಿದ್ಧ ಹಂಪಿಗೆ ಭೇಟಿ ನೀಡಿದರು.

Vijaya Karnataka Web 24 Sep 2019, 12:46 pm
ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿಗೆ ಪ್ರಧಾನಿ‌ ನರೇಂದ್ರ ಮೋದಿ ಕಚೇರಿಯ ಸಿಬ್ಬಂದಿ ಭೇಟಿ ನೀಡಿ ವೀಕ್ಷಿಸಿದ್ದಾರೆ.
Vijaya Karnataka Web Hampi.


ಬಳ್ಳಾರಿ ನಗರದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಪ್ರಧಾನಿ ಕಚೇರಿಯ ಡಾ.ಶ್ರೀಕಾಂತ್ ಪಾಣಿಗ್ರಹಿ ಅವರು, ಹಂಪಿ ವಿರೂಪಾಕ್ಷ ದೇವಸ್ಥಾನದ ದರ್ಶನ ಪಡೆದಿದ್ದಾರೆ.

ಹಜಾರಿ ರಾಮ, ಮಹಾನವಮಿ ದಿಬ್ಬ, ಲೋಟಸ್ ಮಹಲ್, ಆನೆ ಸಾಲು, ಒಂಟೆ ಸಾಲು, ಸಾವಿವೆಕಾಳು, ಕಡ್ಲೆಕಾಳು ಗಣಪತಿ, ಉಗ್ರ ನರಸಿಂಹ, ಕೃಷ್ಣ ದೇಗುಲ, ಕೃಷ್ಣ ಬಜಾರ್, ಒಂದು ಕಲ್ಲಿನಲ್ಲಿ ಹದಿನಾರು ಕಂಬ, ಹೇಮಕೂಟ, ಮಾತಂಗ ಪರ್ವತ ಸೇರಿದಂತೆ ಇತರೆ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ದಾರೆ.

ಬಳ್ಳಾರಿಯ ರುದ್ರ ಟ್ರಸ್ಟ್ ಬಿ.ಎಂ.ರವಿಶಂಕರ ಗುರೂಜಿ, ಸದಸ್ಯೆ ಶೋಭಾರಾಣಿ, ಮಾನವ ಹಕ್ಕುಗಳ ರಾಜ್ಯಾಧ್ಯಕ್ಷ ಮುನಿಕೃಷ್ಣ, ಮೋಹನಗೌಡ ಶಾನವಾಸಪುರ, ಎಸ್.ಪಿ.ಮಂಜುನಾಥ, ಸಂತೋಷ ಕುಮಾರ, ಜಗದೀಶ ಯಾದವ, ನಾಗಮಣಿ, ಪಂಪನಗೌಡ ಪಾಟೀಲ್ ಸಿಂಗಡದಿನ್ನಿ, ಪ್ರಕಾಶಗೌಡ ಪಾಟೀಲ ಕ್ಯಾದಿಗೇರಿ, ಮಂಜುನಾಥ ಅವರೊಂದಿಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ