ಆ್ಯಪ್ನಗರ

ರಾಜಕೀಯದ ಕಡೆ ಒಲವು: ಅನುಪಮಾ ಶೆಣೈ

ರಾಜಕೀಯದ ಕಡೆ ಒಲವಿರುವುದು ನಿಜ. ಆದರೆ, ಸದ್ಯಕ್ಕೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹೇಳಿದರು.

ವಿಕ ಸುದ್ದಿಲೋಕ 31 Aug 2016, 7:54 am
ಹೊಸಪೇಟೆ; ರಾಜಕೀಯದ ಕಡೆ ಒಲವಿರುವುದು ನಿಜ. ಆದರೆ, ಸದ್ಯಕ್ಕೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹೇಳಿದರು.
Vijaya Karnataka Web political affinity anupama shenoy
ರಾಜಕೀಯದ ಕಡೆ ಒಲವು: ಅನುಪಮಾ ಶೆಣೈ


ಪ್ರಕರಣವೊಂದರಲ್ಲಿ ಸಾಕ್ಷಿ ಹೇಳಲು ಇಲ್ಲಿನ ನ್ಯಾಯಾಲಯಕ್ಕೆ ಮಂಗಳವಾರ ಆಗಮಿಸಿದ್ದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ‘‘ಇದುವರೆಗೆ ನಾನು ಯಾವುದೇ ರಾಜಕೀಯ ಪಕ್ಷದ ಜತೆ ಗುರುತಿಸಿಕೊಂಡಿಲ್ಲ. ಬಿಜೆಪಿ, ಕಾಂಗ್ರೆಸ್ ಸೇರಿ ನಾನಾ ಪಕ್ಷಗಳ ಮುಖಂಡರನ್ನು ಭೇಟಿಯಾಗಿರುವೆ. ರಾಜಕೀಯದ ಬಗ್ಗೆ ಮಾಹಿತಿ ಪಡೆಯಲಷ್ಟೇ ಅವರನ್ನು ಭೇಟಿಯಾಗಿರುವೆ’’ ಎಂದರು.

ಮಾನವೀಯತೆ ಮಾಯ: ‘‘ಪೊಲೀಸ್ ಇಲಾಖೆಯಲ್ಲಿ ಮಾನವೀಯತೆ ಮಾಯವಾಗಿದೆ. ಭಟ್ಕಳದ ಪಿಎಸ್‌ಐ ರೇವತಿ, ಬಳ್ಳಾರಿಯ ಪಿಎಸ್‌ಐ ಗಾಯತ್ರಿ ಸೇರಿ ನಾನಾ ಮಹಿಳಾ ಅಧಿಕಾರಿಗಳು ಕೆಲಸ ತೊರೆಯುವಂಥ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪೊಲೀಸ್ ಇಲಾಖೆಯಲ್ಲಿರುವ ಒತ್ತಡವೇ ಪ್ರಮುಖ ಕಾರಣ. ಪುರುಷ ಅಧಿಕಾರಿಗಳಷ್ಟೇ ಜವಾಬ್ದಾರಿಯನ್ನು ಮಹಿಳಾ ಅಧಿಕಾರಿಗಳು ನಿಭಾಯಿಸುತ್ತಾರೆ. ಆದರೂ ಇಲಾಖೆಯಲ್ಲಿ ಇದಕ್ಕೆ ಮಾನ್ಯತೆ ದೊರೆಯುತ್ತಿಲ್ಲ’’ ಎಂದು ವಿಷಾದ ವ್ಯಕ್ತಪಡಿಸಿದರು.

ಇಲಾಖೆ ಜನಸ್ನೇಹಿಯಾಗಬೇಕು: ‘‘ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕಿದೆ. ಉನ್ನತ ಅಧಿಕಾರಿಗಳು ಮಾತ್ರ ಜನಸ್ನೇಹಿಯಾಗಿರುವುದಿಲ್ಲ. ಇಲಾಖೆಯಲ್ಲಿ ಸಮಗ್ರ ಸುಧಾರಣೆಯಾಗಬೇಕಿದೆ. ಸಣ್ಣ ಪುಟ್ಟ ತಪ್ಪುಗಳನ್ನು ಮಾಡುವ ಕಿರಿಯ ಸಿಬ್ಬಂದಿಗೆ ಅಮಾನತು ಶಿಕ್ಷೆ ನೀಡುವುದು ಸರಿಯಲ್ಲ. ಹಿರಿಯ ಅಧಿಕಾರಿಗಳು ಏನೇ ಮಾಡಿದರೂ ಶಿಕ್ಷೆಯಾಗುವುದಿಲ್ಲ’’ ಎಂದು ದೂರಿದರು.
................
ಪೊಲೀಸ್ ಇಲಾಖೆ ಸೇವೆಗೆ ಮತ್ತೆ ಸೇರಲು ಜನರಿಂದ ಒತ್ತಡವಿದೆ. ಆದರೆ, ಅದಕ್ಕೆ ಪೂರಕ ವಾತಾವರಣ ಎಲ್ಲೂ ಕಂಡುಬರುತ್ತಿಲ್ಲ.

-ಅನುಪಮಾ ಶೆಣೈ, ಮಾಜಿ ಡಿವೈಎಸ್ಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ