ಆ್ಯಪ್ನಗರ

ಪರಿಸರ ಸಂರಕ್ಷಿಸಿ, ಜೀವ ಸಂಕುಲ ಉಳಿಸಿ

ಗಿಡ-ಮರಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಆ ಮೂಲಕ ಜೀವಸಂಕುಲ ಉಳಿವಿಗೆ ಶ್ರಮಿಸಬೇಕು ಎಂದು ಕಂಪ್ಲಿ ಕ್ಷೇತ್ರದ ಶಾಸಕ ಜೆಎನ್‌.ಗಣೇಶ್‌ ಬುಧವಾರ ಹೇಳಿದರು.

Vijaya Karnataka 6 Jun 2019, 5:00 am
ಕುರುಗೋಡು: ಗಿಡ-ಮರಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಆ ಮೂಲಕ ಜೀವಸಂಕುಲ ಉಳಿವಿಗೆ ಶ್ರಮಿಸಬೇಕು ಎಂದು ಕಂಪ್ಲಿ ಕ್ಷೇತ್ರದ ಶಾಸಕ ಜೆಎನ್‌.ಗಣೇಶ್‌ ಬುಧವಾರ ಹೇಳಿದರು.
Vijaya Karnataka Web protect the environment and save life
ಪರಿಸರ ಸಂರಕ್ಷಿಸಿ, ಜೀವ ಸಂಕುಲ ಉಳಿಸಿ


ಪಟ್ಟಣದ ಆರೋಗ್ಯ ಸಮುದಾಯ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ಸಂರಕ್ಷ ಣೆ ದಿನಾಚರಣೆ ನಿಮ್ಮಿತ್ತ ಬುಧವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕೈಗಾರೀಕರಣ, ನಗರೀಕರಣ ಮತ್ತು ವಿಜ್ಞಾನ ತಂತ್ರಜ್ಞಾನದಿಂದ ಪರಿಸರ ವಿನಾಶವಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಆಮ್ಲಜನಕದ ಕೊರತೆಯುಂಟಾಗಿ ತುಂಬಾ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕು ಎಂದರು. ಕೋಳೂರು-ಕುರುಗೋಡು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭಂಗಿ ಮಲ್ಲಯ್ಯ, ಬಾದನಹಟ್ಟಿ ಕರಿಬಸಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಓಂಕಾರಪ್ಪ, ಪುರಸಭೆ ಸದಸ್ಯ ಎನ್‌.ನಾಗರಾಜ್‌, ಅಂಜಿನಪ್ಪ, ವೆಂಕಟೇಶ್‌ಗೌಡ, ನಾಗೇಶ್ವರರಾವ್‌, ಚನ್ನಪಟ್ಟಣ ಮಲ್ಲಿಕಾರ್ಜುನ್‌, ಮುಷ್ಟಗಟ್ಟೆ ಪಂಪಾಪತಿಗೌಡ, ಎಚ್‌.ಮಂಜುನಾಥ, ಕಗ್ಗಲ್‌ ಬಸವರಾಜ, ಜಡೆಪ್ಪ, ನಾಗರಾಜ್‌, ಶ್ರೀಧರ್‌, ಕಲ್ಗುಡೆಪ್ಪ ಹಾಗೂ ಇನ್ನಿತರ ಕಾಂಗ್ರೆಸ್‌ ಮುಖಂಡರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ