ಆ್ಯಪ್ನಗರ

ಬಳ್ಳಾರಿ: ಕಳಪೆ ಕಾಮಗಾರಿ, ಪ್ರತಿಭಟನೆ

ಕಳಪೆ ಕಾಮಗಾರಿ ಸೇರಿ ನಾನಾ ಯೋಜನೆಗಳಲ್ಲಿ ಅಧಿಕಾರಿಗಳು ತಾರತಮ್ಯವೆಸಗಿದ್ದಾರೆ ಎಂದು ಆರೋಪಿಸಿ ಬಳ್ಳಾರಿ ಜಿ.ಪಂ. ಸದಸ್ಯರು ಪ್ರತಿಭಟನೆ ನಡೆಸಿದರು.

Vijaya Karnataka Web 18 Mar 2020, 1:25 pm
ಬಳ್ಳಾರಿ: ಕಳಪೆ ಕಾಮಗಾರಿ ಸೇರಿ ನಾನಾ ಯೋಜನೆಗಳಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದೆ, ಸರ್ವಾಧಿಕಾರಿಗಳಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪಂಚಾಯತ್ ಸದಸ್ಯರು ಜಿ.ಪಂನ ನಜೀರ್ ಸಭಾಂಗಣದ ಮುಂದೆ ಪ್ರತಿಭಟನೆ ನಡೆಸಿದರು.
Vijaya Karnataka Web protest


ಜಿಲ್ಲೆಯಲ್ಲಿ ನಾನಾ ಕಾಮಗಾರಿಗಳು ಕಳಪೆ ಮಟ್ಟದಲ್ಲಿ ನಡೆಯುತ್ತಿದ್ದು, ಅಧಿಕಾರಿಗಳು ಪರಿಶೀಲನೆಗೆ ಬರುತ್ತಿಲ್ಲ. ವರ್ಷಾದ್ಯಾಂತದಲ್ಲಿ ಹಲವು ಯೋಜನೆಗಳು ಪೂರ್ಣ ಆಗುತ್ತಿಲ್ಲ. ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಕೇಳಿದರೆ ಆರ್ ಟಿಇಯಲ್ಲಿ ಕೇಳಿ ಎಂದು ಸದಸ್ಯರಿಗೆ ಉತ್ತರ ನೀಡುತ್ತಾರೆ. ಸಮಸ್ಯೆಗಳು ಇನ್ನೂ ಬಗೆ ಹರಿದಿಲ್ಲ. ಶೇ.80ರಷ್ಟು ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ, ಅಧಿಕಾರಿಗಳು ಸದಸ್ಯರಿಗೆ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಆನಂದ್, ಮಲ್ಲಿಕಾಜುರ್ನ, ಗುರುಸಿದ್ದಪ್ಪ, ಕೋಟ್ರೇಶ್, ಕೋಟೇಶ್ವರರಾವ್, ಜಯಕುಮಾರಿ, ಲಲಿತಾಬಾಯಿ, ರಾಧ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ