ಆ್ಯಪ್ನಗರ

ನಾನಾ ಬೇಡಿಕೆ ಈಡೇರಿಸಲು ಆಗ್ರಹ

ಅವಿವಾಹಿತ, ವಿಧವಾ ವಿಚ್ಛೇದಿತ ಹಾಗೂ ವಿಶೇಷ ವರ್ಗದ ಮಹಿಳೆಯರಿಗೆ ಮೂರು ಸಾವಿರ ಮಾಸಾಶನ ನೀಡುವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಸೋಮವಾರ ಪ್ರತಿಭಟನೆ ನಡೆಸಿದರು.

Vijaya Karnataka 17 Jul 2018, 5:00 am
ಬಳ್ಳಾರಿ ; ಅವಿವಾಹಿತ, ವಿಧವಾ ವಿಚ್ಛೇದಿತ ಹಾಗೂ ವಿಶೇಷ ವರ್ಗದ ಮಹಿಳೆಯರಿಗೆ ಮೂರು ಸಾವಿರ ಮಾಸಾಶನ ನೀಡುವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಸೋಮವಾರ ಪ್ರತಿಭಟನೆ ನಡೆಸಿದರು.
Vijaya Karnataka Web BLR-16BLYRN02


ಪುರುಷರಿಗೆ ಸರಿಸಮಾನವಾಗಿ ಶ್ರಮಿಸುತ್ತಿರುವ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ವಿಧವಾ ವಿಚ್ಛೇದಿತ ಮಹಿಳೆಯರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಸಮಾನತೆಗೆ ಒಳಗಾಗಿದ್ದಾರೆ. ಸಾಮಾಜಿಕ ಅನಿಷ್ಟ ಪದ್ಧತಿ ಹಾಗೂ ಮೂಢನಂಬಿಕೆಗಳಿಂದ ಸಾವಿರಾರು ಮಹಿಳೆಯರು ತೊಂದರೆಗೆ ಸಿಲುಕಿಕೊಂಡಿದ್ದಾರೆ. ಆದ್ದರಿಂದ ರಾಜ್ಯ ಸರಕಾರ 3 ಸಾವಿರ ರೂ.ಮಾಸಾಶನ ನೀಡಬೇಕು. ಕುಟುಂಬ ನಿರ್ವಹಣೆ ಮತ್ತು ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಅಗತ್ಯ ಸೌಲಭ್ಯಗಳನ್ನು ಸರಕಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಿಕ ಪ್ರೋತ್ಸಾಹ ಧನ ಹೆಚ್ಚಳ ಮಾಡಬೇಕು. ನಿವೇಶನ ಹಾಗೂ ನಿವೇಶನ ರಹಿತರಿಗೆ ವಸತಿ ಸೌಲಭ್ಯ, ಭೂ ರಹಿತರಿಗೆ ನಗರ ಹಾಗೂ ಗ್ರಾಮೀಣ ವ್ಯವಸಾಯಕ್ಕೆ ಜಮೀನು ನೀಡಬೇಕು. ವಿಶೇಷ ವರ್ಗದ ಮಹಿಳೆಯರ ವಿಭಾಗಕ್ಕೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಜೆ.ಚಂದ್ರಕುಮಾರಿ, ಉಪಾಧ್ಯಕ್ಷೆ ಉಮಾದೇವಿ, ಕೆ.ನಾಗರತ್ನ, ತಾಲೂಕು ಅಧ್ಯಕ್ಷೆ ವಿನೋದಾ, ಕಾರ್ಯದರ್ಶಿ ಸರೋಜಾ, ಮಲ್ಲಮ್ಮ ಹಾಗೂ ಸದಸ್ಯೆಯರಾದ ಸಾವಿತ್ರಿ, ಖಾಜಾಬಿ, ಎ.ಪ್ರಭಾವತಿ, ಕೆ.ಕೆಂಚಮ್ಮ ಸೇರಿ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ