ಆ್ಯಪ್ನಗರ

ಪಿಯುಸಿ ಪರೀಕ್ಷೆ ಶಾಂತಿಯುತ

ಪದವೀ ಪೂರ್ವ ಶಿಕ್ಷಣ ಇಲಾಖೆಯಿಂದ ಜಿಲ್ಲೆಯ ನಾನಾ ತಾಲೂಕಿನ 22 ಕೇಂದ್ರಗಳಲ್ಲಿ ನಡೆದ ಪಿಯುಸಿ ಪರೀಕ್ಷೆಯು ಗುರುವಾರ ಶಾಂತಿಯುತವಾಗಿ ನಡೆಯಿತು.

Vijaya Karnataka 2 Mar 2018, 7:03 am
ಬಳ್ಳಾರಿ: ಪದವೀ ಪೂರ್ವ ಶಿಕ್ಷಣ ಇಲಾಖೆಯಿಂದ ಜಿಲ್ಲೆಯ ನಾನಾ ತಾಲೂಕಿನ 22 ಕೇಂದ್ರಗಳಲ್ಲಿ ನಡೆದ ಪಿಯುಸಿ ಪರೀಕ್ಷೆಯು ಗುರುವಾರ ಶಾಂತಿಯುತವಾಗಿ ನಡೆಯಿತು.
Vijaya Karnataka Web puc exam is peaceful
ಪಿಯುಸಿ ಪರೀಕ್ಷೆ ಶಾಂತಿಯುತ


ಆಯಾ ಪರೀಕ್ಷೆ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ವಿದ್ಯಾರ್ಥಿಗಳು ಬರೆಯುವ ಪರೀಕ್ಷೆ ಮೇಲೆ ಹದ್ದಿನ ಕಣ್ಗಾವಲು ವಹಿಸಿದ್ದವು. ಹೀಗಾಗಿ, ಪರೀಕ್ಷೆಯಲ್ಲಿ ಡಿಬಾರ್ ಅಥವಾ ಕಾಫಿ ಚೀಟಿ ಹೊಡೆಯುವಂತಹ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎಂದು ಇಲಾಖೆ ಉಪನಿರ್ದೇಶಕಿ ಶಾಂತಕುಮಾರಿ ಸ್ಪಷ್ಪಪಡಿಸಿದರು.

ಅರ್ಥಶಾಸ್ತ್ರ ವಿಭಾಗದಲ್ಲಿ ಅಂದಾಜು 10,307 ವಿದ್ಯಾರ್ಥಿಗಳು ನೋಂದಾಯಿಸಿ ಕೊಂಡಿದ್ದಾರೆ. ಆ ಪೈಕಿ 9559 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 748 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದರು.

ಭೌತಶಾಸ್ತ್ರ ವಿಭಾಗದಲ್ಲಿ ಅಂದಾಜು 7,338 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಸರಿಸುಮಾರು 7,118 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು, 220 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದರು.

ಆಯಾ ಪರೀಕ್ಷೆ ಕೇಂದ್ರಗಳಲ್ಲಿನ ಸಂಭವಿಸುವ ನಕಲನ್ನು ತಡೆಯಲು ಅಗತ್ಯಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಆ ತಂಡಗಳು ಪರೀಕ್ಷೆ ನಡೆಯುವ ವೇಳೆ, ಭೇಟಿಕೊಟ್ಟು ಪರಿಶೀಲನೆ ನಡೆಸಲಿದೆ ಎಂದರು.

ಕಳೆದ ಬಾರಿಯ ಪರೀಕ್ಷೆ ವೇಳೆ ಜಾರಿಯಲ್ಲಿದ್ದ ಅದಲು, ಬದಲು (ರ‌್ಯಾಂಡಮೈಜೇಷನ್) ಪದ್ಧತಿಯನ್ನು ಈ ಬಾರಿಯ ಪರೀಕ್ಷೆಯಲ್ಲೂ ಜಾರಿಗೊಳಿಸಲಾಗಿದೆ. ಎಲ್ಲ ಪರೀಕ್ಷೆ ಕೇಂದ್ರ ಗಳಲ್ಲಿನ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಕೇಂದ್ರಗಳಲ್ಲಿ ಪರೀಕ್ಷೆ ಅಕ್ರಮ ತಡೆಯಲು ಜೆರಾಕ್ಸ್ ಸೆಂಟರ್ ಮತ್ತು ಸೈಬರ್ ಕೇಂದ್ರಗಳನ್ನು ಮುಚ್ಚಿಸಲಾಗಿದೆ ಎಂದರು.

ಪರೀಕ್ಷೆ ಕೇಂದ್ರಗಳಿಗೆ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಯಿತು. ಗೌಪ್ಯ ವಸ್ತುಗಳನ್ನು ಖಜಾನೆಯಿಂದ ಸಾಗಿಸುವ ಮಾರ್ಗಕ್ಕೆ ಸೂಕ್ತ ಶಸ್ತ್ರಾಸ್ತ್ರ ಪೊಲೀಸ್ ಬೆಂಗಾವಲು ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ