ಆ್ಯಪ್ನಗರ

ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ಒದಗಿಸಲು ಧರಣಿ

ತಾಲೂಕಿನ ಉಪನಾಯಕನಹಳ್ಳಿ ವಿದ್ಯುತ್‌ ಉಪ ಕೇಂದ್ರದ ವ್ಯಾಪ್ತಿಯ ಗ್ರಾಮಗಳ ರೈತರು ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ಪೂರೈಸುವಂತೆ ಒತ್ತಾಯಿಸಿ ಉಪಕೇಂದ್ರದ ಕಚೇರಿ ಎದುರು ಶನಿವಾರ ಧರಣಿ ನಡೆಸಿದರು.

Vijaya Karnataka 16 Sep 2018, 5:00 am
ಹಗರಿಬೊಮ್ಮನಹಳ್ಳಿ : ತಾಲೂಕಿನ ಉಪನಾಯಕನಹಳ್ಳಿ ವಿದ್ಯುತ್‌ ಉಪ ಕೇಂದ್ರದ ವ್ಯಾಪ್ತಿಯ ಗ್ರಾಮಗಳ ರೈತರು ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ಪೂರೈಸುವಂತೆ ಒತ್ತಾಯಿಸಿ ಉಪಕೇಂದ್ರದ ಕಚೇರಿ ಎದುರು ಶನಿವಾರ ಧರಣಿ ನಡೆಸಿದರು.
Vijaya Karnataka Web BLR-BLY15HBH1


ತಾ.ಪಂ.ಮಾಜಿ ಅಧ್ಯಕ್ಷ ಪಿ.ಸೂರ್ಯಬಾಬು ಮಾತನಾಡಿ, ಈಗಾಗಲೇ ಮಳೆ ಅಭಾವದಿಂದಾಗಿ ಖುಷ್ಕಿ ಜಮೀನಿನ ಬೆಳೆನಷ್ಟವಾಗಿದೆ. ಇದೀಗ ನೀರಾವರಿ ಪ್ರದೇಶದಲ್ಲಿ ಅಸಮರ್ಪಕ ವಿದ್ಯುತ್‌ ಪೂರೈಕೆಯಿಂದಾಗಿ ಪಂಪ್‌ಸೆಟ್‌ಗಳಿಂದ ಜಮೀನಿಗೆ ಸಮರ್ಪಕ ನೀರೊದಗಿಸಲಾಗುತ್ತಿಲ್ಲ. ಇದರಿಂದಾಗಿ ಮಳೆಯಾ]ತ ಪ್ರದೇಶದ ರೈತರೊಂದಿಗೆ ನೀರಾವರಿ ಪ್ರದೇಶ ರೈತರು ಬೆಳೆನಷ್ಟ ಹೊಂದುವ ಸ್ಥಿತಿಯಲ್ಲಿದ್ದಾರೆ. ಈ ಕುರಿತಂತೆ ಜೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಉಪಕೇಂದ್ರದ ವ್ಯಾಪ್ತಿಯ ರೈತರ ಜಮೀನಿನ ಪಂಪ್‌ಸೆಟ್‌ಗಳಿಗೆ 11 ತಾಸು ನಿರಂತರ ವಿದ್ಯುತ್‌ ಒದಗಿಸಬೇಕು ಎಂದು ಆಗ್ರಹಿಸಿದರು.

ಹಗಲುವೇಳೆಯಲ್ಲಿ ಸಮರ್ಪಕ ವಿದ್ಯುತ್‌ ಒದಗಿಸಲು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಜೆಸ್ಕಾಂ ಎಇ ಅಲೀಂ ಇವರಿಗೆ ಮನವಿ ಸಲ್ಲಿಸಿದರು. ನಾನಾ ಗ್ರಾಮದ ಮುಖಂಡರಾದ ಅಂಬಣ್ಣ,ತಂಬ್ರಹಳ್ಳಿ ಚಂದ್ರಪ್ಪ, ವಿರೂಪಾಕ್ಷ ಗೌಡ, ಕಡ್ಲೆಪ್ಪ, ಎಸ್‌.ಬಿ.ಹುಲುಗಪ್ಪ, ಬಸಪ್ಪ, ಮರಿಬಸಪ್ಪ, ಕುರುಬರ ಬಸವರಾಜ,ಭರಮಪ್ಪ, ನಾಗರಾಜ, ತಿರುಕಪ್ಪ, ಹುಚ್ಚಪ್ಪ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ