ಆ್ಯಪ್ನಗರ

ಪಡಿತರ, ಬಟ್ಟೆ, ಅಗತ್ಯ ಸಾಮಗ್ರಿ ಸಾಗಣೆ

​ನೆರೆಹಾವಳಿಯಿಂದ ತತ್ತರಿಸಿರುವ ಕೊಡಗಿನ ಕುಶಾಲನಗರದ ಸಂತ್ರಸ್ತರಿಗೆ, ಸಮೀಪದ ರಾಮಸಾಗರ ಗ್ರಾಮಸ್ಥರು ಹಾಗೂ ಯುವಕ ಸಂಘದವರು ಸೇರಿ ಪಡಿತರ, ಬಟ್ಟೆ ಸೇರಿದಂತೆ ಕೆಲ ಅಗತ್ಯ ಸಾಮಾನುಗಳನ್ನು ಸೋಮವಾರ ರವಾನಿಸಿದರು.

Vijaya Karnataka 14 Dec 2022, 5:22 pm
ಕಂಪ್ಲಿ : ನೆರೆಹಾವಳಿಯಿಂದ ತತ್ತರಿಸಿರುವ ಕೊಡಗಿನ ಕುಶಾಲನಗರದ ಸಂತ್ರಸ್ತರಿಗೆ, ಸಮೀಪದ ರಾಮಸಾಗರ ಗ್ರಾಮಸ್ಥರು ಹಾಗೂ ಯುವಕ ಸಂಘದವರು ಸೇರಿ ಪಡಿತರ, ಬಟ್ಟೆ ಸೇರಿದಂತೆ ಕೆಲ ಅಗತ್ಯ ಸಾಮಾನುಗಳನ್ನು ಸೋಮವಾರ ರವಾನಿಸಿದರು.
Vijaya Karnataka Web BLR-20KMP3


ಈ ಸಂದರ್ಭದಲ್ಲಿ ಮಾತನಾಡಿದ ಯುವಕರು, ಮಳೆಯಿಂದ ಕೊಡಗು ಬಹಳಷ್ಟು ನಷ್ಟವಾಗಿದೆ. ಅಲ್ಲಿನ ಜನರು ಸಂಕಷ್ಟದಲ್ಲಿದ್ದು, ಅವರ ಅನುಕೂಲಕ್ಕಾಗಿ ಗ್ರಾಮಸ್ಥರು ಮತ್ತು ಯುವಕರು ಸೇರಿ 5,000ರೂ, 4 ಟನ್‌ ಅಕ್ಕಿ, 1 ಚೀಲ ಗೋಧಿ, 50 ಕೆ.ಜಿ.ತೊಗರಿ ಬೇಳೆ, 10 ಕೆ.ಜಿ.ಒಳ್ಳೆಣ್ಣೆ, ಬೆಲ್ಲ, ಹುಣಸೆಹಣ್ಣು, ಉಪ್ಪು, ಒಣಮೆಣಸಿನಕಾಯಿ ಸೇರಿದಂತೆ ನಾನಾ ಸಾಮಾಗ್ರಿಗಳನ್ನು ಸಂಗ್ರಹಿಸಿ, ಎಲ್ಲರ ಒಪ್ಪಿಗೆ ಮೇರೆಗೆ, ನಾಲ್ಕು ಜನರ ತಂಡ ರಚಿಸಿ, ಲಘು ವಾಹನದಲ್ಲಿ ಕೊಡಗಿನ ಕುಶಾಲನಗರಕ್ಕೆ ರವಾನಿಸಲಾಗುವುದು. ನಮ್ಮ ತಂಡದವರು ಕುಶಾಲನಗರದ ಸ್ವಯಂ ಸೇವಕರ ಸಹಕಾರದಿಂದ ನೇರವಾಗಿ ನೆರೆ ಸಂತ್ರಸ್ತರಿಗೆ ವಿತರಿಸಲಾಗುವುದು ಎಂದರು. ಗ್ರಾಮದ ಮುಖಂಡರು, ಯುವಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ