ಆ್ಯಪ್ನಗರ

ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

ಜಿಲ್ಲೆಯ ಸಿಡಿಗಿನಮೊಳ ಗ್ರಾಮದಲ್ಲಿ ವಿಶೇಷ ಚೇತನ ಮಹಿಳೆಯನ್ನು ಹತ್ಯೆ ಮಾಡಿದ ಅಪರಾಧಿಗೆ ಅತ್ಯುಗ್ರ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ, ರಾಜ್ಯ ವಿಕಲಚೇತನರ ಹಾಗೂ ಪಾಲಕರ ಒಕ್ಕೂಟ ತಾಲೂಕು ಸಮಿತಿ ವತಿಯಿಂದ ತಹಸೀಲ್ದಾರ್‌ ಎಸ್‌.ಪದ್ಮಕುಮಾರಿ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.

Vijaya Karnataka 31 May 2018, 5:00 am
ಸಿರುಗುಪ್ಪ : ಜಿಲ್ಲೆಯ ಸಿಡಿಗಿನಮೊಳ ಗ್ರಾಮದಲ್ಲಿ ವಿಶೇಷ ಚೇತನ ಮಹಿಳೆಯನ್ನು ಹತ್ಯೆ ಮಾಡಿದ ಅಪರಾಧಿಗೆ ಅತ್ಯುಗ್ರ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ, ರಾಜ್ಯ ವಿಕಲಚೇತನರ ಹಾಗೂ ಪಾಲಕರ ಒಕ್ಕೂಟ ತಾಲೂಕು ಸಮಿತಿ ವತಿಯಿಂದ ತಹಸೀಲ್ದಾರ್‌ ಎಸ್‌.ಪದ್ಮಕುಮಾರಿ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.
Vijaya Karnataka Web request to punish a convict
ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ


ಸಂಘಟನೆಯ ಜಿಲ್ಲಾ ಅಧ್ಯಕ್ಷ ಬಿ.ಸುರೇಶ ಮಾತನಾಡಿ, ಜಿಲ್ಲೆಯಲ್ಲಿ ವಿಕಲಚೇತನರ ಮೇಲೆ, ಕುಟುಂಬದವರಿಂದ ಹಾಗೂ ಸಾರ್ವಜನಿಕರಿಂದ ದೌರ್ಜನ್ಯಗಳು ಹೆಚ್ಚುತ್ತಿದ್ದು, ಇತ್ತೀಚೆಗೆ ಸಿಡಿಗಿನಮೊಳ ಗ್ರಾಮದಲ್ಲಿ ವಿಕಲಚೇತನ ಮಹಿಳೆ ಸುನೀತ ಅವರನ್ನು ಆಕೆಯ ಪತಿಯೇ ವರದಕ್ಷಿಣೆ ಕಿರುಕುಳ ನೀಡಿ, ಕೊಲೆ ಮಾಡಿರುವ ವರದಿಯಾಗಿದ್ದು, ಈ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಎಂ.ಲಕ್ಷ ್ಮಣ, ಉಪಾಧ್ಯಕ್ಷ ತಿಪ್ಪಣ್ಣ, ಸತ್ಯಪ್ಪ, ರಾಮನಾಯ್ಕ, ಪ್ರಧಾನ ಕಾರ್ಯದರ್ಶಿ ಶೇಖಪ್ಪ, ಯಂಕಪ್ಪ, ದೇವಮ್ಮ ಸೇರಿದಂತೆ ಇನ್ನಿತರರಿದ್ದರು. ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಪಿಎಸ್‌.ಐ ದೊಡ್ಡಪ್ಪ ಜೆ ಅವರ ಮೂಲಕ ಮನವಿ ರವಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ