ಆ್ಯಪ್ನಗರ

ರೂರ್ಬನ್‌ ವೈಜ್ಞಾನಿಕ ಅನುಷ್ಠಾನಕ್ಕೆ ಆಗ್ರಹಿಸಿ ಮನವಿ

ಕೈಗಾರಿಕೆಗಳ ಸಂಕೀರ್ಣದಂತಿರುವ ತೋರಣಗಲ್ಲು ಮತ್ತು ತಾಳೂರು ಗ್ರಾಮಗಳನ್ನು ರೂರ್ಬನ್‌ ಯೋಜನೆಯಡಿ ವೈಜ್ಞಾನಿಕವಾಗಿ ರೂಪಿಸುವಂತೆ ಒತ್ತಾಯಿಸಿ, ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್‌, ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ ಪದಾಧಿಕಾರಿಗಳು ಪಟ್ಟಣದ ತಾ.ಪಂ.ಕಚೇರಿಯಲ್ಲಿ ಇಒ ಜೆ.ಎಂ.ಅನ್ನದಾನಯ್ಯಸ್ವಾಮಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.

Vijaya Karnataka 15 Sep 2018, 5:00 am
ಸಂಡೂರು ; ಕೈಗಾರಿಕೆಗಳ ಸಂಕೀರ್ಣದಂತಿರುವ ತೋರಣಗಲ್ಲು ಮತ್ತು ತಾಳೂರು ಗ್ರಾಮಗಳನ್ನು ರೂರ್ಬನ್‌ ಯೋಜನೆಯಡಿ ವೈಜ್ಞಾನಿಕವಾಗಿ ರೂಪಿಸುವಂತೆ ಒತ್ತಾಯಿಸಿ, ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್‌, ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ ಪದಾಧಿಕಾರಿಗಳು ಪಟ್ಟಣದ ತಾ.ಪಂ.ಕಚೇರಿಯಲ್ಲಿ ಇಒ ಜೆ.ಎಂ.ಅನ್ನದಾನಯ್ಯಸ್ವಾಮಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
Vijaya Karnataka Web rurban requested for scientific implementation
ರೂರ್ಬನ್‌ ವೈಜ್ಞಾನಿಕ ಅನುಷ್ಠಾನಕ್ಕೆ ಆಗ್ರಹಿಸಿ ಮನವಿ


ಸಿಐಟಿಯು ತಾಲೂಕು ಅಧ್ಯಕ್ಷ ಜೆ.ಎಂ.ಚನ್ನಬಸಯ್ಯ ಮಾತನಾಡಿ, ಕೈಗಾರಿಕೆಗಳ ಸ್ಥಾಪನೆಯಿಂದ ತಾಲೂಕಿನ ತೋರಣಗಲ್ಲು ಮತ್ತು ತಾಳೂರು ಗ್ರಾಮಗಳು ಜನನಿಬಿಡ ಪ್ರದೇಶಗಳಾಗಿವೆ. ಈ ಭಾಗದಲ್ಲಿ ಶುದ್ಧ ಕುಡಿವ ನೀರು, ಆರೋಗ್ಯ, ಶಿಕ್ಷ ಣ, ರಸ್ತೆ, ಚರಂಡಿ, ವಸತಿ ವ್ಯವಸ್ಥೆ ಸೇರಿ ನಾನಾ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಸದರಿ ಗ್ರಾ.ಪಂ.ಗಳಲ್ಲಿ ತೆರಿಗೆ ವಂಚನೆ, ಸ್ವ ಹಿತಾಸಕ್ತಿ ಸೇರಿ ನಾನಾ ಕಾರಣಗಳಿಂದ ಅಭಿವೃದ್ಧಿ ಶೂನ್ಯವಾಗಿದೆ. ಇದೀಗ ಕೇಂದ್ರದ ರೂರ್ಬನ್‌ ಯೋಜನೆಯಡಿ ಆಯ್ಕೆಯಾದ ಈ ಗ್ರಾ.ಪಂ.ಗಳಲ್ಲಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಡಿವೈಎಫ್‌ಐ ಎನ್‌.ಈರಣ್ಣ ಸೇರಿದಂತೆ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ