ಆ್ಯಪ್ನಗರ

ಅಕ್ರಮ ಗಣಿಗಾರಿಕೆ: ಸಚಿವ ಆನಂದ್‌ ಸಿಂಗ್‌ ಸಹೋದರಿ ಮನೆ, ಕಚೇರಿ ಮೇಲೆ ಎಸ್‌ಐಟಿ ದಾಳಿ

ಹೊಸಪೇಟೆ ಗಣಿ ಮಾಲೀಕರಾದ ರಾಣಿ ಸಂಯುಕ್ತ ಎರಡು ಮನೆ ಮತ್ತು ಕಚೇರಿಯ ಮೇಲೆ ಎಸ್.ಐ.ಟಿ‌.ದಾಳಿ. ಜೋಳದ ರಾಶಿ ಗುಡ್ಡದ ಬಳಿಯಿರುವ ರಾಣಿ ಸಂಯುಕ್ತ ಹೊಸ ಮನೆ, ಕಾಲೇಜು ರಸ್ತೆಯಲ್ಲಿನ ಹಳೇ ನಿವಾಸ ಹಾಗೂ ಎಂ.ಪಿ.ಪ್ರಕಾಶ್ ನಗರದಲ್ಲಿರುವ ಕಚೇರಿಯ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

Vijaya Karnataka Web 24 Sep 2020, 7:29 pm
ಬಳ್ಳಾರಿ: 2015ರಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣ ಮುನ್ನೆಲೆಗೆ ಬಂದಿದೆ. ಹೊಸಪೇಟೆ ಗಣಿ ಮಾಲೀಕರ ಕಚೇರಿ ಮತ್ತು ಮನೆಗಳಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ದಾಳಿ ನಡೆಸಿದೆ.
Vijaya Karnataka Web ಹೊಸಪೇಟೆ ಮನೆ
ಹೊಸಪೇಟೆ ಮನೆ

ಹೊಸಪೇಟೆ ಗಣಿ ಮಾಲೀಕರಾದ ರಾಣಿ ಸಂಯುಕ್ತ ಎರಡು ಮನೆ ಮತ್ತು ಕಚೇರಿಯ ಮೇಲೆ ಎಸ್.ಐ.ಟಿ‌.ದಾಳಿ. ಜೋಳದ ರಾಶಿ ಗುಡ್ಡದ ಬಳಿಯಿರುವ ರಾಣಿ ಸಂಯುಕ್ತ ಹೊಸ ಮನೆ, ಕಾಲೇಜು ರಸ್ತೆಯಲ್ಲಿನ ಹಳೇ ನಿವಾಸ ಹಾಗೂ ಎಂ.ಪಿ.ಪ್ರಕಾಶ್ ನಗರದಲ್ಲಿರುವ ಕಚೇರಿಯ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಣಿ ಸಂಯುಕ್ತ ಅವರು ಅರಣ್ಯ ಸಚಿವ ಆನಂದ್ ಸಿಂಗ್ ಸಹೋದರಿ ಹಾಗೂ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ.

ಕೃಷ್ಣ ಮಿನರಲ್ಸ್ ಮೇಲೆ ಇದ್ದ ಹಳೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣಿ ಸಂಯುಕ್ತ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಇನ್ಸ್‌ಪಕ್ಟರ್ ಲಕ್ಷ್ಮಿನಾರಾಣ ಹಾಗೂ ರಾಘವೇಂದ್ರ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ