ಆ್ಯಪ್ನಗರ

ಜೂ.21 ರಿಂದ ರಾಜ್ಯಮಟ್ಟದ ಪೆಡಿಕ್ರಿಟಿಕಾನ್‌ ಸಮ್ಮೇಳನ

ಮಕ್ಕಳ ತೀವ್ರ ನಿಗಾ ಪಾಲನೆ ಸೌಲಭ್ಯ ಗ್ರಾಮೀಣ ಭಾಗಕ್ಕೂ ತಲುಪಲೆಂಬ ಉದ್ದೇಶದಿಂದ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿ, ವಿಮ್ಸ್‌ ಆಸ್ಪತ್ರೆಯ ಮಕ್ಕಳ ವಿಭಾಗದಿಂದ ಜೂ.21ರಿಂದ 23ರವರೆಗೆ ತೋರಣಗಲ್ಲುನಲ್ಲಿ ರಾಜ್ಯಮಟ್ಟದ 10 ನೇ ಸಮ್ಮೇಳನ ಪೆಡಿಕ್ರಿಟಿಕಾನ್‌ 2019 ಹಮ್ಮಿಕೊಳ್ಳಲಾಗಿದೆ

Vijaya Karnataka 20 Jun 2019, 5:00 am
ಬಳ್ಳಾರಿ: ಮಕ್ಕಳ ತೀವ್ರ ನಿಗಾ ಪಾಲನೆ ಸೌಲಭ್ಯ ಗ್ರಾಮೀಣ ಭಾಗಕ್ಕೂ ತಲುಪಲೆಂಬ ಉದ್ದೇಶದಿಂದ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿ, ವಿಮ್ಸ್‌ ಆಸ್ಪತ್ರೆಯ ಮಕ್ಕಳ ವಿಭಾಗದಿಂದ ಜೂ.21ರಿಂದ 23ರವರೆಗೆ ತೋರಣಗಲ್ಲುನಲ್ಲಿ ರಾಜ್ಯಮಟ್ಟದ 10 ನೇ ಸಮ್ಮೇಳನ ಪೆಡಿಕ್ರಿಟಿಕಾನ್‌ 2019 ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ.ವೈ.ಸಿ.ಯೋಗಾನಂದ ರೆಡ್ಡಿ ತಿಳಿಸಿದರು.
Vijaya Karnataka Web statewide pedicriticon conference from june 21st
ಜೂ.21 ರಿಂದ ರಾಜ್ಯಮಟ್ಟದ ಪೆಡಿಕ್ರಿಟಿಕಾನ್‌ ಸಮ್ಮೇಳನ


ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶದಲ್ಲಿ ಮಕ್ಕಳ ತೀವ್ರ ನಿಗಾ ಪಾಲನೆಯು ತ್ವರಿತಗತಿಯಲ್ಲಿ ಪ್ರಗತಿ ಕಾಣುತ್ತಿದ್ದರೂ, ದೊಡ್ಡ ನಗರಗಳಿಗಷ್ಟೇ ಸೀಮಿತಗೊಂಡಿದೆ. ಗ್ರಾಮಾಂತರ ಪ್ರದೇಶಗಳಿಗೆ ತಲುಪಿಲ್ಲ. ಗ್ರಾಮಾಂತರ ಮತ್ತು ಪಟ್ಟಣಗಳ ಮಕ್ಕಳು, ವೈದ್ಯರನ್ನು ಗುರಿಯಾಗಿಸಿಕೊಂಡು ಕಾರ್ಯಾಗಾರ, ವೈಜ್ಞಾನಿಕ ಅಧಿವೇಶನ ಹಾಗೂ ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದರು.

ಕಾರ್ಯಾಗಾರ:

ಮೂರು ದಿನಗಳ ಸಮ್ಮೇಳನದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉಸಿರಾಟದ ಸೌಕರ್ಯ ಕಡಿಮೆ ಇರುವ ಕಡೆ ತೀವ್ರ ನಿಗಾ ಚಿಕಿತ್ಸೆ ಕೊಡುವುದರ ಕುರಿತು ಮೊದಲ ದಿನ 120 ಸ್ನಾತಕೋತ್ತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಲಿದೆ. ಎರಡನೇ ದಿನ ಮಕ್ಕಳ ತೀವ್ರ ನಿಗಾ ಕುರಿತು ನರ್ಸಿಂಗ್‌ ಸಿಬ್ಬಂದಿಗೆ ಹಾಗೂ ಮೂರನೇ ದಿನ ತುರ್ತು ಸಂದರ್ಭಗಳಲ್ಲಿ ಜೀವ ರಕ್ಷ ಣಾ ಬೆಂಬಲ ನೀಡುವ ಕುರಿತು ಜಿಂದಾಲ್‌ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ. ಉಪನ್ಯಾಸ ನೀಡಲು ತಮಿಳುನಾಡು, ಮಾಹಾರಾಷ್ಟ್ರ ಸೇರಿ ವಿವಿಧ ಭಾಗಗಳಿಂದ ಸುಮಾರು 80 ಕ್ಕೂ ಹೆಚ್ಚು ವೈದ್ಯರು ಆಗಮಿಸಲಿದ್ದಾರೆ. ರಾಜ್ಯದ 450ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುವರು ಎಂದರು.

ಜೂ.21ರಂದು ಕಾರ್ಯಾಗಾರ ಆರಂಭವಾಗಲಿದೆ. 22ರಂದು ಸಂಜೆ ವೈದ್ಯಕೀಯ ಶಿಕ್ಷ ಣ ಸಚಿವ ಈ.ತುಕಾರಾಂ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಜಿಂದಾಲ್‌ ಉಕ್ಕಿನ ಕಾರ್ಖಾನೆಯ ಉಪ ವ್ಯವಸ್ಥಾಪಕ ನಿರ್ದೇಶಕ ವಿನೋದ್‌ ನಾವೆಲ್‌, ಉಕ್ಕಿನ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಪಟ್ಟಣಶೆಟ್ಟಿ, ಉಪಾಧ್ಯಕ್ಷ ಮಂಜುನಾಥ ಪ್ರಭು, ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ಅಧ್ಯಕ್ಷ ಡಾ.ಬಕುಲ್‌ ಪಾರೇಖಾ, ನಿಕಟಪೂರ್ವ ಅಧ್ಯಕ್ಷ ಡಾ.ಸಂತೋಷ್‌ ಸೋಸ್ಸ್‌, ಮಕ್ಕಳ ತೀವ್ರ ನಿಗಾ ಪಾಲನೆ ಸಂಘದ ರಾಜ್ಯಅಧ್ಯಕ್ಷ ಡಾ.ಬಾಬಣ್ಣ ಹುಕ್ಕೇರಿ ಸೇರಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಐಎಪಿ ಜಿಲ್ಲಾ ಶಾಖೆಯ ಅಧ್ಯಕ್ಷ ಎಸ್‌.ಕೆ.ಅಜಯ…, ಮಕ್ಕಳ ವೈದ್ಯರಾದ ಎಚ್‌.ದುರುಗಪ್ಪ, ಎಂ.ಬಾಲವೆಂಕಟೇಶ್ವರ ರಾವ್‌, ಬಿ.ಕೆ.ಶ್ರೀಕಾಂತ್‌, ಡಾ.ಪಿ.ಸುನಿಲ್‌ ಕುಮಾರ್‌, ಡಿ.ಭಾವನಾ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ