ಆ್ಯಪ್ನಗರ

ಜಿಲ್ಲೆಯ ನಾನಾ ಕಡೆ ಶಿಕ್ಷಕರ ದಿನಾಚರಣೆ

ಶಿಕ್ಷಕರು ಕರ್ತವ್ಯ ಪ್ರಜ್ಞೆ ಮೆರೆದಲ್ಲಿ ಅರ್ಥಪೂರ್ಣ ಸಮಾಜ ನಿರ್ಮಾಣ ಹಾಗೂ ಉತ್ತಮ ಇತಿಹಾಸ ಸೃಷ್ಟಿಸಲು ಸಾಧ್ಯ ಎಂದು ಶಾಸಕ ಈ.ತುಕಾರಾಮ್‌ ಹೇಳಿದರು.

Vijaya Karnataka 6 Sep 2018, 5:00 am
ಸಂಡೂರು : ಶಿಕ್ಷಕರು ಕರ್ತವ್ಯ ಪ್ರಜ್ಞೆ ಮೆರೆದಲ್ಲಿ ಅರ್ಥಪೂರ್ಣ ಸಮಾಜ ನಿರ್ಮಾಣ ಹಾಗೂ ಉತ್ತಮ ಇತಿಹಾಸ ಸೃಷ್ಟಿಸಲು ಸಾಧ್ಯ ಎಂದು ಶಾಸಕ ಈ.ತುಕಾರಾಮ್‌ ಹೇಳಿದರು.
Vijaya Karnataka Web BLR-BLY 5 SDR 1


ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷ ಕರ ದಿನಾಚರಣೆಯನ್ನು ಉದ್ದೇಶಿಸಿ ಬುಧವಾರ ಮಾತನಾಡಿದರು.

ಹುಲಿಕೋಟಿಯ ಉಪನ್ಯಾಸಕ ಡಾ.ಅರ್ಜುನ ಗೋಳಸಂಗಿ ಮಾತನಾಡಿದರು.

ಇದೇ ಸಂದರ್ಭ ಮರು ಮದುವೆಯಾದ ಇಬ್ಬರು ವಿಧವೆಯರಿಗೆ ತಲಾ 3 ಲಕ್ಷ ರೂ. ಚೆಕ್‌ಗಳನ್ನು ಪ್ರೋತ್ಸಾಹ ಧನವಾಗಿ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಫಲಿತಾಂಶ ಪಥ ಸಂಗ್ರಹ ಲೇಖನಗಳ ಪುಸ್ತಕ ಬಿಡುಗಡೆ ಮಾಡಲಾಯಿತು.

ಇದೇ ಮೊದಲ ಬಾರಿಗೆ ತಮ್ಮ ಪತ್ನಿ ಅನ್ನಪೂರ್ಣ ಅವರೊಂದಿಗೆ ಶಾಸಕ ಈ.ತುಕಾರಾಮ್‌ ಕಾರ್ಯಕ್ರಮಕ್ಕೆ ಆಗಮಿಸಿ ಅಚ್ಚರಿ ಮೂಡಿಸಿದರು.

ಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಪ್ರಭುಸ್ವಾಮೀಜಿ, ತಾ.ಪಂ.ಅಧ್ಯಕ್ಷೆ ಫರ್ಜಾನಾ ಗೌಸ್‌ ಆಜಂ, ಉಪಾಧ್ಯಕ್ಷೆ ಗಂಗಾಬಾಯಿ ಚಂದ್ರಾನಾಯ್ಕ, ಇಒ ಅನ್ನದಾನಯ್ಯಸ್ವಾಮಿ, ತಹಸೀಲ್ದಾರ್‌ ಎಚ್‌.ಎಂ.ರಮೇಶ, ಕ್ಷೇತ್ರ ಶಿಕ್ಷ ಣ ಸಮನ್ವಯಾಧಿಕಾರಿ ಉಮಾಪತಿ, ಜಿ.ಪಂ.ಸದಸ್ಯರಾದ ಸೌಭಾಗ್ಯ ತಿರುಮಲ, ಸರಸ್ವತಿ ಯರಿಸ್ವಾಮಿರೆಡ್ಡಿ, ಪುಸರಭೆ ಅಧ್ಯಕ್ಷ ಗಡಂಬ್ಲಿ ಚನ್ನಪ್ಪ, ಉಪಾಧ್ಯಕ್ಷ ಕೆ.ವಿ.ಸುರೇಶ, ಶಿಕ್ಷ ಕರ ಸಂಘದ ಎಂ.ಆರ್‌.ಸುಮನ್‌, ತಿಪ್ಪೇಸ್ವಾಮಿ, ಎಂ.ಟಿ.ರಾಥೋಡ್‌, ಗುರುಪ್ರಸಾದ್‌, ದಂಡೆಪ್ಪ, ಕೆ.ಕುಮಾರಸ್ವಾಮಿ, ಜಿ.ಎಸ್‌.ಸೋಮಪ್ಪ, ಶ್ರೀರಾಮ್‌, ಸಿದ್ದಣ್ಣ ಯಳವಾರ, ಬಿ.ದಕ್ಷಿಣಾಮೂರ್ತಿ ಸೇರಿ ಇತರರಿದ್ದರು. ಬಿಇಒ ಡಾ.ಐ.ಆರ್‌. ಅಕ್ಕಿ, ಬಿಸಿಯೂಟ ಯೋಜನಾಧಿಕಾರಿ ತೇನ್‌ಸಿಂಗ್‌ ನಾಯ್ಕ ನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ