ಆ್ಯಪ್ನಗರ

ಪಕ್ಷಿಗೆ ‘ಬಲೆ’ ಭಯ, ಕ್ಯಾಟ್‌ ಮೀನು ಕಾಟ

ತಾಲೂಕಿನ ಅಂಕಸಮುದ್ರ ಗ್ರಾಮದ ಪಕ್ಷಿಧಾಮದಲ್ಲಿ ನಾನಾ ಹಕ್ಕಿಗಳ ಸಂತಾನೋತ್ಪತ್ತಿ ಆರಂಭಗೊಂಡಿದೆ. ಒಂದೆಡೆ ಮೀನುಗಾರರು ಪಕ್ಷಿಗಳ ಅಭಯಕ್ಕೆ ಅಡ್ಡಿಯಾಗುತ್ತಿದ್ದರೆ, ಮತ್ತೊಂದೆಡೆ ಹೆಚ್ಚಿನ ಸಂಖ್ಯೆಯಲ್ಲಿರುವ ಆಫ್ರಿಕನ್‌ ಕ್ಯಾಟ್‌ ಮೀನುಗಳು ನೀರಿನ ಆಹಾರ ನುಂಗಿ ಹಾಕುತ್ತಿವೆ.

Vijaya Karnataka Web 16 Jul 2018, 4:26 pm
ಬಸವರಾಜ ಅಯ್ಯನಗೌಡರ, ಹಗರಿಬೊಮ್ಮನಹಳ್ಳಿ
Vijaya Karnataka Web the bird is a trap fear catfish
ಪಕ್ಷಿಗೆ ‘ಬಲೆ’ ಭಯ, ಕ್ಯಾಟ್‌ ಮೀನು ಕಾಟ


ತಾಲೂಕಿನ ಅಂಕಸಮುದ್ರ ಗ್ರಾಮದ ಪಕ್ಷಿಧಾಮದಲ್ಲಿ ನಾನಾ ಹಕ್ಕಿಗಳ ಸಂತಾನೋತ್ಪತ್ತಿ ಆರಂಭಗೊಂಡಿದೆ. ಒಂದೆಡೆ ಮೀನುಗಾರರು ಪಕ್ಷಿಗಳ ಅಭಯಕ್ಕೆ ಅಡ್ಡಿಯಾಗುತ್ತಿದ್ದರೆ, ಮತ್ತೊಂದೆಡೆ ಹೆಚ್ಚಿನ ಸಂಖ್ಯೆಯಲ್ಲಿರುವ ಆಫ್ರಿಕನ್‌ ಕ್ಯಾಟ್‌ ಮೀನುಗಳು ನೀರಿನ ಆಹಾರ ನುಂಗಿ ಹಾಕುತ್ತಿವೆ.

ಪಕ್ಷಿಧಾಮದಲ್ಲಿ ಇದೀಗ ಗೋ ಹಕ್ಕಿ, ಒರಟೆ, ಸ್ಪಾಟ್‌ಬಿಲ್ಡ್‌ ಡಕ್‌, ಗ್ರೇಹೆರಾನ್‌ ಹಕ್ಕಿಗಳ ಸಂತಾನೋತ್ಪತ್ತಿ ಭರದಿಂದ ಸಾಗಿದೆ. ಬಹುತೇಕ ಹಕ್ಕಿಗಳು ತೊಟ್ಟಿಲು ಕಟ್ಟುವ ಕಾರ್ಯದಲ್ಲಿವೆ. ಪೇಟೆಂಡ್‌ ಸ್ಟಾರ್ಕ್‌ ಹಕ್ಕಿಗಳು ಸಂತಾನೋತ್ಪತ್ತಿ ಪೂರ್ಣಗೊಳಿಸಿದ್ದು, ಕುಟುಂಬದ ಸದಸ್ಯರ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ, ಅತ್ಯಂತ ಸೂಕ್ಷ ್ಮ ಸ್ವಭಾವದ ಸ್ಪಾಟ್‌ ಬಿಲ್ಡ್‌ ಡಕ್‌, ಗೋ ಹಕ್ಕಿಗಳಿಗೆ ಮೀನುಗಾರರ ಕಾಟ ಹೆಚ್ಚಿದ್ದು, ಆವಾಸಕ್ಕೆ ಧಕ್ಕೆ ತರುವಂತಿದೆ.

ಬಲೆ ಭಯ: ಹಲವೆಡೆ ಮೀನುಗಾರರು ಬಲೆ ಬೀಸಿದ್ದು, ಹಕ್ಕಿಗಳು ಆಹಾರ ಹುಡುಕಾಟಕ್ಕೆ ತೆರಳುವ ವೇಳೆ ಬಲೆಗಳು ಕಾಲಿಗೆ ಸಿಕ್ಕಿಕೊಳ್ಳುವಂತಿದೆ. ಇದರಿಂದಾಗಿ ಕೆಲ ಹಕ್ಕಿಗಳು ಬಲೆಯಲ್ಲೇ ಪ್ರಾಣಪಕ್ಷಿ ಕಳೆದುಕೊಂಡಿವೆ. ಪಕ್ಷಿಪ್ರೇಮಿಗಳು ಹಲವು ಬಾರಿ ಗ್ರಾಮಸ್ಥರಿಗೆ ಮೀನುಗಾರಿಕೆ ನಡೆಸದಂತೆ ಕೋರಿದ್ದರೂ ಪ್ರಯೋಜನವಾಗಿಲ್ಲ. ಬದಲಿಗೆ ಪಕ್ಷಿಪ್ರೇಮಿಗಳೇ ಅಲ್ಲಲ್ಲಿ ಬಲೆ ತೆರವುಗೊಳಿಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ.

ಜೀವ ವೈವಿಧ್ಯತೆಗೆ ಧಕ್ಕೆ: ಆಫ್ರಿಕನ್‌ ಕ್ಯಾಟ್‌ ಮೀನು, ಹಕ್ಕಿಗಳ ಆಹಾರವನ್ನು ನುಂಗಿಹಾಕುತ್ತಿದೆ. ನದಿ ನೀರಿನ ಮೂಲಕ ಲಕ್ಷಾಂತರ ಮೀನಿನ ಮರಿಗಳು ಕೆರೆ ಸೇರಿವೆ. ಜತೆಗೆ 10 ಸಾವಿರಕ್ಕೂ ಹೆಚ್ಚು ಮೀನಿನ ಮೊಟ್ಟೆಗಳನ್ನು ಕೆರೆಗೆ ಬಿಡಲಾಗಿದೆ. ಪಕ್ಷಿ ಪ್ರೇಮಿಗಳು ಆ ಮೂಲಕ ಆಹಾರದ ವ್ಯವಸ್ಥೆ ಮಾಡಿದ್ದಾರೆ. ಸಾಮಾನ್ಯವಾಗಿ ಕೆರೆಯ ನೀರು ಖಾಲಿಯಾಗುತ್ತಿದ್ದಂತೆ 6ತಿಂಗಳು ಕೆಸರಲ್ಲಿ ಹೂತಿಟ್ಟುಕೊಳ್ಳುವ ಆಫ್ರಿಕನ್‌ ಕ್ಯಾಟ್‌ (ಮರುಗೋಡ) ಮೀನು, ಪುನಃ ನೀರು ತುಂಬುತ್ತಿದ್ದಂತೆ ಮೇಲೆ ಕಾಣಿಸಿಕೊಳ್ಳುವ ಸ್ವಭಾವದ್ದಾಗಿದೆ. ಇದೇ ಮೀನು ಕೆರೆಯಲ್ಲಿನ ಪಕ್ಷಿ ಆಹಾರವನ್ನು ಹೊಟ್ಟೆಗೆ ಹಾಕಿಕೊಳ್ಳುತ್ತಿದೆ. ಇದರಿಂದ, ಜೀವವೈವಿಧ್ಯತೆಗೂ ಹಾನಿಯುಂಟಾಗುತ್ತಿದೆ.

ಇಚ್ಛಾಶಕ್ತಿ ಕೊರತೆ: 244 ಎಕರೆಯಷ್ಟು ಬೃಹತ್‌ ಕೆರೆಯಲ್ಲಿ ನೂರಾರು ಸಂತತಿಯ ಪಕ್ಷಿಗಳು ಬೀಡುಬಿಟ್ಟಿವೆ. ಕೆರೆಯ ಅಪಾರ ಪ್ರದೇಶ ಒತ್ತುವರಿಯಾಗಿದ್ದು, ಪಕ್ಷಿಧಾಮದ ಅಭಿವೃದ್ಧಿಗೆ ಧಕ್ಕೆಯುಂಟಾಗಿದೆ. ಕಳೆದ ಕೆಲ ವರ್ಷಗಳಿಂದ ಪಕ್ಷಿಧಾಮದ ಕೆರೆ ಪ್ರದೇಶವನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕ್ರಮ ಫಲಕಾರಿಯಾಗಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೂ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ನೂರಾರು ಗಿಡಗಳು ಕೆರೆ ಪ್ರದೇಶದಲ್ಲಿ ಹಲವರ ಪಾಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೆರೆ ಪ್ರದೇಶದಲ್ಲಿ ಪಕ್ಷಿಗಳು ಬೀಡು ಬಿಡುವಂತೆ ಹೊಸದಾಗಿ ಅರಣ್ಯೀಕರಣಗೊಳಿಸುವ ಅಗತ್ಯವಿದೆ. ಪಕ್ಷಿಧಾಮದ ಅಭಿವೃದ್ಧಿಗೆ ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮಗಳು ಕುಟುಂತ್ತಾ ಸಾಗಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ