ಆ್ಯಪ್ನಗರ

ರಸ್ತೆ ವಿಸ್ತರಣೆ ಕಾಮಗಾರಿ ವೈಜ್ಞಾನಿಕವಾಗಿ ಕೈಗೊಳ್ಳಲು ಆಗ್ರಹ

ಪಟ್ಟಣದ ಕಂಪ್ಲಿ ರಸ್ತೆಯಲ್ಲಿ ನಡೆಯುವ ರಸ್ತೆ ವಿಸ್ತರಣೆಯನ್ನು ಮದ್ಯಭಾಗದಿಂದ, ಚರಂಡಿ ಕಾಮಗಾರಿಯನ್ನು ಎರಡು ಬದಿಯಲ್ಲಿ ಸಮಾನ ರೀತಿಯಲ್ಲಿ ಕಾಮಗಾರಿ ನಿರ್ಮಿಸುವಂತೆ ಆಗ್ರಹಿಸಿ, ಪುರಸಭೆ ಮುಖ್ಯಾಧಿಕಾರಿಗೆ ಕಂಪ್ಲಿ ರಸ್ತೆಯ ನಿವಾಸಿಗಳು ಮನವಿ ಸಲ್ಲಿಸಿದರು.

Vijaya Karnataka 2 Mar 2019, 5:00 am
ಕುರುಗೋಡು : ಪಟ್ಟಣದ ಕಂಪ್ಲಿ ರಸ್ತೆಯಲ್ಲಿ ನಡೆಯುವ ರಸ್ತೆ ವಿಸ್ತರಣೆಯನ್ನು ಮದ್ಯಭಾಗದಿಂದ, ಚರಂಡಿ ಕಾಮಗಾರಿಯನ್ನು ಎರಡು ಬದಿಯಲ್ಲಿ ಸಮಾನ ರೀತಿಯಲ್ಲಿ ಕಾಮಗಾರಿ ನಿರ್ಮಿಸುವಂತೆ ಆಗ್ರಹಿಸಿ, ಪುರಸಭೆ ಮುಖ್ಯಾಧಿಕಾರಿಗೆ ಕಂಪ್ಲಿ ರಸ್ತೆಯ ನಿವಾಸಿಗಳು ಮನವಿ ಸಲ್ಲಿಸಿದರು.
Vijaya Karnataka Web the demand for the extension of road expansion work scientifically
ರಸ್ತೆ ವಿಸ್ತರಣೆ ಕಾಮಗಾರಿ ವೈಜ್ಞಾನಿಕವಾಗಿ ಕೈಗೊಳ್ಳಲು ಆಗ್ರಹ


ಕಂಪ್ಲಿ ರಸ್ತೆಯಲ್ಲಿನ ಕಟ್ಟಡ ಮಾಲೀಕರು ಮಾತನಾಡಿ, ಕಂಪ್ಲಿ ರಸ್ತೆ ವಿಸ್ತರಣೆ ಮಾಡುವುದು ಒಳ್ಳೆಯ ಬೆಳವಣಿಗೆ. ಆದರೆ ರಸ್ತೆ ವಿಸ್ತರಣೆ ಮಾಡುವ ವೇಳೆ ಪರಸಭೆ ಅಧಿಕಾರಿಗಳು ಎರಡು ಕಡೆಗೆ ಸಮಾನಾಂತರವಾಗಿ ವಿಸ್ತರಣೆ ಮಾಡಬೇಕು. ಈಗಾಗಲೇ ಒಂದು ಕಡೆ 33 ಅಡಿಯಷ್ಟು ರಸ್ತೆ ಮದ್ಯಭಾಗದಿಂದ ಚರಂಡಿ ನಿರ್ಮಾಣ ಮಾಡಿದ್ದಾರೆ. ಈಗ ಅಧಿಕಾರಿಗಳು ಇನ್ನೊಂದು ಬದಿಯಲ್ಲಿ 33 ಅಡಿಯಷ್ಟು ರಸ್ತೆ ಮಾಡಬೇಕು. ಒಂದು ವೇಳೆ ಅಧಿಕಾರಿಗಳು ರಸ್ತೆ ವಿಸ್ತರಣೆ ವಿಷಯದಲ್ಲಿ ಒಂದು ಹೆಚ್ಚು, ಇನ್ನೊಂದು ಕಡೆ ಕಡಿಮೆ ವಿಸ್ತರಣೆ ಮಾಡಿದರೆ ಹೋರಾಟ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಾಧಿಕಾರಿ ಫಿರೋಜ್‌ಖಾನ್‌, ಮೇಲಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ ತಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಂಪ್ಲಿ ರಸ್ತೆಯ ಕಟ್ಟಡ ನಿವಾಸಿಗಳಾದ ಕೆ.ದೇವೆಂದ್ರಪ್ಪ, ಬುಟ್ಟಾ ಮಲ್ಲಿಕಾರ್ಜುನ, ಎನ್‌ಎಂ.ಸುರೇಶ್‌, ಶೇಷಗಿರಿರಾವ್‌, ಡಾಕ್ಟರ್‌ ಸುರೇಶ್‌, ಯಂಕಪ್ಪಶೆಟ್ಟಿ, ಟಿ.ಖಾಜಾಸಾಬ್‌, ಸದಾಶಿವಪ್ಪ, ವೀರೇಶ್‌ ಸೇರಿದಂತೆ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ