ಆ್ಯಪ್ನಗರ

ನೂಲು ತೆಗೆಯುವವರ ಕೂಲಿ ಹೆಚ್ಚಳ ಶ್ರೀಘ್ರ: ಸಚಿವ

ಖಾದಿ ಮತ್ತು ಗ್ರಾಮೋದ್ಯೋಗ ವಿಭಾಗದಲ್ಲಿ ಕೈಯಿಂದ ನೂಲು ತೆಗೆಯುವ ಕಾರ್ಮಿಕರ ಕೂಲಿ ಹೆಚ್ಚಳಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ(ವಾಸು) ಹೇಳಿದರು.

Vijaya Karnataka 15 Aug 2018, 12:00 am
ಬಳ್ಳಾರಿ: ಖಾದಿ ಮತ್ತು ಗ್ರಾಮೋದ್ಯೋಗ ವಿಭಾಗದಲ್ಲಿ ಕೈಯಿಂದ ನೂಲು ತೆಗೆಯುವ ಕಾರ್ಮಿಕರ ಕೂಲಿ ಹೆಚ್ಚಳಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ(ವಾಸು) ಹೇಳಿದರು.
Vijaya Karnataka Web the increase in the wages of workers
ನೂಲು ತೆಗೆಯುವವರ ಕೂಲಿ ಹೆಚ್ಚಳ ಶ್ರೀಘ್ರ: ಸಚಿವ


ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಮತ್ತು ಜಿಲ್ಲಾಡಳಿತದಿಂದ ನಗರದ ಜಿಲ್ಲಾ ಕ್ರೀಡಾಂಗಣ ಸಮೀಪದ ನಲ್ಲಚೆರವು ಪ್ರದೇಶದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಖಾದಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಕೈಯಲ್ಲಿ ನೂಲು ತೆಗೆಯುವ ಕಾರ್ಮಿಕರು ದಿನಕ್ಕೆ 150 ರೂ.ನಿಂದ 200 ರೂ.ಕೂಲಿ ಪಡೆಯುತ್ತಿದ್ದಾರೆ. ಉದ್ಯೋಗ ಖಾತರಿಗಿಂತಲೂ ಇದು ಕಡಿಮೆ. ಮೊತ್ತ ಹೆಚ್ಚಿಸಲು ಹಲವು ಕಡೆಗಳಿಂದ ಬೇಡಿಕೆ ಬಂದಿದ್ದು, ಪರಿಷ್ಕರಣೆ ಮಾಡಲಾಗುವುದು ಎಂದರು.

ನಷ್ಟದಲ್ಲಿ ನಿಗಮ: ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ನಿಗಮ, ಕಾರ್ಪೊರೇಶನ್‌ಗಳು ನಷ್ಟದಲ್ಲಿವೆ. ಕಾರ್ಪೊರೇಶನ್ ಅಂದಾಜು 13 ಕೋಟಿ ರೂ.ನಷ್ಟದಲ್ಲಿದ್ದರೆ, ನಿಗಮ 8 ಕೋಟಿ ರೂ.ನಷ್ಟದಲ್ಲಿದೆ. ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಾರ್ಮಿಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಏನು ಮಾಡಬೇಕು? ಎನ್ನುವ ಕುರಿತು ಅಧಿಕಾರಿಗಳಿಂದ ವರದಿ ಕೇಳಲಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ