ಆ್ಯಪ್ನಗರ

ಕಳ್ಳನ ಬಂಧನ, 40 ದ್ವಿಚಕ್ರವಾಹನ ಜಪ್ತಿ

ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯ ನಾನಾ ಕಡೆ ಬೈಕ್ ಕಳವು ಮಾಡಿದ್ದ ಆರೋಪಿಯನ್ನು ಗಾಂಧಿನಗರ ಠಾಣೆ ಪೊಲೀಸರು ಬಂಧಿಸಿದ್ದು, 40 ಬೈಕ್ ಜಪ್ತಿ ಮಾಡಿದ್ದಾರೆ.

Vijaya Karnataka 30 Sep 2018, 12:00 am
ಬಳ್ಳಾರಿ: ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯ ನಾನಾ ಕಡೆ ಬೈಕ್ ಕಳವು ಮಾಡಿದ್ದ ಆರೋಪಿಯನ್ನು ಗಾಂಧಿನಗರ ಠಾಣೆ ಪೊಲೀಸರು ಬಂಧಿಸಿದ್ದು, 40 ಬೈಕ್ ಜಪ್ತಿ ಮಾಡಿದ್ದಾರೆ.
Vijaya Karnataka Web thief arrest 40 bicycle seized
ಕಳ್ಳನ ಬಂಧನ, 40 ದ್ವಿಚಕ್ರವಾಹನ ಜಪ್ತಿ


ಗಾಂಧಿನಗರ ಠಾಣೆಯಲ್ಲಿ ಶನಿವಾರ ಎಸ್ಪಿ ಅರುಣ ರಂಗರಾಜನ್ ಸುದ್ದಿಗೋಗಷ್ಠಿ ನಡೆಸಿ ವಿವರ ಒದಗಿಸಿದರು. ಮರಿಯಮ್ಮನಹಳ್ಳಿ ನಿವಾಸಿ ರಾಮಾಂಜಿನಿ ಯಳವರ ಹೊನ್ನೂರಪ್ಪ ಬಂಧಿತ. ಮೂರು ಜಿಲ್ಲೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ತಾಳೂರು ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. 2017 ಮತ್ತು 2018 ರಲ್ಲಿ ಹಲವು ಕಡೆ ಕಳವು ಮಾಡಿದ್ದ. ಕೊಪ್ಪಳ ಜಿಲ್ಲೆಯಲ್ಲಿ 16, ಬಳ್ಳಾರಿಯಲ್ಲಿ 8, ಮರಿಯಮ್ಮನಹಳ್ಳಿಯಲ್ಲಿ 4, ಕೂಡ್ಲಿಗಿಯಲ್ಲಿ 4, ಗಂಗಾವತಿಯಲ್ಲಿ 3, ಹೊಸಪೇಟೆ ಪಟ್ಟಣದಲ್ಲಿ 2, ಹಗರಿಬೊಮ್ಮನಹಳ್ಳಿಯಲ್ಲಿ 1, ಸಿಂಧನೂರಿನಲ್ಲಿ 1, ಯಲಬುರ್ಗಾದಲ್ಲಿ 1 ದ್ವಿಚಕ್ರವಾಹನ ಕಳವು ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾರೆ. ಜಪ್ತಿಯಾದ ಬೈಕ್ ಮೌಲ್ಯ 12 ಲಕ್ಷ 60 ಸಾವಿರ ರೂ.ಎಂದು ಅಂದಾಜಿಸಲಾಗಿದೆ. 8 ಬೈಕ್ ಮಾರಾಟ ಮಾಡಿದ್ದು, ಖರೀದಿ ಮಾಡಿದವರನ್ನು ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿ ಕಳವು ಮಾಡಿದ ಬೈಕ್ ಮಾರಾಟ ಮಾಡುತ್ತಿದ್ದ ಎನ್ನುವುದು ಗೊತ್ತಾಗಿದೆ. ಪ್ರಕರಣ ಭೇದಿಸಿದ ಗಾಂಧಿನಗರ ಠಾಣೆ ಪಿಐ ಆರ್.ನಾಗರಾಜ, ಪಿಎಸ್‌ಐ ರುದ್ರಮುನಿ ಹಾಗೂ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುವುದು ಎಂದರು. ಎಎಸ್ಪಿ ಕೆ.ಜಗದೀಶ,, ಡಿವೈಎಸ್ಪಿ ಉಮೇಶ್ವರ ಈಶ್ವರ ನಾಯ್ಕ್ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ