ಆ್ಯಪ್ನಗರ

ಕುಡಿವ ನೀರು ಯೋಜನೆ ಪೂರ್ಣಗೊಳಿಸಲು ಚಿಂತನೆ

ನಗರ ಪ್ರದೇಶಕ್ಕೆ ಶುದ್ಧ ಕುಡಿವ ನೀರು ಪೂರೈಸುವ ಅಲ್ಲೀಪುರ ಕೆರೆಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 22 May 2018, 5:00 am
ಬಳ್ಳಾರಿ : ನಗರ ಪ್ರದೇಶಕ್ಕೆ ಶುದ್ಧ ಕುಡಿವ ನೀರು ಪೂರೈಸುವ ಅಲ್ಲೀಪುರ ಕೆರೆಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web BLR-BLY21GK1


ಕೆರೆಯಲ್ಲಿನ ನೀರಿನ ಮಟ್ಟ, ಪೈಪ್‌ಲೈನ್‌ ವ್ಯವಸ್ಥೆ, ತುಂಗಭದ್ರಾ ಜಲಾಶಯದಲ್ಲಿನ ನೀರಿನ ಮಟ್ಟ ಹಾಗೂ ಮೋಕಾ ಕೆರೆಯಲ್ಲಿನ ನೀರಿನ ಮಟ್ಟದ ಕುರಿತು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ಎಂಜಿನಿಯರ್‌ಗಳ ಬಳಿ ಅಗತ್ಯ ಮಾಹಿತಿ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲೀಪುರ ಕೆರೆಯಲ್ಲಿ 3.5 ಮೀಟರ್‌ ನೀರಿದೆ. ಮೋಕಾ ಕೆರೆಯಲ್ಲಿ 45 ದಿನಗಳಿಗೆ ಆಗುವಷ್ಟು ನೀರು ಸಂಗ್ರಹಿಸಲಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಒಂದು ಟಿಎಂಸಿಯಷ್ಟು ನೀರನ್ನು ಕುಡಿವ ನೀರಿಗೆ ಮೀಸಲಿರಿಸಲಾಗಿದೆ. ಕೆರೆಯಲ್ಲಿ ನೀರಿದೆಯಾದರೂ ನೀರಿನ ಪೂರೈಕೆ ಸಮರ್ಪಕವಾಗಿ ನಡೆಯುತ್ತಿಲ್ಲ. ಬಲ್ಕ್‌ ವಾಟರ್‌ ಪೂರೈಕೆ ಸರಿಯಾಗಿದೆ. ಜುಲೈ ಅಂತ್ಯದವರೆಗೆ ಕೆರೆಯಲ್ಲಿನ ನೀರನ್ನು ಬಳಕೆ ಮಾಡಿಕೊಳ್ಳಬಹುದು. ಹಾಗಾಗಿ , ಸದ್ಯ ಒಂಬತ್ತು ದಿನಕ್ಕೊಮ್ಮೆ ನೀರನ್ನು ಪೂರೈಸಲಾಗುತ್ತಿದೆ. ಆದರೆ, ಅದನ್ನು ಐದು ದಿನಕ್ಕೊಮ್ಮೆಯಾದರೂ ನೀರು ಪೂರೈಕೆಗೆ ಚಿಂತನೆ ನಡೆಸಲಾಗಿದೆ ಎಂದರು.

ಪಾಲಿಕೆ ಸದಸ್ಯರಾದ ಎಸ್‌.ಮಲ್ಲನಗೌಡ, ಶ್ರೀನಿವಾಸಮೋತ್ಕರ್‌, ಅಧಿಕಾರಿಗಳಾದ ಖಾಜಾ ಹುಸೇನ್‌, ಈರಣ್ಣ, ಭೀಮಣ್ಣ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ