ಆ್ಯಪ್ನಗರ

ಈ ಬಾರಿಯೂ ಗಣಿ ಹಣದ ಸದ್ದು

ಗಣಿ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಈ ಬಾರಿಯೂ ಕುರುಡು ಕಾಂಚಾಣದ ಸದ್ದು ಜೋರಾಗಿದೆ.

Vijaya Karnataka 11 May 2018, 3:16 pm
ಬಳ್ಳಾರಿ ; ಗಣಿ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಈ ಬಾರಿಯೂ ಕುರುಡು ಕಾಂಚಾಣದ ಸದ್ದು ಜೋರಾಗಿದೆ.
Vijaya Karnataka Web this time the sound of mine money
ಈ ಬಾರಿಯೂ ಗಣಿ ಹಣದ ಸದ್ದು


ಕೆಲವು ರಾಜಕೀಯ ಪಕ್ಷಗಳು ಈಗಾಗಲೇ ಮತದಾರರಿಗೆ ಹಣ ತಲುಪಿಸಿದ್ದರೆ, ಇನ್ನೂ ಕೆಲವು ಕಾದು ನೋಡುವ ತಂತ್ರದಲ್ಲಿವೆ. ಶುಕ್ರವಾರ ರಾತ್ರಿಯೊಳಗೆ ಮತದಾರರ ಮನೆ ಬಾಗಿಲಿಗೆ ಹಣ ತಲುಪಿಸಲು ರಹಸ್ಯ ಕಾರ್ಯಾಚರಣೆ ಜಿಲ್ಲಾದ್ಯಂತ ನಡೆದಿದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಪಕ್ಷವೊಂದು 500ರೂ. ಹಂಚಿದ್ದರೆ, ನಗರ ಕ್ಷೇತ್ರದಲ್ಲಿ ಮತ್ತೊಂದು ಪಕ್ಷ ಕೆಲವೆಡೆ ಸೀರೆಗಳನ್ನು ವಿತರಿಸುವ ಜತೆಗೆ ಪ್ರತಿ ವೋಟಿಗೆ 500 ರೂ. ನಿಗದಿಮಾಡಿದೆ. ಮಗದೊಂದು ಪಕ್ಷ ಮತದಾರರಿಗೆ ತಲಾ 200 ರೂ. ಹಂಚಿಕೆ ಮಾಡಿದೆ. ಜಿದ್ದಾಜಿದ್ದಿನ ಕಣವಾಗಿರುವ ಹೊಸಪೇಟೆ ವಿಜಯನಗರ ಕ್ಷೇತ್ರದಲ್ಲಿ ಕೆಲವೊಂದು ರಾಜಕೀಯ ಪಕ್ಷಗಳು ತಲಾ 200 ರೂ. ವಿತರಿಸಿವೆ. ಸಿರುಗುಪ್ಪ, ಕಂಪ್ಲಿ ಸೇರಿ ಇತರ ಕ್ಷೇತ್ರಗಳಲ್ಲೂ ಗಣಿ ಹಣದ ಸದ್ದು ಜೋರಾಗಿದೆ. ಮತದಾನಕ್ಕೂ ಮುಂಚೆ ಮತ್ತಷ್ಟು ಹಣದ ಹಂಚಿಕೆ ನಡೆಯಲಿದೆ ಎಂಬ ಮಾತು ಜಿಲ್ಲಾದ್ಯಂತ ಕೇಳಿಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ