ಆ್ಯಪ್ನಗರ

ಚಾವಣಿ ಕುಸಿವ ಭೀತಿ: ಜೀವ ಭಯದಲ್ಲಿ ಅಧಿಕಾರಿಗಳು

ತಹಸಿಲ್‌ ಕಚೇರಿಯಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುವ ವೇಳೆ ಹತ್ತಾರು ಬಾರಿ ಚಾವಣಿಯತ್ತ ಕಣ್ಣುಹಾಯಿಸುವುದು ಸಾಮಾನ್ಯವಾಗಿದೆ.

Vijaya Karnataka 10 Dec 2018, 5:44 pm
ಹಗರಿಬೊಮ್ಮನಹಳ್ಳಿ : ತಹಸಿಲ್‌ ಕಚೇರಿಯಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುವ ವೇಳೆ ಹತ್ತಾರು ಬಾರಿ ಚಾವಣಿಯತ್ತ ಕಣ್ಣುಹಾಯಿಸುವುದು ಸಾಮಾನ್ಯವಾಗಿದೆ.
Vijaya Karnataka Web toproof fear officers in life fear
ಚಾವಣಿ ಕುಸಿವ ಭೀತಿ: ಜೀವ ಭಯದಲ್ಲಿ ಅಧಿಕಾರಿಗಳು


ಕಳೆದ 4ವರ್ಷಗಳಿಂದಲೂ ಕಚೇರಿ ಚಾವಣಿ ಹಕ್ಕಳೆಗಳಂತೆ ಕಿತ್ತು ಬೀಳುತ್ತಿರುವುದು ಸಾಮಾನ್ಯವಾಗಿದೆ. ಕಳೆದ 2 ವರ್ಷದ ಹಿಂದಷ್ಟೆ ಅಂದಿನ ಶಿರಸ್ತೇದಾರರೊಬ್ಬರು ಚಾವಣಿ ಕಿತ್ತು ಬಿದ್ದು, ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದರು. ಕಳೆದ ಸಾಲಿನಲ್ಲಿ ಇಲ್ಲಿನ ಬೆರಳಚ್ಚುಗಾರ ಕಾರ್ಯನಿರ್ವಹಿಸುವ ಭಾಗದಲ್ಲಿನ ಚಾವಣಿಯ ಕಬ್ಬಿಣದ ಸರಳುಗಳು ಮತ್ತು ಕಾಂಕ್ರಿಟ್‌ ಕಲ್ಲುಗಳಂತೆ ಅಪ್ಪಳಿಸಿತ್ತು. ಇತ್ತೀಚೆಗೆ ಬೆರಳುಚ್ಚುಗಾರರ ಟೇಬಲ್‌ ಮೇಲೆ ಕಲ್ಲುಗಳಂತೆ ಚಾವಣಿಯಿಂದ ಕೆಲ ಚೂರುಗಳು ಅಪ್ಪಳಿಸಿವೆ. ಕಚೇರಿಯ ಹಲವೆಡೆ ಚಾವಣಿ ಕುಸಿಯುವುದು ತೀರಾ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಆಗಾಗ ಮೇಲ್ಭಾಗದತ್ತ ದೃಷ್ಟಿ ನೆಡುವುದು ಸಾಮಾನ್ಯವಾಗಿದೆ.

ನಿರ್ಮಾಣ ನನೆಗುದಿ : ಕಳೆದ 10ವರ್ಷಗಳಿಂದಲೂ ಮಿನಿ ವಿಧಾನಸೌಧ ನಿರ್ಮಾಣ ನನೆಗುದಿ ಬಿದ್ದಿರುವುದು ಸಮಸ್ಯೆಯ ಮೂಲವಾಗಿದೆ. ಜತೆಗೆ ಹಳೆಯ ಕಟ್ಟಡ ನಿರ್ವಹಣೆ ಕುರಿತಂತೆ ಇಲಾಖೆ ನಿರ್ಲಕ್ಷ ್ಯವೂ ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಪಟ್ಟಣದ ಹೊರವಲಯದ ಅಗ್ನಿಶಾಮಕ ಠಾಣೆ ಬಳಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದೆ. 4.5 ಕೋಟಿ ರೂ.ಮೊದಲ ಹಂತದ ಅನುದಾನ ಲಭ್ಯವಿದ್ದರೂ ಕಾಮಗಾರಿ ಆರಂಭವಾಗಿಲ್ಲ. ಪರಿಣಾಮವಾಗಿ ಇಂದಿನ ಹಳೆಯ ಕಟ್ಟಡದಲ್ಲೆ ಕಂದಾಯ ಇಲಾಖೆ ನಾನಾ ಕಚೇರಿಗಳು ಮುಂದುವರಿಯವುದು ಅನಿವಾರ್ಯವಾಗಿದೆ. ಈ ಹಿಂದೆ ಪಟ್ಟಣದ ಈಶ್ವರ ದೇಗುಲದ ಹಿಂಭಾಗದಲ್ಲಿನ ನಿವೇಶವನ್ನು ಮಿನಿ ವಿಧಾನಸೌಧ ನಿರ್ಮಾಣಕ್ಕೆ ಗುರುತಿಸಲಾಗಿತ್ತು. ಹಲವರ ಒತ್ತುವರಿ ತೆರವುಗೊಳಿಸಲಾಗಿತ್ತು. ಆದರೆ, ಉದ್ದೇಶಿತ ಕಟ್ಟಡ ಇದೀಗ ಹೊರವಲಯದ ಹಾದಿ ಹಿಡಿದಿದೆ. ಹಲವು ಇಲಾಖೆಗಳನ್ನು ಒಂದುಗೂಡಿಸುವ ಆಡಳಿತ ಯಂತ್ರವನ್ನು ಸರಳೀಕರಣಗೊಳಿಸುವ ಮಿನಿವಿಧಾನಸೌಧ ಕಟ್ಟಡ ವಿಳಂಬವೇ ಅಧಿಕಾರಿಗಳಿಗೆ ಕುಸಿವ ಚಾವಣಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯತೆ ತಂದೊಡ್ಡಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ