ಆ್ಯಪ್ನಗರ

ಹೊಸಪೇಟೆ: ಮನೆ ಮನೆಗೆ ವಾಹನ ಮೂಲಕ ತರಕಾರಿ ಮಾರಾಟ

ಹೊಸಪೇಟೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದ ಕಾರಣ ಕಳೆದ ಮೂರು ದಿನಗಳಿಂದ ತರಕಾರಿಯ ಆಮದನ್ನು ನಿರ್ಬಂಧಿಸಲಾಗಿತ್ತು. ಈಗ ನಿರ್ಬಂಧವನ್ನು ತೆರವುಗೊಳಿಸಿ ಬೆಳಗ್ಗೆ 5ರಿಂದ 10ರವರೆಗೆ ಕೇವಲ ರೈತರಿಂದ ಸಗಟು ವ್ಯಾಪಾರಿಗಳಿಂದ ತರಕಾರಿಗಳನ್ನು ಕೊಳ್ಳಲು ಅವಕಾಶವಿದೆ

Vijaya Karnataka Web 3 Apr 2020, 4:59 pm
ಬಳ್ಳಾರಿ: ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಹೊಸಪೇಟೆ ನಗರವನ್ನು ಕಂಟೈನ್‌ಮೆಂಟ್ ಝೋನ್ ವ್ಯಾಪ್ತಿಗೆ ಒಳಪಡಿಸಿರುವುದರಿಂದ ಸಾರ್ವಜನಿಕರಿಗೆ ದಿನನಿತ್ಯದ ಬಳಕೆಗೆ ತರಕಾರಿಗಳನ್ನು ತಾಲೂಕು ಆಡಳಿತದ ವತಿಯಿಂದ ಸಂಚಾರಿ ತರಕಾರಿ ಮಾರಾಟದ ವಾಹನಗಳ ಮೂಲಕ ಎಲ್ಲಾ ವಾರ್ಡ್ ಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸಹಾಯಕ ಆಯುಕ್ತ ಶೇಖ್ ತನ್ವೀರ್‌ಆಸೀಫ್ ತಿಳಿಸಿದರು.
Vijaya Karnataka Web ಬಳ್ಳಾರಿ
ಬಳ್ಳಾರಿ


ಹೊಸಪೇಟೆಯ ಪೊಲೀಸ್ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹೊಸಪೇಟೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದ ಕಾರಣ ಕಳೆದ ಮೂರು ದಿನಗಳಿಂದ ತರಕಾರಿಯ ಆಮದನ್ನು ನಿರ್ಬಂಧಿಸಲಾಗಿತ್ತು. ಈಗ ನಿರ್ಬಂಧವನ್ನು ತೆರವುಗೊಳಿಸಿ ಬೆಳಗ್ಗೆ 5ರಿಂದ 10ರವರೆಗೆ ಕೇವಲ ರೈತರಿಂದ ಸಗಟು ವ್ಯಾಪಾರಿಗಳಿಂದ ತರಕಾರಿಗಳನ್ನು ಕೊಳ್ಳಲು ಅವಕಾಶವಿದೆ ಎಂದರು.

ಚಿಲ್ಲರೆ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದ್ದು, ಸಾರ್ವಜನಿಕರಿಗೆ ತರಕಾರಿ ಸರಬರಾಜು ಮಾಡುವ ಸಲುವಾಗಿ ನಗರಸಭೆ ವತಿಯಿಂದ ತರಕಾರಿ ಮಾರಾಟ ಸಂಚಾರಿ ವಾಹನ ವ್ಯವಸ್ಥೆಯನ್ನು ಇಂದಿನಿಂದ ಜಾರಿಗೊಳಿಸಲಾಗಿದೆ ಎಂದು ಶೇಖ್ ತನ್ವೀರ್‌ಆಸೀಫ್ ತಿಳಿಸಿದರು.

ಈ ವ್ಯವಸ್ಥೆಯನ್ನು ಅರಣ್ಯ ಸಚಿವ ಆನಂದ್ ಸಿಂಗ್ ಉದ್ಘಾಟಿಸಿದ್ದು ಪ್ರಾಯೋಗಿಕವಾಗಿ ಶುಕ್ರವಾರ 14 ವಾಹನಗಳನ್ನು ಬಿಡುಗಡೆ ಮಾಡಲಾಗಿದ್ದು, ಶನಿವಾರ 10 ಹೆಚ್ಚು ವಾಹನಗಳನ್ನು ಕಲ್ಪಿಸಲಾಗುತ್ತದೆ ಎಂದರು.

ಹಾಲು ವಿತಕರಿಗೆ ಈಗಾಗಲೇ ವ್ಯವಸ್ಥೆ ಕಲ್ಪಿಸಿದ್ದು ಸಾರ್ವಜನಿಕರು ಡೈರಿಗೆ ಬಾರದಂತೆ ವಿತಕರೇ ಹೆಚ್ಚಿನ ಮಾನವ ಸಂಪನ್ಮೂಲ ಬಳಸಿ ಮನೆಮನೆಗೆ ಸರಬರಾಜು ಮಾಡುವಂತೆ ವಿತರಕರಿಗೆ ಸೂಚಿಸಲಾಗಿದೆ ಎಂದು ಸಹಾಯಕ ಆಯುಕ್ತ ಶೇಖ್ ತನ್ವೀರ್‌ ಆಸೀಫ್ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ