ಆ್ಯಪ್ನಗರ

ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 3 ಸಾವಿರ ವಿಶೇಷ ಅನುದಾನ‌ ನೀಡಿಕೆಗೆ ಬದ್ಧ: ಬೊಮ್ಮಾಯಿ

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ ಈಗ ನೀಡಲಾಗುತ್ತಿರುವ ವಿಶೇಷ ಅನುದಾನ 1500 ಕೋಟಿ ರೂ.ಗಳನ್ನು ನಿಗದಿಪಡಿಸಿದ ಅವಧಿಯೊಳಗೆ ಇದುವರೆಗೆ ಖರ್ಚು ಮಾಡಲಾಗಿಲ್ಲ. ನಿಗದಿಪಡಿಸಿದ ಅವಧಿಯೊಳಗೆ ಅಂದರೇ ಮಾರ್ಚ್ ಅಂತ್ಯದೊಳಗೆ ಖರ್ಚು ಮಾಡುವುದಕ್ಕೆ ಹಾಗೂ ವಿಶೇಷ ಯೋಜನೆಗಳನ್ನು ರೂಪಿಸುವುದಕ್ಕೆ ಅಗತ್ಯ ಸಹಕಾರವನ್ನು ಸರಕಾರ ನೀಡಲಿದೆ. ಸಮರ್ಪಕವಾಗಿ ಅನುದಾನ ಬಳಕೆ ಮಾಡುವುದರ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿ ಎಂದು ಬೊಮ್ಮಾಯಿ ಹೇಳಿದರು.

Vijaya Karnataka Web 3 Oct 2021, 1:12 pm
ಬಳ್ಳಾರಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈಗ ನೀಡಲಾಗುತ್ತಿರುವ 1500 ಕೋಟಿ ರೂ.ಖರ್ಚನ್ನು ನಿಗದಿಪಡಿಸಿದ ಅವಧಿಯೊಳಗೆ ಸಮರ್ಪಕ ಖರ್ಚು ಮಾಡಿದಲ್ಲಿ 3 ಸಾವಿರ ಕೋಟಿ ರೂ. ವಿಶೇಷ ಅನುದಾನವನ್ನು ಇದೇ ವರ್ಷದಿಂದ ಒದಗಿಸುವುದಕ್ಕೆ ನಮ್ಮ ಸರಕಾರ ‌ಬದ್ಧವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನಮ್ಮ ಸರಕಾರ ನೀಡುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಹೇಳಿದರು.
Vijaya Karnataka Web Basavaraj Bommai


ನಗರದ ಆರ್. ವೈ. ಎಂ. ಇ. ಸಿ ಕಾಲೇಜು ಆವರಣದಲ್ಲಿ ಇರುವ ಎಸ್. ಕೆ. ಮೋದಿ ನ್ಯಾಷನಲ್ ಸ್ಕೂಲ್ , ವಿ. ವಿ ಸಂಘದ‌ ಕಿಂಡರ್ ಗಾರ್ಡನ್ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮತ್ತು ಎಸ್. ಕೆ. ಮೋದಿ ಅವರ ಪ್ರತಿಮೆಯನ್ನು ಭಾನುವಾರ ಅನಾವರಣಗೊಳಿಸಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ ಈಗ ನೀಡಲಾಗುತ್ತಿರುವ ವಿಶೇಷ ಅನುದಾನ 1500 ಕೋಟಿ ರೂ.ಗಳನ್ನು ನಿಗದಿಪಡಿಸಿದ ಅವಧಿಯೊಳಗೆ ಇದುವರೆಗೆ ಖರ್ಚು ಮಾಡಲಾಗಿಲ್ಲ. ನಿಗದಿಪಡಿಸಿದ ಅವಧಿಯೊಳಗೆ ಅಂದರೇ ಮಾರ್ಚ್ ಅಂತ್ಯದೊಳಗೆ ಖರ್ಚು ಮಾಡುವುದಕ್ಕೆ ಹಾಗೂ ವಿಶೇಷ ಯೋಜನೆಗಳನ್ನು ರೂಪಿಸುವುದಕ್ಕೆ ಅಗತ್ಯ ಸಹಕಾರವನ್ನು ಸರಕಾರ ನೀಡಲಿದೆ. ಸಮರ್ಪಕವಾಗಿ ಅನುದಾನ ಬಳಕೆ ಮಾಡುವುದರ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕಾಮಗಾರಿಗಳ ಮೇಲೆ ಇಂಧನ, ಕಚ್ಚಾವಸ್ತು ದರ ಏರಿಕೆ ಎಫೆಕ್ಟ್; ಅರ್ಧಕ್ಕೆ ನಿಂತ ನೂರಾರು ಸರ್ಕಾರಿ ಯೋಜನೆಗಳು!
ಇಡೀ ಕರ್ನಾಟಕದ ರಾಜ್ಯದ ಅಭಿವೃದ್ಧಿ ನಕ್ಷೆಯಲ್ಲಿ ಬಳ್ಳಾರಿ ಜಿಲ್ಲೆಗೆ ಪ್ರಮುಖ ಸ್ಥಾನವಿದೆ. ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಿದೆ. ಅಭಿವೃದ್ಧಿ ಎಂಬುದು ನಿರಂತರ ಆಗಿರಬೇಕು. ಹಾಗೆ ಆದಾಗ ಮಾತ್ರ ಮುಂದಿನ ಪೀಳಿಗೆಗೆ ತಲುಪಲು ಸಾಧ್ಯ ಎಂದು ಬೊಮ್ಮಾಯಿ ಅವರು ಹೇಳಿದರು. ನಾನು ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಸಿಎಂ ಆಗಿರುವುದು ದೈವಿಚ್ಛೆ ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ನಮ್ಮ‌ ಹೈಕಮಾಂಡ್ ಕಾರಣ. ತಾವೆಲ್ಲರೂ ನೀಡಿದ ಜವಾಬ್ದಾರಿ ದೊಡ್ಡದಿದೆ ಎಂಬ ಅರಿವು ನನಗಿದೆ. ತಾವು ನನ್ನ ಮೇಲೆ ಹಾಕಿರುವ ಶಾಲು ತಮ್ಮ ಶ್ರೀರಕ್ಷೆ ಎಂದು ಭಾವಿಸಿರುವೆ. ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ನನ್ನ ಮೇಲಿಟ್ಟು ಕೊಂಡಿರುವ ನಿರೀಕ್ಷೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ