ಆ್ಯಪ್ನಗರ

ಪ್ರವೇಶಪತ್ರ ಸಿಗದಿದ್ದಕ್ಕೆ ಬಿಎಸ್‌ಸಿ ವಿದ್ಯಾರ್ಥಿ ಆತ್ಮಹತ್ಯೆ

ಪರೀಕ್ಷೆಗೆ ಕೂರಲು ಪ್ರವೇಶ ಪತ್ರ ಸಿಗದಿದ್ದರಿಂದ ಮನನೊಂದ ಬಿಎಸ್ಸಿ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದಾನೆ.

Vijaya Karnataka 22 Nov 2018, 5:00 am
ಬೆಂಗಳೂರು: ಪರೀಕ್ಷೆಗೆ ಕೂರಲು ಪ್ರವೇಶ ಪತ್ರ ಸಿಗದಿದ್ದರಿಂದ ಮನನೊಂದ ಬಿಎಸ್ಸಿ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದಾನೆ.
Vijaya Karnataka Web  1
ಪ್ರವೇಶಪತ್ರ ಸಿಗದಿದ್ದಕ್ಕೆ ಬಿಎಸ್‌ಸಿ ವಿದ್ಯಾರ್ಥಿ ಆತ್ಮಹತ್ಯೆ


ಜಗಜೀವನ್‌ರಾಮ್‌ನಗರದ ನಿವಾಸಿ ಶ್ರೇಯಸ್‌ (20) ಆತ್ಮಹತ್ಯೆ ಮಾಡಿಕೊಂಡವನು. ಖಾಸಗಿ ಕಾಲೇಜಿನಲ್ಲಿ 6ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ ಈತ ಭಾನುವಾರ ತಮ್ಮದೇ ಮನೆಯ ಮಲಗುವ ಕೋಣೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್‌ನೋಟ್‌ ಪೊಲೀಸರಿಗೆ ಸಿಕ್ಕಿದ್ದು, ಪ್ರವೇಶ ಪತ್ರ ಸಿಗದಿರುವುದೇ ಆತ್ಮಹತ್ಯೆಗೆ ಕಾರಣ ಎಂದು ಬರೆದಿಟ್ಟಿದ್ದಾನೆ.

''ನನಗೆ ಓದಿನಲ್ಲಿ ಆಸಕ್ತಿ ಇದ್ದರೂ, ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹಾಜರಾಗಲು ಸಾಧ್ಯ ಆಗುತ್ತಿರಲಿಲ್ಲ. ಈ ಕಾರಣದಿಂದ ನನ್ನ ಹಾಜರಾತಿಯಲ್ಲಿ ಕೊರತೆ ಇತ್ತು. ಇದರಿಂದಾಗಿ ಇಂಟರ್ನಲ್‌ ಅಂಕಗಳನ್ನು ನೀಡಿರಲಿಲ್ಲ. ಈ ಎಲ್ಲಾ ಸಮಸ್ಯೆಗಳಿಂದ ಸ್ವಂತಕ್ಕೆ ಓದಿಕೊಂಡರೂ ಅರ್ಥ ಆಗುತ್ತಿರಲಿಲ್ಲ. ಕೊನೆಗೆ ಪರೀಕ್ಷೆಗೆ ಕೂರಲು ಪ್ರವೇಶ ಪತ್ರ ಕೂಡ ಸಿಗಲಿಲ್ಲ. ಪ್ರವೇಶ ಪತ್ರ ಪಡೆಯಲು ದಂಡ ಕಟ್ಟಬೇಕಿತ್ತು. ಈ ಎಲ್ಲಾ ಸಮಸ್ಯೆಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ'' ಎಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.

ರಾತ್ರಿ ತನ್ನ ಮಲಗುವ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡವನು ಬೆಳಗ್ಗೆಯಾದರೂ ಹೊರಗೆ ಬರದಿದ್ದಾಗ ಪೋಷಕರು ಬಾಗಿಲು ಬಡಿದಿದ್ದರು. ಒಳಗಿನಿಂದ ಪ್ರತಿಕ್ರಿಯೆ ಬಾರದಿದ್ದಾಗ ಬಾಗಿಲು ಒಡೆದಿದ್ದರು. ಆ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ರವಾನೆ ಆಗಿತ್ತು. ಸ್ಥಳಕ್ಕೆ ಬಂದ ಪೊಲೀಸರಿಗೆ ಡೆತ್‌ನೋಟ್‌ ಸಿಕ್ಕಿದೆ. ಮೃತದೇಹವನ್ನು ಶವಪರೀಕ್ಷೆಗೆ ರವಾನಿಸಿರುವ ಜೆ.ಜೆ.ನಗರ ಠಾಣೆ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ