Please enable javascript.ವಿದ್ಯುತ್ ಕಳ್ಳತನ ಮಾಡಿದವರ ವಿರುದ್ಧ ಮೊಕದ್ದಮೆ, 2.31 ಕೋಟಿ ದಂಡ - ವಿದ್ಯುತ್ ಕಳ್ಳತನ ಮಾಡಿದವರ ವಿರುದ್ಧ ಮೊಕದ್ದಮೆ, 2.31 ಕೋಟಿ ದಂಡ - Vijay Karnataka

ವಿದ್ಯುತ್ ಕಳ್ಳತನ ಮಾಡಿದವರ ವಿರುದ್ಧ ಮೊಕದ್ದಮೆ, 2.31 ಕೋಟಿ ದಂಡ

ವಿಕ ಸುದ್ದಿಲೋಕ 22 May 2014, 4:02 am
Subscribe

ಬೆಸ್ಕಾಂ ಜಾಗೃತದಳದ ಸಿಬ್ಬಂದಿ ಏಪ್ರಿಲ್ ತಿಂಗಳಲ್ಲಿ ಬೆಸ್ಕಾಂ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ಕಳ್ಳತನ ಮಾಡುತ್ತಿದ್ದ 178 ಮಂದಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ 2.31 ಕೋಟಿ ದಂಡ ವಿಧಿಸಿದೆ.

 2 31
ವಿದ್ಯುತ್ ಕಳ್ಳತನ ಮಾಡಿದವರ ವಿರುದ್ಧ ಮೊಕದ್ದಮೆ, 2.31 ಕೋಟಿ ದಂಡ
ಬೆಂಗಳೂರು: ಬೆಸ್ಕಾಂ ಜಾಗೃತದಳದ ಸಿಬ್ಬಂದಿ ಏಪ್ರಿಲ್ ತಿಂಗಳಲ್ಲಿ ಬೆಸ್ಕಾಂ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ಕಳ್ಳತನ ಮಾಡುತ್ತಿದ್ದ 178 ಮಂದಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ 2.31 ಕೋಟಿ ದಂಡ ವಿಧಿಸಿದೆ.

ಬೆಸ್ಕಾಂ ಅನುಮತಿಯಿಲ್ಲದೆ, ಇಲ್ಲವೇ ಮೀಟರ್ ಅಳವಡಿಸದೇ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜತೆಗೆ ನಿಯಮಾನುಸಾರ ದಂಡ ಸಹ ವಿಧಿಸಲಾಗುವುದು.

ಮೀಟರ್ ದುರ್ಬಳಕೆ ಜತೆಗೆ ನೇರ ಸಂಪರ್ಕದ ಮೂಲಕ ವಿದ್ಯುತ್ ಸಂಪರ್ಕ ಪಡೆದಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಇದ್ದರೆ ಬೆಸ್ಕಾಂ ಜಾಗೃತದಳದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ವಿದ್ಯುತ್ ಕಳ್ಳತನದ ಬಗ್ಗೆ ನಿಖರವಾದ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು. ಅಪೇಕ್ಷೆಪಟ್ಟರೇ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕೆಳಗಿನ ವಿಳಾಸಕ್ಕೆ ಆಗಮಿಸಿ ನೇರವಾಗಿ ಮಾಹಿತಿ ನೀಡಬಹುದು.

ವಿಳಾಸ: ಪೊಲೀಸ್ ಅಧೀಕ್ಷಕರು, ಬೆಸ್ಕಾಂ ಜಾಗೃತದಳ, ಕ್ರಸೆಂಟ್‌ಟವರ್ಸ್‌, ಮಾಧವನಗರ, ಬೆಂಗಳೂರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ