ಆ್ಯಪ್ನಗರ

ಮಗು ಜೀವಕ್ಕೆ ಕಂಟಕಪ್ರಾಯವಾದ ಅಕ್ವೇರಿಯಂ‌ ಮೀನು

11 ತಿಂಗಳ ಮಗುವೊಂದು ಜೀವಂತ ಮೀನು ನುಂಗಿದ ಪ್ರಸಂಗ ಬೆಂಗಳೂರಿನಲ್ಲಿ ವರದಿಯಾಗಿದೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಬಚಾವಾಗಿದೆ.

Vijaya Karnataka 12 Jun 2018, 12:54 pm
ಬೆಂಗಳೂರು: 11 ತಿಂಗಳ ಮಗುವೊಂದು ಜೀವಂತ ಮೀನು ನುಂಗಿದ ಪ್ರಸಂಗ ಬೆಂಗಳೂರಿನಲ್ಲಿ ವರದಿಯಾಗಿದೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಬಚಾವಾಗಿದೆ.
Vijaya Karnataka Web live fish


ಅಚಾನಕ್‌ ಆಗಿ ಉಸಿರಾಟದ ಸಮಸ್ಯೆಯಿಂದ ಬಳಲತೊಡಗಿದ ಮಗುವನ್ನು ತಂದೆ- ತಾಯಿ ಕೊಲಂಬಿಯಾ- ಏಷ್ಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರಿಗೆ ಮಗು 5-6 ಸೆಂ.ಮೀ ಮೀನು ನುಂಗಿರುವುದು ಕಂಡುಬಂದಿದೆ. ಮೀನು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ ಮಗು ಉಸಿರಾಡಲು ಪರದಾಡುತ್ತಿತ್ತು.

ಆಸ್ಪತ್ರೆಗೆ ಕರೆ ತಂದಾಗ ಮಗುವಿನ ದೇಹ ನೀಲಿ ಬಣ್ಣಕ್ಕೆ ತಿರುಗಿದ್ದು, ಇನ್ನೇನು ಪ್ರಾಣ ಪಕ್ಷಿ ಹಾರಿ ಹೋಗಬೇಕೆನ್ನುವಷ್ಟರಲ್ಲಿ ಎಂಡೋಸ್ಕೋಪಿ ಮೂಲಕ ಮೀನನ್ನು ಹೊರತೆಗೆದು ಮಗುವನ್ನು ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಮೀನನ್ನು ತುಂಡು ತುಂಡಾಗಿಸಿ ಕತ್ತರಿಸಿ ಹೊರತೆಗೆಯಲಾಯಿತು. ತೀವ್ರ ಅಸ್ವಸ್ಥತೆಗೆ ಜಾರಿದ್ದ ಮಗುವಿಗೆ ವೆಂಟಿಲೇಟರ್ ಅಳವಡಿಸಿ, ಪೂರಕ ಔಷಧಿಗಳನ್ನೊದಗಿಸಿದ ಬಳಿಕ ಚೇತರಿಸಿಕೊಂಡಿತು. ಎರಡು ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಿದ ಬಳಿಕ ಸುಧಾರಿಸಿಕೊಂಡ ಮಗು ಸಹಜ ಸ್ಥಿತಿಗೆ ಮರಳಿತು. ಬಳಿಕವಷ್ಟೇ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು, ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಜೀವಂತ ಮೀನು ಸಿಕ್ಕಿದೆಲ್ಲಿಂದ


ಮನೆಯಲ್ಲಿ ಅಕ್ವೇರಿಯಂ‌ಗೆ ಕೈ ಹಾಕಿದ್ದ ಮಗು ಮೀನನ್ನು ಹಿಡಿದು ನುಂಗಿತ್ತು ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ