ಆ್ಯಪ್ನಗರ

ಕರ್ಫ್ಯೂ ಉಲ್ಲಂಘನೆ: 1680 ವಾಹನಗಳ ವಶ, ಸವಾರರಿಗೆ ನಡಿಗೆಯ ಶಿಕ್ಷೆ!

ಕರ್ಫ್ಯೂ ಉಲ್ಲಂಘಿಸಿದ ಕಾರಣಕ್ಕಾಗಿ 1680ಕ್ಕೂ ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದ್ದಾರೆ. ಬೈಕ್‌ಗಳನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಸವಾರರು ನಡೆದುಕೊಂಡೇ ಮನೆಗೆ ಮರಳಿದ್ದಾರೆ.

Vijaya Karnataka Web 30 Mar 2020, 7:15 am
ಬೆಂಗಳೂರು: ನಗರದಲ್ಲಿ ಕರ್ಫ್ಯೂ ಉಲ್ಲಂಘಿಸಿ ಅನವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡುತ್ತಿದ್ದ 1680ಕ್ಕೂ ಬೈಕ್‌ಗಳನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದ್ದಾರೆ.
Vijaya Karnataka Web bike


ಪೊಲೀಸರು ಪದೇ ಪದೆ ಎಚ್ಚರಿಕೆ ನೀಡುತ್ತಿದ್ದರೂ ಕ್ಯಾರೆ ಎನ್ನದೆ, ರಸ್ತೆಗಿಳಿದ 1680 ಮಂದಿಯಿಂದ ಬೈಕ್‌ಗಳನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿಸವಾರರು ನಡೆದುಕೊಂಡೇ ಮನೆಗೆ ಮರಳಿದರು.

ತುರ್ತು ಕಾರಣ ಇಲ್ಲದಿದ್ದರೆ ರಸ್ತೆಗೆ ಇಳಿಯಬೇಡಿ ಎಂದು ಪೊಲೀಸರ ಮನವಿಗೂ ಸ್ಪಂದಿಸದೆ ಮನೆಯಿಂದ ಹೊರಗೆ ಬಂದವರಿಂದ ಅವರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಉತ್ತರ ಡಿಸಿಪಿ ವಿಭಾಗದ 331 ವಾಹನಗಳೂ ಸೇರಿ ಒಟ್ಟು 1680ಕ್ಕೂ ಹೆಚ್ಚು ವಾಹನಗಳನ್ನು ತಡೆದು ನಿಲ್ಲಿಸಲಾಯಿತು. ಕಾರಣ ಕೇಳಿದಾಗ ಸಬೂಬು ಹೇಳಿದ್ದರಿಂದ ಸಂಜೆವರೆಗೂ ವಾಹನಗಳನ್ನು ವಶಕ್ಕೆ ಪಡೆದರು. ಸಂಜೆವರೆಗೂ ಒಂದೇ ಜಾಗದಲ್ಲಿ ಕಾಯುವ ಶಿಕ್ಷೆ ಅನುಭವಿಸಲಾರದೆ ನಡೆದುಕೊಂಡೇ ಮನೆಗೆ ವಾಪಾಸ್‌ ಹೋಗಬೇಕಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಗಳು, ಶುಕ್ರವಾರ, ಶನಿವಾರಕ್ಕೆ ಹೋಲಿಸಿದರೆ ಭಾನುವಾರ ಮನೆಯಿಂದ ಹೊರಗೆ ಬಂದವರ ಪ್ರಮಾಣ ಶೇ. 80ರಷ್ಟು ಕಡಿಮೆ ಆಗಿತ್ತು. ಭಾನುವಾರವಾದ್ದರಿಂದ ಹೆಚ್ಚು ಮಂದಿ ಹೊರಗೆ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅತಿ ಕಡಿಮೆ ಮಂದಿ ಹೊರಗೆ ಬಂದಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ,''ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ