ಆ್ಯಪ್ನಗರ

Marathahalli Flyover: 2.7 ಕಿಮೀ ಸಾಗಲು ಬೇಕು ಬರೋಬ್ಬರಿ 40 ನಿಮಿಷ! ಮಾರತ್ತಹಳ್ಳಿ ಫ್ಲೈಓವರ್‌ನಲ್ಲಿ ಸವಾರರ ಪರದಾಟ

ರಾಜಧಾನಿ ಬೆಂಗಳೂರು ಟ್ರಾಫಿಕ್‌ಗೆ ಹೆಸರುವಾಸಿ, ಇಷ್ಟು ದಿನ ಸಿಲ್ಕ್‌ ಬೋರ್ಡ್‌ ಟ್ರಾಫಿಕ್‌ ಅನ್ನು ಜನ ಟ್ರೋಲ್‌ ಮಾಡ್ತಿದ್ದರು. ಈಗ ಅದಕ್ಕೆ ಮಾರತ್ತಹಳ್ಳಿ ಫ್ಲೈಓವರ್‌ ಸೇರ್ಪಡೆಯಾಗಿದ್ದು, ಮಾರತ್ತಹಳ್ಳಿ ಫ್ಲೈಓವರ್‌ ಮೂಲಕ 2.7 ಕಿ.ಮೀ. ಸಾಗಲು ಬರೋಬ್ಬರಿ 40 ನಿಮಿಷ ಬೇಕಾಗುತ್ತಿದೆ. ಇದರಿಂದ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

Edited byಅವಿನಾಶ ವಗರನಾಳ | Vijaya Karnataka Web 29 Nov 2022, 8:41 pm

ಹೈಲೈಟ್ಸ್‌:


  • ಈ ಫ್ಲೈಓವರ್‌ನಲ್ಲಿ 2.7 ಕಿಮೀ ಸಾಗಲು ಬೇಕು ಬರೋಬ್ಬರಿ 40 ನಿಮಿಷ!
  • ಬೆಂಗಳೂರಿನ ಮಾರತ್ತಹಳ್ಳಿ ಫ್ಲೈಓವರ್‌ನಲ್ಲಿ ನಿತ್ಯ ಸವಾರರ ಪರದಾಟ
  • ಬೆಳಗ್ಗೆ 9 ರಿಂದ 11 ರವರೆಗಿನ ಪೀಕ್‌ ಅವರ್‌ನಲ್ಲಿ ಟ್ರಾಫಿಕ್ಕೋ ಟ್ರಾಫಿಕ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web marathahalli flyover
ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಟ್ರಾಫಿಕ್‌ ಜಾಮ್‌ ವಾಹನ ಸವಾರರು ಹಾಗೂ ಸ್ಥಳೀಯರನ್ನು ಹೈರಾಣಾಗಿಸಿದೆ. ಪೀಕ್‌ ಅವರ್‌ಗಳಲ್ಲಿ ಮಾರತ್ತಹಳ್ಳಿ ಫ್ಲೈಓವರ್‌ ಮೂಲಕ 2.7 ಕಿ.ಮೀ. ಸಾಗಲು ಬರೋಬ್ಬರಿ 40 ನಿಮಿಷ ಬೇಕಾಗುತ್ತಿದೆ ಎಂಬುದು ರಿಯಾಲಿಟಿ ಚೆಕ್‌ ವೇಳೆ ಬಹಿರಂಗವಾಗಿದೆ.
ಬೆಳಗ್ಗೆ 9 ರಿಂದ 11 ರವರೆಗೆ ಯಮಲೂರು ಜಂಕ್ಷನ್‌ ನಿಂದ ಕುಂದಲಹಳ್ಳಿ ಅಂಡರ್‌ಪಾಸ್‌ವರೆಗೆ 2 ಕಿಮೀ ದಾಟಲು ವಾಹನ ಸವಾರರು ಕನಿಷ್ಠ 30 ನಿಮಿಷ ತೆಗೆದುಕೊಳ್ಳುತ್ತಾರೆ. ಪೂರ್ವದಿಂದ ಆಗ್ನೇಯ ಭಾಗಕ್ಕೆ ಹೋಗುವ ಮಾರ್ಗದಲ್ಲಿ ಕನಿಷ್ಠ ಮೂರು ದಟ್ಟಣೆ ಸ್ಥಳಗಳಿವೆ. 2019ರಿಂದ ಸಿಗ್ನಲ್‌ ಫ್ರೀ ಕಾರಿಡಾರ್‌ಗಾಗಿ ಕಾಮಗಾರಿ ನಡೆಯುತ್ತಿರುವ ವಿಮಾನಪುರ ಅಂಚೆ ಕಚೇರಿ ಬಳಿ ಕನಿಷ್ಠ 10 ನಿಮಿಷ ವಾಹನ ದಟ್ಟಣೆಯಲ್ಲಿ ಸಾಗಬೇಕಿದೆ.

ಬಳಿಕ ಯಮಲೂರು ಜಂಕ್ಷನ್‌ನಲ್ಲಿ ಸಾಗಲು ಸವಾರರು ಹರಸಾಹಸ ಪಡಬೇಕಿದೆ. ಇಲ್ಲಿ ವಾಹನ ಸವಾರರು ಯು-ಟರ್ನ್‌ ತೆಗೆದುಕೊಳ್ಳುವಾಗ ಟ್ರಾಫಿಕ್‌ ಹೆಚ್ಚುತ್ತದೆ. ಮಾರತ್ತಹಳ್ಳಿ ಮಾರುಕಟ್ಟೆ ಕಡೆಗೆ ಹೋಗಲು ವಾಹನಗಳು ಯು-ಟರ್ನ್‌ ತೆಗೆದುಕೊಳ್ಳುವುದರಿಂದ ವಾಹನಗಳು ಮುಂದುವರಿಯಲು ಅಡ್ಡಿಯಾಗುತ್ತದೆ. ಜಂಕ್ಷನ್‌ ಮತ್ತು ಯು-ಟರ್ನ್‌ ನಡುವೆ 600-800 ಮೀಟರ್‌ ಅನ್ನು ಪೂರ್ತಿಗೊಳಿಸಲು 15 ನಿಮಿಷಗಳು ಬೇಕಾಗುತ್ತದೆ.

ಇಲ್ಲಿಂದ ಕಾಡು ಬೀಸನಹಳ್ಳಿ ಮತ್ತು ಸರ್ಜಾಪುರ ಕಡೆಗೆ ಹೋಗಲು ಬಯಸುವವರು ಫ್ಲೈಓವರ್‌ ಮೇಲೆ ಹತ್ತಬಹುದು. ಇದರಿಂದ ಮತ್ತು ಸುಮಾರು 1.5 ಕಿ.ಮೀ ಮುಂದೆ ಇರುವ ಕುಂದಲಹಳ್ಳಿ ಅಂಡರ್‌ಪಾಸ್‌ವರೆಗೆ ಪ್ರಯಾಣಿಸಬಹುದು. ಅಲ್ಲಿ ಯು-ಟರ್ನ್‌ ಮಾಡಿ , ಕೆಎಲ್‌ಎಂ ಫ್ಯಾಶನ್ಸ್‌ನಿಂದ ಮೊದಲು ಸಿಗುವ ಎಡ ತಿರುವನ್ನು ತೆಗೆದುಕೊಳ್ಳಬಹುದು.

Hebbal Flyover: ಹೆಬ್ಬಾಳ ಫ್ಲೈಓವರ್‌ನಲ್ಲಿ ತಗ್ಗಿದ ಟ್ರಾಫಿಕ್‌ ಸಮಸ್ಯೆ; ಬೆಳಗ್ಗೆ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಬ್ರೇಕ್‌
ಇನ್ನೊಂದು ಉಪಾಯವೆಂದರೆ ವಾಹನ ಸವಾರರು ಫ್ಲೈಓವರ್‌ ಪ್ರಾರಂಭದಿಂದ ಔಟರ್‌ ರಿಂಗ್‌ ರೋಡ್‌ ಕಡೆಗೆ ಎಡಕ್ಕೆ ತೆಗೆದುಕೊಳ್ಳಬಹುದು. ಬಳಿಕ ಮೆಟ್ರೋ ನಿರ್ಮಾಣದ ಸ್ಥಳವನ್ನು ಹಾದು ಹೋದ ನಂತರ ಯು-ಟರ್ನ್‌ ತೆಗೆದುಕೊಂಡು ನೇರವಾಗಿ ಕಾಡುಬೀಸನಹಳ್ಳಿ ಕಡೆಗೆ ಪ್ರಯಾಣಿಸಬಹುದು.

ಆದರೆ, ಇಲ್ಲೂ ವಾಹನ ಸವಾರರು ದಟ್ಟಣೆ ಬಿಸಿ ಅನುಭವಿಸಬೇಕಾಗಬಹುದು. ಬೆಳಗ್ಗೆ ವೇಳೆ ಕಾಡುಬೀಸನಹಳ್ಳಿ ಅಥವಾ ಸರ್ಜಾಪುರ ಕಡೆಗೆ ಹೋಗುವ ವಾಹನಗಳ ಸಂಖ್ಯೆ ಹೆಚ್ಚಿರುತ್ತದೆ. ಫ್ಲೈ ಓವರ್‌ನ ಕೆಳಗೆ ಎಡಕ್ಕೆ ಹೋಗುವ ವಾಹನಗಳು ನೇರವಾಗಿ ಹೋಗುವ ವಾಹನಗಳನ್ನು ಅಡ್ಡಗಟ್ಟುತ್ತವೆ. ಅದೇ ರೀತಿ ಕುಂದಲಹಳ್ಳಿಯಲ್ಲಿ ಯು-ಟರ್ನ್‌ ಮಾಡುವವರು ಇತರರಿಗೆ ಅಡ್ಡಬಂದು ಅಲ್ಲಿಯೂ ಕಾಯುವಂತೆ ಮಾಡುತ್ತಾರೆ.

Hebbal Flyover: ಹೆಬ್ಬಾಳ ಫ್ಲೈ ಓವರ್ ಸಂಕಷ್ಟ: 10 ಮಾರ್ಗ ಎರಡಾಗಿದ್ದೇ ಟ್ರಾಫಿಕ್ ಜಾಮ್‌ಗೆ ಕಾರಣ
ಆದ್ದರಿಂದ ದಟ್ಟಣೆಯ ಸಮಯದಲ್ಲಿ1 ಕಿಮೀ ಫ್ಲೈಓವರ್‌ ಅನ್ನು ದಾಟಲು 10 ರಿಂದ 20 ನಿಮಿಷಗಳು ಬೇಕಾಗಬಹುದು. ಪ್ಲೈಓವರ್‌ನಿಂದ 500 ಮೀಟರ್‌ ದೂರದಲ್ಲಿರುವ ಅಂಡರ್‌ಪಾಸ್‌ ತಲುಪಲು ಇನ್ನೂ 10 ನಿಮಿಷ ಬೇಕಾಗಬಹುದು.

ಟ್ರಾಫಿಕ್‌ ಜಾಮ್‌ಗೆ ಟ್ರೋಲ್‌!
ಈ ಹಿಂದೆ ಟ್ರಾಫಿಕ್‌ ಜಾಮ್‌ ಸಮಸ್ಯೆಯಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಅನ್ನು ಜನ ಟ್ರೋಲ್‌ ಮಾಡುತ್ತಿದ್ದರು. ಬೆಂಗಳೂರಿನ ಬಹುತೇಕ ಕಡೆ ಟ್ರಾಫಿಕ್‌ ಜಾಮ್‌ ಸಮಸ್ಯೆಯಿಂದ ವಾಹನ ಸವಾರರು ಕಂಗಾಲಾಗಿದ್ದಾರೆ. ಪ್ರಮುಖ ಫ್ಲೈಓವರ್‌ಗಳೆಲ್ಲಾ ವಾಹನಗಳಿಂದ ತುಂಬಿ ತುಳುಕುತ್ತಿದ್ದು, ಮಾರತ್ತಹಳ್ಳಿ ಫ್ಲೈಓವರ್‌ ಮೇಲೆಯೂ ಟ್ರಾಫಿಕ್‌ ಹೆಚ್ಚಿದೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ