ಆ್ಯಪ್ನಗರ

ದಾಖಲೆ ಇಲ್ಲದ 20 ಲಕ್ಷ ರೂ. ಜಪ್ತಿ

ಕಾರಿನಲ್ಲಿ ಸಾಗಿಸಲಾಗುತ್ತಿದ್ದ ದಾಖಲೆ ಇಲ್ಲದ 20 ಲಕ್ಷ ರೂ. ನಗದನ್ನು ಮೈಕೋ ಲೇಔಟ್‌ ಪೊಲೀಸರು, ಬನ್ನೇರುಘಟ್ಟ ರಸ್ತೆ ರೂಬಿ ಜಂಕ್ಷನ್‌ನಲ್ಲಿ ಜಪ್ತಿ ಮಾಡಿದ್ದಾರೆ.

Vijaya Karnataka 2 May 2018, 5:00 am
ಬೆಂಗಳೂರು: ಕಾರಿನಲ್ಲಿ ಸಾಗಿಸಲಾಗುತ್ತಿದ್ದ ದಾಖಲೆ ಇಲ್ಲದ 20 ಲಕ್ಷ ರೂ. ನಗದನ್ನು ಮೈಕೋ ಲೇಔಟ್‌ ಪೊಲೀಸರು, ಬನ್ನೇರುಘಟ್ಟ ರಸ್ತೆ ರೂಬಿ ಜಂಕ್ಷನ್‌ನಲ್ಲಿ ಜಪ್ತಿ ಮಾಡಿದ್ದಾರೆ.
Vijaya Karnataka Web 20 lakh without document confiscation
ದಾಖಲೆ ಇಲ್ಲದ 20 ಲಕ್ಷ ರೂ. ಜಪ್ತಿ


ರೂಬಿ ಜಂಕ್ಷನ್‌ನಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ನಲ್ಲಿ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಬಂದ ಇನ್ನೋವಾ ಕಾರನ್ನು ತಡೆದು ತಪಾಸಣೆ ನಡೆಸಿದಾಗ 2 ಸಾವಿರ ರೂ. ನೋಟುಗಳ ರೂಪದಲ್ಲಿ 20 ಲಕ್ಷ ರೂ. ಸಿಕ್ಕಿದೆ. ಮಾಲೀಕರಾದ ಮಂಗಮ್ಮನಪಾಳ್ಯ ನಿವಾಸಿ ಸೈಯ್ಯದ್‌ ಆಸೀಫ್‌ ಎಂಬುವರನ್ನು ವಿಚಾರಣೆ ನಡೆಸಿದಾಗ, ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಿದ್ದು ಅದಕ್ಕೆ ಸಂಬಂಧಿಸಿದ ಹಣ ಎಂದು ತಿಳಿಸಿದ್ದಾರೆ. ಈ ಕುರಿತು ದಾಖಲೆಗಳನ್ನು ಕೇಳಿದಾಗ ಅವರ ಬಳಿ ದಾಖಲೆ ಇರಲಿಲ್ಲ. ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೈಕೋ ಲೇಔಟ್‌ ಠಾಣೆ ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ